ಗಣರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಭಾಷಣ, ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ

0

ಪುತ್ತೂರು: ಗಣರಾಜ್ಯೋತ್ಸವದ ಮಹತ್ವ ಯುವ ಜನತೆಗೆ ತಿಳಿಯಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಪುತ್ತೂರು ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ನೇತೃತ್ವದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಚಾಲಕತ್ವದಲ್ಲಿ “ಗಣರಾಜ್ಯೋತ್ಸವದ” ಪ್ರಯುಕ್ತ ಪುತ್ತೂರು ತಾಲೂಕಿನ ಪ್ರಾಥಮಿಕ,ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ , ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಐ.ಎ.ಎಸ್ ಅವರ ಸೂಚನೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರ ಮಾರ್ಗದರ್ಶನ ಪ್ರಕಾರ ಏರ್ಪಡಿಸಲಾಗಿದೆ.

ನಿಯಮಗಳು
1.ಈ ಮೂರು ಸ್ಪರ್ಧೆಗಳ ವಿಷಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಅದರ ಮಹತ್ವ.
2. ಪ್ರಬಂಧ 400 ರಿಂದ 600 ಪದಗಳ ಮಿತಿಯಲ್ಲಿರಬೇಕು.
3. ಚಿತ್ರವನ್ನು ಕಪ್ಪು ಬಿಳುಪು ಅಥವಾ ಬಣ್ಣದ ಪೆನ್ಸಿಲ್/ ವಾಟರ್ ಕಲರ್ / ಇತ್ಯಾದಿ ಉಪಯೋಗಿಸಬಹುದು.
4. ಭಾಷಣಕ್ಕೆ ಮೂರು ನಿಮಿಷದ ಕಾಲಾವಕಾಶ.

ಶಿಕ್ಷಕರು ಸ್ಪರ್ಧೆಯನ್ನು ಆಯಾ ಶಾಲಾ / ಕಾಲೇಜು ಮಟ್ಟದಲ್ಲಿ ಆಯಾ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಆಯೋಜಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತರನ್ನು ಆಯ್ಕೆ ಮಾಡಿ 23-01-2024ರ ಸಂಜೆ 5:00 ಒಳಗಾಗಿ ಶಾಲೆಯ ಹೆಸರು ಹಾಗೂ ವಿಜೇತರ ಹೆಸರು ಹಾಗೂ ಶಾಲಾ ಮುಖ್ಯಸ್ಥರ ಹೆಸರು ಹಾಗೂ ದೂರವಾಣಿ ಸಂಪರ್ಕವನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ 9844401295 ಗೆ ರವಾನಿಸಬಹುದು. ನಂತರ ಬಂದ ಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ. ವಿಜೇತ ವಿದ್ಯಾರ್ಥಿಗಳಿಗೆ 26 -01-2024 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಣ್ಯರಿಂದ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here