ಪಡುಮಲೆ ಕಿನ್ನಿಮಾಣಿ ದೈವದ ನೇಮೋತ್ಸವ

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಅಂಗವಾಗಿ ಬದಿನಾರು ಶ್ರೀ ಪೂಮಾಣಿ- ಕಿನ್ನಿಮಾಣಿ ಹಾಗೂ ವ್ಯಾಘ್ರಚಾಮುಂಡಿ ದೇವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಪೂರ್ವ  ಪದ್ಧತಿ ಪ್ರಕಾರ  ಬ್ರಹ್ಮಶ್ರೀ ವೇಧ ಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ  ಶುಭಾಶ್ರೀರ್ವಾದಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಜ. 16 ರಂದು ಕಿನ್ನಿಮಾಣಿ ದೈವದ ನೇಮ,ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಿತು.

 ಜ.14 ರಂದು  ಭಂಡಾರ ತೆಗೆದು ,ಧ್ವಜಾರೋಹಣ, ಬೀರತಂಬಿಲ ನಡೆಯಿತು.15ರಂದು 48 ಕಾಯಿ ಗಣಪತಿ ಹೋಮ, ನಡೆಯಿತು.ಬಳಿಕ ಆನೆ ಚಪ್ಪರ ಏರಿಸುವುದು, ಬಳಿಕ ಮಕರ ತೋರಣ ಏರಿಸುವುದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ಸದಸ್ಯರಾದ ರವಿರಾಜ ರೈ ಸಜಂಕಾಡಿ,  ಶ್ರೀಧರ ನಾಯ್ಕ ನೇರ್ಲಪಾಡಿ., ವಿಶ್ವನಾಥ ಪೂಜಾರಿ ಪೂಜಾರಿ ಮೂಲೆ,  ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ,  ಕ್ಷೇತ್ರದ ಸೇನಾವರಾದ ಉದಯ ಕುಮಾರ್ ಪಡುಮಲೆ  ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. 

LEAVE A REPLY

Please enter your comment!
Please enter your name here