ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜಾತ್ರೋತ್ಸವದ ಸಂಭ್ರ‌ಮ – ಜ.16ರಂದು ಷಷ್ಠಿ ಉತ್ಸವ

0

ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ಜ.14ರಿಂದ ಜ.16ರವರೆಗೆ ನಡೆಯಲಿರುವ ವರ್ಷವಧಿ ಜಾತ್ರೋತ್ಸವದ ಎರಡನೇ ದಿನವಾದ ಜ.15ರಂದು ಬೆಳಗ್ಗೆ ಆಶ್ಲೇಷಾ ಬಲಿ ಪ್ರಾರಂಭಗೊಂಡಿತು.

ಬಳಿಕ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಬೆಳಗ್ಗೆ ಆರು ಗಂಟೆಯಿಂದ ಅರ್ಧ ಏಕಾಹ ಭಜನೆ ಆರಂಭಗೊಂಡಿತು.

ವಿವಿಧ ಭಜನಾ ತಂಡಗಳಿಂದ ಭಜನೆ, ಕುಣಿತ ಭಜನೆ ನಡೆಯಿತು ಈ ಸಂದರ್ಭದಲ್ಲಿ ಊರಪರವೂರ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here