ಜ.20 -21: ಸವಣೂರಿನಲ್ಲಿ ಜಿಲ್ಲಾ ಯುವ ಜನಮೇಳ-ಮೇಳದ ಸಿದ್ಧತೆಯ ಕುರಿತು ಸಂಸದರೊಂದಿಗೆ ಸಮಾಲೋಚನೆ

0

ಪುತ್ತೂರು : ಸವಣೂರಿನಲ್ಲಿ ಜ. 20 ಮತ್ತು‌ 21 ರಂದು ಅದ್ದೂರಿಯಾಗಿ ದ.ಕ.ಜಿಲ್ಲಾ ಮಟ್ಟದ ಯುವಜನ ಮೇಳ ನಡೆಯಲಿದ್ದು, ಇದರ ಸಿದ್ಧತೆ ಮತ್ತು ಕಾರ್ಯಕ್ರಮದ ಬಗ್ಗೆ ಈ ತನಕ ನಡೆದ ಎಲ್ಲಾ ವಿವರಗಳನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ರವರಿಗೆ ದ.ಕ.ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳುರವರು ವಿವರಿಸಿದರು.

ಪಂಜ ಸಮೀಪದ ಬಲ್ಪದಲ್ಲಿ ಜರಗಿದ ಕಾರ್ಯಕ್ರಮವೊಂದರಲ್ಲಿ ಸಂಸದರನ್ನು ಭೇಟಿಯಾಗಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುವಲ್ಲಿ ಸಂಸದರ ಸಹಕಾರವನ್ನು ಸುರೇಶ್ ರೈ ರವರು ಕೋರಿದರು. ಈ ಬಗ್ಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ ರವರು‌ ಸವಣೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಯುವ ಜನ ಮೇಳ ಯುವ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಈ ಕಾರ್ಯಕ್ರಮ ‌ ಮಾದರಿ ಕಾರ್ಯಕ್ರಮವಾಗಿ ಹೆಸರನ್ನು ತರಲಿ ಎಂದು ಹಾರೈಸಿ, ಕಾರ್ಯಕ್ರಮದಲ್ಲಿ ಪೂರ್ಣ ರೀತಿಯಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಯುವ ಜನ ಒಕ್ಕೂಟದ ನಿರ್ದೇಶಕ ರಾಕೇಶ್ ರೈ ಕೆಡೆಂಜಿ, ಸವಣೂರು ಸಾಹಿತ್ಯ ವೇದಿಕೆಯ ಸ್ಥಾಪಕಾಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲುರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here