ಕಾಣಿಯೂರು: ಕಾಣಿಯೂರಿನಿಂದ ಮಾದೋಡಿ ಮೂಲಕ ಪೆರುವಾಜೆ, ಬೆಳ್ಳಾರೆ,ನೀರಜರಿ ಮೂಲಕ ಅಮೈಗೆ, ಪ್ರಗತಿ ವಿದ್ಯಾಸಂಸ್ಥೆ, ಲಕ್ಷ್ಮಿ ನರಸಿಂಹ ಭಜನಾ ಮಂದಿರ ಮೊದಲಾದ ಕಡೆ ಸಂಪರ್ಕ ಕಲ್ಪಿಸುವ ರಸ್ತೆ ಕಾಣಿಯೂರು ಪ್ರಗತಿ ಶಾಲೆಯ ಬಳಿ ರೈಲ್ವೇ ಸೇತುವೆ ಕೆಳಗಡೆ ಹಾದು ಹೋಗುತ್ತಿದ್ದ ಈ ಸ್ಥಳವು ತೀರಾ ಅಪಾಯಕಾರಿಯಾಗಿದ್ದು, ಎರಡು ಕಡೆಯಿಂದ ವಾಹನಗಳು ಬಂದರೆ ಹೋಗಲು ಅಸಾಧ್ಯವಾಗುತ್ತಿದ್ದು ಇದಕ್ಕಾಗಿ ಒಂದು ಕಡೆಯಿಂದ ಬರುವ ವಾಹನ ಇನ್ನೊಂದು ಕಡೆ ಗೆ ಕಾಣುವಂತೆ ಸುರಕ್ಷತಾ ಮಸೂರ (ಕನ್ನಡಿ )ವನ್ನು ರೈಲ್ವೆ ಸೇತುವೆ ಕೆಳಗಡೆ ಪ್ರಗತಿ ವಿದ್ಯಾಸಂಸ್ಥೆ ಮತ್ತು ಗೆಳೆಯರ ಬಳಗ ಕೊಡಿಮಾರು ಅಬೀರ ಇವರ ವತಿಯಿಂದ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಪ್ರಗತಿ ವಿದ್ಯಾಸಂಸ್ಥೆಯ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಅಬೀರ,ಗೆಳೆಯರ ಬಳಗದ ಗೌರವಾಧ್ಯಕ್ಷ ರಾದ ರಂಜಿತ್ ಹೊಸೊಕ್ಲು, ಕಾರ್ಯದರ್ಶಿ ಪ್ರೀತಮ್ ಕಂಡೂರು, ಪ್ರಮೋದ್ ನೀರಜರಿ, ಬಾಲಚಂದ್ರ ಅಬೀರ, ದಿನೇಶ್ ಅಬೀರ,ಶೇಖರ ಅಬೀರ, ಮನೋಜ್ ಬರೆಮೇಲು, ಸುಧಾಕರ ಕಂಡೂರು ಉಪಸ್ಥಿತರಿದ್ದರು.ವಸಂತ ರೈ ಕಾರ್ಕಳ, ಲೋಕೇಶ್.ಕೆ,ಶ್ರೀನಿತ್ ಮಿಪಾಲು, ಮೋಹಿತ್ ಅಬೀರ, ಹರೀಶ್ ಕಾನಾವು ಸಹಕರಿಸಿದರು.