ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಕಾಂಗ್ರೆಸ್ ತೆಕ್ಕೆಗೆ-ಹೆಚ್. ಮಹಮ್ಮದ್ ಆಲಿ 3 ನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ

0

ಪುತ್ತೂರು: ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 12 ನಿರ್ದೇಶಕರ ಸ್ಥಾನಕ್ಕೆ ಹಾಲಿ ಅಧ್ಯಕ್ಷರಾದ ಎಚ್. ಮಹಮ್ಮದ್ ಆಲಿಯವರ ನೇತೃತ್ವದ 12 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.


ಜ.7ರಂದು ಅವಿರೋಧವಾಗಿ ಆಯ್ಕೆಯಾಗಿದ್ದು ಜ.15 ರಂದು ಸಹಕಾರಿ ಸಂಘದ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಹಾಲಿ ಆಧ್ಯಕ್ಷ ಹೆಚ್. ಮಹಮ್ಮದ್ ಆಲಿಯವರು ಮುಂದಿನ 5 ವರ್ಷಗಳ ಆಡಳಿತ ಆವಧಿಗೆ ಅಧ್ಯಕ್ಷರಾಗಿ 3ನೇ ಬಾರಿಗೆ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಉಪಾಧ್ಯಕ್ಷರಾಗಿ ಬಿ ಸುರೇಂದ್ರ ರೈ ಬಳ್ಳಮಜಲು ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನೂತನ ನಿರ್ದೇಶಕರುಗಳಾದ ಶಂಶುದ್ದಿನ್ ನೀರ್ಕಜೆ, ರಂಜಿತ್ ಬಂಗೇರ ಕೆ ಸಂಪ್ಯ, ಗಣೇಶ್ ರೈ ಮೂಲೆ ಆರ್ಯಾಪು, ಸದಾನಂದ ಶೆಟ್ಟಿ. ಕೂರೇಲು, ಚಂದ್ರಕಲಾ ಪಿ. ಓಟೆತ್ತಿಮಾರು, ತೆರೆಜಾ ಎಮ್ ಸಿಕ್ವೇರಾ ಮರೀಲು, ಇಸ್ಮಾಯಿಲ್ ಎಮ್. ಮಲಾರು, ಗಣೇಶ್ ರೈ ಬಳ್ಳಮಜಲು, ಶೀನಪ್ಪ ಮರಿಕೆ ಮತ್ತು ತಿಮ್ಮಪ್ಪ ನಾಯ್ಕ ಎ.ಜಂಗಮೊಗೇರು ಉಪಸ್ಥಿತರಿದ್ದರು. ರಿಟರ್ನಿಂಗ್ ಅಧಿಕಾರಿ ಹಾಗೂ ಸಹಕಾರಿ ಇಲಾಖೆಯ ಅಧೀಕ್ಷಕರಾದ ಬಿ. ನಾಗೇಂದ್ರ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.


ಹೆಚ್. ಮಹಮ್ಮದ್ ಆಲಿ ಅವರ ಅಧ್ಯಕ್ಷತೆಯ ಸಹಕಾರಿ ಸಂಘದ ಆಡಳಿತ ಮಂಡಳಿಯು ಕಳೆದ 10 ವರ್ಷಗಳಲ್ಲಿ ಸಹಕಾರಿ ಸಂಘದ ಅಭಿವೃದ್ದಿಗೆ ಗಣನೀಯವಾದ ಸೇವೆ ಸಲ್ಲಿಸಿ ಸತತವಾಗಿ 5 ಬಾರಿ ತನ್ನ ಸಾಧನೆಗಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ನೀಡಲಾಗುವ ಅತ್ಯುತ್ತಮ ಸಹಕಾರಿ ಸಂಘ ಎಂಬ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ತನ್ನ ಆಡಳಿತ ಅವಧಿಯಲ್ಲಿ ಜನಸ್ನೇಹಿ ಹಾಗೂ ಪಾರದರ್ಶಕ ಆಡಳಿತವನ್ನು ನೀಡಿದ್ದು ಜಾತಿ,ಮತ ಪಕ್ಷಬೇಧ ಮಾಡದೆ ಸರಕಾರದ ಯೋಜನೆಗಳು ಮತ್ತು ಸಾಲ ಸೌಲಭ್ಯಗಳನ್ನು ರೈತರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಜನಪ್ರಿಯರಾಗಿದ್ದರು. ಸಹಕಾರಿ ಸಂಘವನ್ನು ಅರ್ಥಿಕವಾಗಿ ಸದೃಡಗೊಳಿಸಲು ಯಶ್ವಸ್ವಿಯಾಗಿದ್ದ ಹೆಚ್ ಮಹಮ್ಮದ್ ಆಲಿ ಅವರಿಗೆ ಸಹಕಾರಿ ಸಂಘದ ಸರ್ವ ಸದಸ್ಯರ ಪ್ರೀತಿ ವಿಶ್ವಾಸ ಹಾಗೂ ಬೆಂಬಲವನ್ನು ಪಡಕೊಂಡವರಾಗಿರುತ್ತಾರೆ.

LEAVE A REPLY

Please enter your comment!
Please enter your name here