ಪುತ್ತೂರು : ಮಂಗಳೂರಿನ ಕದ್ರಿ ಬಳಿಯ ಹೆಸರಾಂತ ಕಿಯಾ ಕಾರು ಡೀಲರ್ ಎ.ಆರ್.ಎಂ. ಕಿಯಾ ಹಾಗೂ ಬ್ಯಾಂಕ್ ಆಫ್ ಬರೋಡಾ ಇದರ ಜಂಟಿ ಆಶ್ರಯದಲ್ಲಿ ಕಿಯಾ ಕಾರುಗಳ ಬೃಹತ್ ಮೇಳ ಮತ್ತು ಕಂಪನಿಯು ಮಾರುಕಟ್ಟೆಗೆ ವಿನೂತನವಾಗಿ ಪರಿಚಯಸಿರುವ ಸೊನೆಟ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಕಾರ್ಯಕ್ರಮ ಇಲ್ಲಿನ ದರ್ಬೆ ಬೈಪಾಸ್ ಬಳಿಯ ರೈ ಎಸ್ಟೇಟ್ ಆ್ಯಂಡ್ ಬಿಲ್ಡರ್ಸ್ ಸಂಕೀರ್ಣ ಮುಂಭಾಗದಲ್ಲಿ ಜ.19 ಅದ್ದೂರಿಯಾಗಿ ನಡೆಯಿತು.
ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಾರ್ಯಾಲಯ ಪುತ್ತೂರು ಇದರ ಡಿ.ಆರ್.ಎಂ.ಮೂರ್ತಿ ಹೆಚ್ ಎಂ ದೀಪ ಪ್ರಜ್ವಲನೆ ನೆರವೇರಿಸಿ , ಬಳಿಕ ಕಂಪೆನಿಯು ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಿರುವ ನ್ಯೂ ಸೊನೆಟ್ ಕಾರನ್ನು ಅನಾವರಣಗೊಳಿಸಿ ಹಾರೈಸಿದರು.
ಬ್ಯಾಂಕ್ ಆಫ್ ಬರೋಡಾ ಇದರ ಅಟೋ ಲೋನ್ ಆಫೀಸರ್ ವೆಂಕಟ್ ,ಕ್ರೆಡಿಟ್ ಹೆಡ್ ಸರಿತಾ , ಬೊಳುವಾರು ದೀಪ ಎಂಟರ್ ಪ್ರೈಸಸ್ ಮಾಲೀಕ ಪ್ರದೀಪ್ , ನಾಗೇಶ್ ಕೆಮ್ಮಾಯಿ , ಮಂಗಳೂರಿನ ಎ.ಆರ್.ಎಂ.ಕಿಯಾ ಜನರಲ್ ಮ್ಯಾನೇಜರ್ ನಿತಿನ್ ಕೃಷ್ಣ , ಎ ಜಿ ಎಂ ಕನಕ್ ಕುಮಾರ್ , ಸೇಲ್ಸ್ ಮ್ಯಾನೇಜರ್ ಹರೀಶ್ ರಾವ್ , ಟೀಂ ಮ್ಯಾನೇಜರ್ ಸರೋಶ್ ಮತ್ತು ವಿಶಾಲ್ ಪುತ್ತೂರು ಹಾಗೂ ಮಾಧವ ಸುಳ್ಯ ಸಹಿತ ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಾರ್ಯಾಲಯದ ಸಿಬಂದಿಗಳು ಹಾಜರಿದ್ದರು.
ಜ.20 ರ ಸಂಜೆ ತನಕ ಬೃಹತ್ ಕಿಯಾ ಕಾರು ಮೇಳ ನಡೆಯಲಿದ್ದು , ಈ ವೇಳೆ ಕಾರುಗಳ ಪ್ರದರ್ಶನದ ಜೊತೆಗೆ ಬ್ಯಾಂಕ್ ಆಫ್ ಬರೋಡಾ ಇದರ ವತಿಯಿಂದ ಶೇಕಡಾ 8.80 ವಾರ್ಷಿಕ ಬಡ್ಡಿಯಲ್ಲಿ ತ್ವರಿತ ಲೋನ್ ವ್ಯವಸ್ಥೆ , ಫಿಕ್ಸೆಡ್ ಮತ್ತು ಫ್ಲೋಟಿಂಗ್ ಲೋನ್ ಫೆಸಿಲಿಟಿ ಜೊತೆಗೆ 90% ವರೆಗಿನ ಸಾಲ ಸೌಲಭ್ಯವೂ ಇದ್ದು ,ಕಾರು ಪ್ರಿಯರು ಈ ಮೇಳದ ಪ್ರಯೋಜನ ಪಡೆಯುವಂತೆ ಪ್ರಕಟಣೆ ತಿಳಿಸಿದೆ.ಅಧಿಕ ಮಾಹಿತಿಗಾಗಿ 9606013163 ಸಂಖ್ಯೆ ಸಂಪರ್ಕಿಸುವಂತೆ ತಿಳಿಸಲಾಗಿದೆ.