





ಪುತ್ತೂರು: ಅಯೋಧ್ಯೆಯಲ್ಲಿ ಜ.22 ರಂದು ಲೋಕಾರ್ಪಣೆಗೊಳ್ಳಲಿರುವ ಶ್ರೀರಾಮ ಮಂದಿರ, ಶ್ರೀರಾಮ ಲಲ್ಲಾನ ಪ್ರತಿಷ್ಠಾ ಮಹೋತ್ಸವಕ್ಕೆ ದೇಶದ ಹಲವು ಸಂತರು, ಗಣ್ಯರನ್ನು ಶ್ರೀರಾಮ ಜನ್ಮಭೂಮಿಯ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಆಹ್ವಾನಿಸಲಾಗಿದೆ. ವಿಶೇಷವಾಗಿ ಪುತ್ತೂರಿನಿಂದ ಕೇಂದ್ರ ಸರಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿರುವ ಈಶ್ವರಮಂಗಲ ಕೊನೆತೋಟದ ನಟರಾಜ್ ಕೆ.ಎಂ.ರವರಿಗೆ ವಿಶೇಷ ಆಹ್ವಾನ ನೀಡಿದೆ. ಕೆ.ಎಂ. ನಟರಾಜ್‌ರವರೊಂದಿಗೆ ಅವರ ಪತ್ನಿ ಅನುಪಮ ಕೆ.ಎನ್.ರವರಿಗೆ ಕೂಡ ಅಹ್ವಾನ ನೀಡಲಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆ, ಡಾ.ಕಲ್ಲಡ್ಕ ಪ್ರಭಾಕರ ಭಟ್, ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಎಂ.ಬಿ ಪುರಾಣಿಕ್ ಮಂಗಳೂರು ಹಾಗೂ ವಿಶಾಲ್ ಹೆಗ್ಡೆ ಮಂಗಳೂರುರವರುಗಳನ್ನು ಟ್ರಸ್ಟ್ ಆಹ್ವಾನಿಸಿದೆ ಎಂದು ತಿಳಿದು ಬಂದಿದೆ.














