ಪುತ್ತೂರಿನಲ್ಲಿ ಕೆ.ಎಚ್ ಎಲೆಕ್ಟ್ರಿಕಲ್ ಶುಭಾರಂಭ

0

ಪುತ್ತೂರು: ಕೆ.ಎಚ್ ಎಲೆಕ್ಟ್ರಿಕಲ್ ನೂತನ ಸಂಸ್ಥೆ ಪುತ್ತೂರು ಎಸ್.ಎಂ ಕಾಂಪ್ಲೆಕ್ಸ್‌ನಲ್ಲಿ ಜ.15ರಂದು ಶುಭಾರಂಭಗೊಂಡಿತು. ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಅವರು ಉದ್ಘಾಟಿಸಿ ದುವಾ ನೆರವೇರಿಸಿದರು.
ಹಾರಿಸ್ ಕೆ.ಎಚ್, ಮಹಮೂದ್ ಮುಸ್ಲಿಯಾರ್, ವಿ.ಕೆ ಶರೀಫ್ ಬಪ್ಪಳಿಗೆ, ರಫೀಕ್ ಅಲ್‌ರಾಯಾ, ಅಶ್ಪಕ್ ಬಪ್ಪಳಿಗೆ, ಶಾಹುಲ್ ಹಮೀದ್ ಪಡೀಲ್, ಕೆ.ಎಚ್ ಅಬ್ದುಲ್ ರಹಿಮಾನ್, ಗುತ್ತಿಗೆದಾರ ಲೋಕೇಶ್, ಸಮಿತ್ ಕುಂಬ್ರ, ಹಮೀದ್ ಬೊಳ್ವಾರ್, ಅಬ್ಬಾಸ್ ಮುಸ್ಲಿಯಾರ್ ಬೊಳ್ಳಾಡಿ, ಅರಬ್ಬಿ ಕುಂಞಿ ಮಗಿರೆ, ನಾಸಿರ್ ಅಲ್‌ರಾಯಾ ಮತ್ತಿತರರು ಆಗಮಿಸಿ ಶುಭ ಹಾರೈಸಿದರು.

ಅತಿಥಿಗಳನ್ನು ಸ್ವಾಗತಿಸಿದ ಕೆ.ಎಚ್ ಎಲೆಕ್ಟ್ರಿಕಲ್‌ನ ಮಾಲಕ ಹಾಜಿ ಕೆ.ಎಚ್ ಅಬ್ದುಲ್ ಜಲೀಲ್ ಕುಂಬ್ರ ಮಾತನಾಡಿ ನಮ್ಮಲ್ಲಿ ಕೆಎಂಪಿ, ಸೆಪ್ಟೋ, ಸಾರ್ಡ್ ಮಹೇಂದ್ರ ಕಂಪೆನಿಗಳ ಬೋರ್‌ವೆಲ್ ಪಂಪು, ಓಪನ್‌ವೆಲ್, ಮನೋಬುಲಕ್ ಪಂಪುಗಳು, ಬೋರ್‌ವೆಲ್ ಪೈಪ್‌ಗಳು, ಕಬ್ಬು ಜ್ಯೂಸ್ ಮಿಶನ್, ಕಿಚನ್ ಕ್ಲೀನ್ ಮಿಶನ್, ಬೈಕ್, ಕಾರ್ ವಾಶ್ ಮಿಶನ್, ಎಸ್‌ಎಸ್ ಗ್ರೈಂಡರ್ ಕಂಪ್ರೆಶರ್ ಮೊದಲಾದವುಗಳು ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here