ಪುತ್ತೂರು: ಪಾಣಾಜೆ ಗ್ರಾಮ ಪಂಚಾಯತ್ನಲ್ಲಿ ವಿಕಲಚೇತನರ ಗ್ರಾಮಸಭೆ ನಡೆಯಿತು. ಪಂಚಾಯತ್ ವಿಕಲಚೇತನರ ಬಹುಮಟ್ಟದ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ವಿಕಲಚೇತನರ ಇಲಾಖೆಯ ಮಾಹಿತಿ ನೀಡಿದರು. ಪಾಣಾಜೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಅಬ್ದುಲ್ ಆಜೀಜ್ ಗ್ರಾಮ ಪಂಚಾಯತ್ ಮಟ್ಟದ ವಿಕಲಚೇತನರ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ, ಕಾರ್ಯದರ್ಶಿ ಆಶಾ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಕಲಚೇತನರು, ಪೋಷಕರು, ಆಶಾಕಾರ್ಯಕರ್ತರು, ನಿಡಳ್ಳಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ರಾಮ, ಬೆಟ್ಟಪಾಂಡಿ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತೆ ರಾಧಾವತಿ, ಸಂಜೀವಿನಿ ಸಂಘದ ಸದ್ಯಸರು ಸಹಕರಿಸಿದರು. ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.