ಪುತ್ತೂರು: ಪಡ್ನೂರು ಗ್ರಾಮದ ದೇಂತಡ್ಕ ಶ್ರೀ ವನಶಾಸ್ತಾರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಜ.17ರಂದು ವೇ.ಮೂ ಮಿತ್ತೂರು ಪುರೋಹಿತ ಸದಾಶಿವ ಭಟ್ ರವರ ಹಿರಿತನದಲ್ಲಿ ವೇ.ಮೂ ಮಿತ್ತೂರು ಪುರೋಹಿತ ತಿರುಮಲೇಶ್ವರ ಭಟ್‌ರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬೆಳಿಗ್ಗೆ ಗಣಪತಿ ಹವನ, ಏಕಾದಶ ರುದ್ರಾಭಿಷೇಕ, ನವಕ ಕಲಶ, ನಾಗತಂಬಿಲ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಸಾರ್ವಜನಿಕ ದುರ್ಗಾಪೂಜೆ, ಸಾರ್ವಜನಿಕ ಆಶ್ಲೇಷ ಬಲಿ, ದೈವಗಳ ತಂಬಿಲ, ದೇವರಿಗೆ ಮಹಾಪೂಜೆ, ರಂಗಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಪ್ರತಿಷ್ಠಾ ವಾರ್ಷಿಕ ಮಹೋತ್ಸವದಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ವಿವಿಧ ಭಜನಾ ಕಾರ್ಯಕ್ರಮದಲ್ಲಿ ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ, ಶ್ರೀ ಆದಿಶಕ್ತಿ ಭಜನಾ ಮಂಡಳಿ, ವನಶಾಸ್ತಾರ ಭಜನಾ ಮಂಡಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡ್ನೂರು ಒಕ್ಕೂಟ, ಶ್ರೀ ಜನಾರ್ದನ ಯುವಕ ಮಂಡಳ, ಶ್ರೀ ಸರಸ್ವತಿ ಯುವತಿ ಮಂಡಳ ಪಡ್ನೂರು, ಶಿವಪಾರ್ವತಿ ಭಜನಾ ಮಂಡಳಿ ಆಯೋಧ್ಯನಗರ ಬನ್ನೂರು, ನವೋದಯ ಮಹಿಳಾ ಮಂಡಲ ಬನ್ನೂರು, ವಿದ್ಯಾ ಸರಸ್ವತಿ ಮಾತೃ ಮಂಡಲ ಬೇರಿಕೆ ಪಡ್ನೂರು, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಕಾರ್ಲ ಪೆರ್ನೆ ಇವರಿಂದ ಭಜನೆ ಹಾಗೂ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನೀರಪಾದೆ ಕಳೆಂಜೆ ಬೆಳ್ತಂಗಡಿ ಇವರಿಂದ ಕುಣಿತ ಭಜನೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ಇವರಿಂದ ‘ಕುಡ ಒಂಜಾಕ’ ಎಂಬ ತುಳು ಹಾಸ್ಯಮಯ ನಾಟಕ ನಡೆಯಿತು.
ದೇವಸ್ಥಾನದ ಅಧ್ಯಕ್ಷ ಮುರಳಿ ಕೆ.ಟಿ., ಪ್ರಧಾನ ಕಾರ್ಯದರ್ಶಿ ಪೂವಪ್ಪ ದೇಂತಡ್ಕ, ಉಪಾಧ್ಯಕ್ಷ ಶಿವರಾಮ ದೇಂತಡ್ಕ, ಖಜಾಂಚಿ ಎಂ.ಎಸ್ ಶಿವಣ್ಣ ಗೌಡ ದೇಂತಡ್ಕ, ಸದಸ್ಯರಾದ ಜನಾರ್ದನ ಭಟ್ ಸೇಡಿಯಾಪು, ಸಂಜೀವ ಪೂಜಾರಿ, ರಮೇಶ್ ಗೌಡ, ಲಕ್ಷ್ಮಣ ಗೌಡ, ಮಾಧವ ಗೌಡ, ಸುನೀಲ್ ದೇಂತಡ್ಕ, ಗೋಪಾಲಕೃಷ್ಣ ಜೋಯಿಷ, ವಸಂತ ಗೌಡ, ಚಂದ್ರಶೇಖರ ದೇಂತಡ್ಕ, ಗಂಗಪ್ಪ ಗೌಡ, ಕೆ.ಎನ್ ಮೋಹನ,
ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಪ್ರತಿಷ್ಠಾ ಮಹೋತ್ಸವದಲ್ಲಿ ಭಾಗವಹಿಸಿದ್ದರು