ಪುತ್ತೂರು: ಕಬಕ ಗ್ರಾಮದ ವಿದ್ಯಾಪುತ ನಾಲ್ಕನೇ ಬ್ಲಾಕ್ ರಸ್ತೆ ಕಾಂಕ್ರೀಟೀಕರಣಕ್ಕೆ ಶಾಸಕರಿಂದ 10 ಲಕ್ಷ ಮಂಜೂರಾಗಿದ್ದು, ಕಾಮಗಾರಿಗೆ ಗುದ್ದಲಿಪೂಜೆ ನಡೆಯಿತು.
ಬಳಿಕ ಮಾತನಾಡಿದ ಶಾಸಕರು ಗ್ರಾಮಾಂತರ ರಸ್ತೆಗಳ ಕಾಂಕ್ರಿಟೀಕರಣಕ್ಕೆ ಸರಕಾರ ಒತ್ತು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಒಳ ರಸ್ತೆಗಳ ಪೂರ್ಣ ಅಭಿವೃದ್ದಿ ನಡೆಯಲಿದೆ ಎಂದು ಹೇಳಿದರು. ಕಬಕ ಗ್ರಾಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು ಅಂಗನವಾಡಿ, ರಸ್ತೆ ಸೇರಿ ಒಟ್ಟು 40 ಲಕ್ಷಕ್ಕೂ ಮಿಕ್ಕಿಅನುದಾನ ಏಕಕಾಲದಲ್ಲಿ ಬಿಡುಗಡೆಯಾಗಿದೆ ಎಂದು ಹೇಳಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಂ ಕೆ ಬಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಉದ್ಯಮಿ ಪ್ರವೀಣ್ ಅಳಕೆಮಜಲು, ವಲಯಾಧ್ಯಕ್ಷ ದಾಮೋದರ ಕಬಕ, ಗ್ರಾ.ಪಂ ಸದಸ್ಯ ಫಾರೂಕ್ ತವಕ್ಕಲ್, ನಝೀರ್, ಸಾಬ ಕಬಕ, ಕೇಶವಪೆಲತ್ತಡಿ, ಉಮ್ಮರ್ ಫಾರೂಕ್ ಕಬಕ, ಆದಂ ಕೆದುವಡ್ಕ, ಅಮ್ಮಿ ಮೌಲಾ, ಆಸಿಫ್ ಕೆ ಎಸ್, ಅನ್ವರ್ ಕಬಕ, ಸುಮಯ್ಯಾ ಕಬಕ ಮೊದಲಾದವರು ಉಪಸ್ಥಿತರಿದ್ದರು.