ಮಾಯಿದೆ ದೇವುಸ್ ಚರ್ಚ್‌ನ ವಾರ್ಷಿಕ ಹಬ್ಬ-ಮೇರಿ ಮಾತೆಯ ಪ್ರತಿಮೆಯ ಜೊತೆಗೆ ಮೊಂಬತ್ತಿ ಮೆರವಣಿಗೆ

0

ಪುತ್ತೂರು: ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇದರ ವಾರ್ಷಿಕ ಹಬ್ಬದ ಪ್ರಯುಕ್ತ ಪೂರ್ವ ತಯಾರಿಯಾಗಿ ಜ.16 ರಂದು ಸಂಜೆ ಮೇರಿ ಮಾತೆಯ ಪ್ರತಿಮೆಯ ಜೊತೆಗೆ ಮೊಂಬತ್ತಿ ಮೆರವಣಿಗೆ, ತದನಂತರ ದೇವರ ವಾಕ್ಯದ ಸಂಭ್ರಮವು ಜರುಗಿತು.


ಸಂಭ್ರಮದ ವಿಧಿ ವಿಧಾನಗಳನ್ನು ವಂದನೀಯ ಬೊನಿಫಾಸ್ ಪಿಂಟೊ ನಡೆಸಿಕೊಟ್ಟರು. ಚರ್ಚ್ ಬಲಿಯಿಂದ ಹೊರಟ ಮೆರವಣಿಗೆಯು ಎಂ.ಟಿ ರಸ್ತೆ, ಕೋರ್ಟ್ ರಸ್ತೆ, ಮುಖ್ಯ ರಸ್ತೆಯ ಮುಖಾಂತರ ಸಾಗಿ ಚರ್ಚ್ ವಠಾರದಲ್ಲಿ ಸಮಾಪನಗೊಂಡಿತು.


ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇದರ ಪ್ರಧಾನ ಧರ್ಮಗುರುಗಳಾದ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್, ವಂ. ಲೋಹಿತ್ ಅಜಯ್ ಮಸ್ಕರೇನ್ಹಸ್- ಸಹಾಯಕ ಧರ್ಮಗುರುಗಳು, ವಂ. ಸ್ಟ್ಯಾನಿ ಪಿಂಟೋ, ವಂ. ಅಶೋಕ್ ರಾಯನ್ ಕ್ರಾಸ್ತಾ, ವಂ. ರೂಪೇಶ್ ತಾವ್ರೋ, ವಂ. ಮಾಕ್ಸಿಮ್ ಡಿಸೋಜ ಹಾಗೂ ಸಾವಿರಾರು ಭಕ್ತರು ಭಾಗವಹಿಸಿದರು.

LEAVE A REPLY

Please enter your comment!
Please enter your name here