ಪುತ್ತೂರು: ಆಸರೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕೆದಂಬಾಡಿ ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಜ.19 ರಂದು ಕೆದಂಬಾಡಿ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆಯಿತು. ದೀಪಪ್ರಜ್ವಲನೆ ಮೂಲಕ ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ ರೈ ಕಾರ್ಯಕ್ರಮ ಉದ್ಘಾಟಿಸಿ, ಸಭಾಧ್ಯಕ್ಷತೆ ವಹಿಸಿದ್ದರು.
ಎನ್.ಆರ್.ಎಲ್.ಎಮ್ ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ ಮಾತನಾಡಿ, ಮಹಿಳೆಯರಿಗಾಗಿ ಸ್ವ ಉದ್ಯೋಗ, ವಿವಿಧ ಇಲಾಖೆಗಳ ಮಾಹಿತಿ, ಸರ್ಕಾರದ ಸವಲತ್ತು ನೇರವಾಗಿ ಮಹಿಳೆಯರಿಗೆ ತಲುಪುದು ಹೇಗೆಂದು ತಿಳಿಸಿದರು.ವಲಯ ಮೇಲ್ವಿಚಾರಕಿ ನಮಿತಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್, ಪಿಡಿಒ ಅಜಿತ್, ಕಾರ್ಯದರ್ಶಿ ಸುನಂದ ರೈ , ಗ್ರಂಥಾಲಯ ಮೇಲ್ವಿಚಾರಕಿ ಸಾರಿಕ ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮ
ಕರಾಟೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕೆದಂಬಾಡಿ ಗುತ್ತು ಯಶೋಧ ರೈ ಮತ್ತು ಕಾರ್ಕಳ ಹರೀಶ್ ಶೆಟ್ಟಿಯವರ ಪುತ್ರಿ ಸಾಂದೀಪನಿ ಶಾಲೆಯ 7 ತರಗತಿ ವಿದ್ಯಾರ್ಥಿನಿ ಕು|ತೃತಿ ಶೆಟ್ಟಿ ಕೆದಂಬಾಡಿ ಗುತ್ತುರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ
ಈ ಸಂದರ್ಭದಲ್ಲಿ 2023-24ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷೆಯಾಗಿ ವಿದ್ಯಾವತಿ ರೈ, ಕಾರ್ಯದರ್ಶಿಯಾಗಿ ಕವಿತಾ ಹಾಗೂ ಒಕ್ಕೂಟದ ಇತರೆ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಎಲ್ ಸಿ ಆರ್ ಪಿ ಪೂರ್ಣಿಮಾ ಪ್ರಾರ್ಥಿಸಿ,ಎಫ್ ಎಲ್ ಸಿ ಆರ್ ಪಿ ಲತಾ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಹೇಮಾಲತಾ ವರದಿ ವಾಚಿಸಿ, ಪಶು ಸಖಿ ವಸಂತಿ ಲೆಕ್ಕ ಪರಿಶೋಧನೆಯ ವರದಿ ಮಂಡಿಸಿದರು. ಕೃಷಿ ಸಖಿ ಪುಷ್ಪಾವತಿ ವಂದಿಸಿದರು. ಪುಷ್ಪಾ ಕಾರ್ಯಕ್ರಮ ನಿರೂಪಿಸಿದರು.ಪಂಚಾಯತ್ ಸಿಬ್ಬಂದಿ ವರ್ಗ,ಎಮ್ ಬಿ ಕೆ ಲೀಲಾ ಎಸ್ ರೈ, ಎಲ್ ಸಿ ಆರ್ ಪಿ ಪೂರ್ಣಿಮಾ, ಎಲ್ ಸಿ ಆರ್ ಪಿ ಜಯಲತಾ, ಕೃಷಿ ಉದ್ಯೋಗ ಸಖಿ ಗಿರಿಜಾ ಒಕ್ಕೂಟದ ಸಿಬ್ಬಂದಿ ಗಳು ಸಹಕರಿಸಿದರು.