ಪುತ್ತೂರು: ಪುತ್ತೂರು ನಗರದಲ್ಲಿ ಅಭಿವೃದ್ದಿ ಕಾರ್ಯಕ್ಕೆ ಚಾಲನೆಯನ್ನು ನೀಡಿದ್ದೇನೆ, ಮುಂದಿನ ದಿನಗಳಲ್ಲಿ ನಗರದ ಪ್ರಮುಖ ರಸ್ತೆಗಳು ಕಾಂಕ್ರೀಟ್ ಆಗಲಿದೆ, ನಾವು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ತೆಂಗಿನ ಕಾಯಿ ಒಡೆಯವುದಿಲ್ಲ, ಗುದ್ದಲಿಪೂಜೆಯನ್ನು ಮಾಡುವುದಿಲ್ಲ, ಅನುದಾನ ಬಂದ ಬಳಿಕವೇ ನಾವು ಶಿಲಾನ್ಯಾಸವನ್ನು ಮಾಡುತ್ತಿದ್ದೇನೆ ಎಂದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಅಭಿವೃದ್ದಿ ಕಾಮಗಾರಿಗೆ ಅನುದಾನ ಬರುತ್ತಿದೆ, ಅನುದಾನ ಬರುವುದನ್ನು ಕಂಡು ಸಹಿಸಲಾಗದವರು ಅದನ್ನು ನಾವು ಮಾಡಿದ್ದು ಇದನ್ನು ನಾವು ಮಾಡಿದ್ದು ಎಂದು ಮಾಧ್ಯಮಗಳಲ್ಲಿ ಪ್ರಕಟಣೆ ನೀಡುತ್ತಿದ್ದಾರೆ. ನಿಮ್ಮ ಅವಧಿಯಲ್ಲಿ ಅನುದಾನ ಬಿಡುಗಡೆಯಾಗಿದ್ದರೆ ಯಾಕೆ ರಸ್ತೆಗೆ ಗುದ್ದಲಿ ಪೂಜೆ ಮಾಡಿಲ್ಲ, ಯಾಕೆ ಉದ್ಘಾಟನೆ ಮಾಡಿಲ್ಲ ಎಂದು ಪ್ರಶ್ನಿಸಿದ ದರ್ಬೆ ಅಂಕಲ್ ಸ್ವೀಟ್ ಬಳಿ ಚರಂಡಿ ಕಾಮಗಾರಿಯನ್ನು ಮಾಡಿ ಎಂದು ನಾನೇ ಮನವಿ ಮಾಡಿದ್ದೆ, ಯಾಕೆ ಆ ಕೆಲಸವನ್ನು ಮಾಡಿಲ್ಲ, 15 ವರ್ಷದಿಂದ ಅಲ್ಲಿನ ಮನೆಯವರು, ಮಕ್ಕಳು ಕಷ್ಟಪಡುತ್ತಿದ್ದಾರೆ, ಶಾಲಾ ಮಕ್ಕಳಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ, ಸೊಳ್ಳೆಯ ಕಾಟದಿಂದ ಅಲ್ಲಿನ ಮನೆಯವರು, ಮಕ್ಕಳು ನೋವು ಅನುಭವಿಸುತ್ತಿದ್ದಾರೆ ಯಾಕೆ ಅವರ ಮನವಿಗೆ ಸ್ಪಂದಿಸಿಲ್ಲ, ನಿಮಗೆ ಅಧಿಕಾರ ಇತ್ತಲ್ಲ ಎಂದು ಪ್ರಶ್ನಿಸಿದ ಶಾಸಕರು ಅಂಕಲ್ ಸ್ವೀಟ್ ಬಳಿ ಚರಂಡಿ ಮತ್ತು ರಸ್ತೆಗೆ 30 ಲಕ್ಷ ಅನುದಾನವನ್ನು ಇಟ್ಟಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಅಭಿವೃದ್ದಿ ಕಾಮಗಾರಿಗೆ ಅನುದಾನ ಬರುತ್ತಿದೆ, ಅನುದಾನ ಬರುವುದನ್ನು ಕಂಡು ಸಹಿಸಲಾಗದವರು ಅದನ್ನು ನಾವು ಮಾಡಿದ್ದು ಇದನ್ನು ನಾವು ಮಾಡಿದ್ದು ಎಂದು ಮಾಧ್ಯಮಗಳಲ್ಲಿ ಪ್ರಕಟಣೆ ನೀಡುತ್ತಿದ್ದಾರೆ. ನಿಮ್ಮ ಅವಧಿಯಲ್ಲಿ ಅನುದಾನ ಬಿಡುಗಡೆಯಾಗಿದ್ದರೆ ಯಾಕೆ ರಸ್ತೆಗೆ ಗುದ್ದಲಿ ಪೂಜೆ ಮಾಡಿಲ್ಲ, ಯಾಕೆ ಉದ್ಘಾಟನೆ ಮಾಡಿಲ್ಲ ಎಂದು ಪ್ರಶ್ನಿಸಿದ ದರ್ಬೆ ಅಂಕಲ್ ಸ್ವೀಟ್ ಬಳಿ ಚರಂಡಿ ಕಾಮಗಾರಿಯನ್ನು ಮಾಡಿ ಎಂದು ನಾನೇ ಮನವಿ ಮಾಡಿದ್ದೆ, ಯಾಕೆ ಆ ಕೆಲಸವನ್ನು ಮಾಡಿಲ್ಲ, 15 ವರ್ಷದಿಂದ ಅಲ್ಲಿನ ಮನೆಯವರು, ಮಕ್ಕಳು ಕಷ್ಟಪಡುತ್ತಿದ್ದಾರೆ, ಶಾಲಾ ಮಕ್ಕಳಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ, ಸೊಳ್ಳೆಯ ಕಾಟದಿಂದ ಅಲ್ಲಿನ ಮನೆಯವರು, ಮಕ್ಕಳು ನೋವು ಅನುಭವಿಸುತ್ತಿದ್ದಾರೆ ಯಾಕೆ ಅವರ ಮನವಿಗೆ ಸ್ಪಂದಿಸಿಲ್ಲ, ನಿಮಗೆ ಅಧಿಕಾರ ಇತ್ತಲ್ಲ ಎಂದು ಪ್ರಶ್ನಿಸಿದ ಶಾಸಕರು ಅಂಕಲ್ ಸ್ವೀಟ್ ಬಳಿ ಚರಂಡಿ ಮತ್ತು ರಸ್ತೆಗೆ 30 ಲಕ್ಷ ಅನುದಾನವನ್ನು ಇಟ್ಟಿದ್ದೇನೆ ಎಂದು ಹೇಳಿದರು.
5 ವರ್ಷ ಅಧಿಕಾರ ಮಾಡಿದ್ರಲ್ಲ ಯಾಕೆ ಅಭಿವೃದ್ದಿ ಮಾಡಿಲ್ಲ:
ಕಾಂಗ್ರೆಸ್ ಸರಕಾರದ ಅನುದಾನವನ್ನು ನಮ್ಮ ಅನುದಾನ ಎಂದು ಹೇಳುತ್ತಿದ್ದೀರಲ್ಲ ನಿಮಗೆ 5 ವರ್ಷ ಜನ ಅಧಿಕಾರ ಕೊಟ್ಟಿದ್ದರು ಆವಾಗ ಯಾಕೆ ಅಭಿವೃದ್ದಿ ಮಾಡಿಲ್ಲಾ? ನೀವು ಅಧಿಕಾರದಲ್ಲಿದ್ದಾಗ ಏನು ಅಭಿವೃದ್ದಿ ಮಾಡಿದ್ದೀರಿ ಎಂಬುದು ಪುತ್ತೂರು ನಗರದ ಜನತೆಗೆ ಗೊತ್ತಿದೆ, ಇಲ್ಲಿನ ರಸ್ತೆಗಳೇ ನಿಮ್ಮ ಅದಿಕಾರದ ಅವಧಿಯ ಕಥೆ ಹೇಳುತ್ತಿದೆ. ನಾನು ಅಭಿವೃದ್ದಿಯಲ್ಲಿ ರಾಜಕೀಯ ಮಾಡುವುದಿಲ್ಲ ಅದರ ಅವಶ್ಯಕತೆಯೂ ನನಗಿಲ್ಲ. ಅಭಿವೃದ್ದಿಗಾಗಿ ನಮ್ಮ ಜೊತೆ ಕೈ ಜೋಡಿಸಿ ಎಂದು ಬಿಜೆಪಿಗರಿಗೆ ಸಲಹೆ ನೀಡಿದ ಶಾಸಕರು ಪುತ್ತೂರು ನಗರದಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆದರೆ ಅದು ಇಲ್ಲಿನ ಎಲ್ಲಾ ಜನತೆಗೆ ಪ್ರಯೋಜನವಾಗಲಿದೆ. ನಾವು ಅಧಿಕಾರದಲ್ಲಿದ್ದಾಗ ಜನತೆಗೆ ಏನು ಬೇಕೋ ಅದನ್ನು ಕೊಡಬೇಕು. ಏನೂ ಕೆಲಸ ಮಾಡದೆ ಈಗಿನ ಸರಕಾರ ಕೊಟ್ಟ ಅನುದಾನವನ್ನು ಅದು ನಮ್ಮ ಅನುದಾನ, ನಾವು ಪ್ರಸ್ತಾವನೆ ಮಾಡಿದ್ದು ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುವುದು ಯಾಕೆ? ಎಂದು ಶಾಸಕರು ಪ್ರಶ್ನಿಸಿದರು.
ಜನ ಎಲ್ಲವನ್ನೂ ಗಮನಿಸುತ್ತಾರೆ:
ಜನ ಎಲ್ಲವನ್ನೂ ಗಮನಿಸುತ್ತಾರೆ, ಯಾರು ಅಭಿವೃದ್ದಿ ಪರ ಯಾರೂ ಸುಳ್ಳಿನ ರಾಜಕೀಯ ಮಾಡುತ್ತಾರೆ ಎಂಬುದನ್ನು ಜನ ಗಮನಿಸುತ್ತಾರೆ. ಇಷ್ಟು ವರ್ಷ ಇಲ್ಲಿ ಅಧಿಕಾರ ಪಡೆದವರು ಏನು ಮಾಡಿದ್ದರು ಎಂಬುದು ಜನತೆಗೆ ಗೊತ್ತಿದೆ. ಕಳೆದ ಚುನವಣೆಯ ಸಮಯದಲ್ಲಿ ಅನುದಾನ ಇಲ್ಲದೇ ಇದ್ದರೂ ಅಲ್ಲಲ್ಲಿ ತೆಂಗಿನ ಕಾಯಿ ಒಡೆಯುವ ಮೂಲಕ ಜನರನ್ನು ಮರಳು ಮಾಡಿ ವೋಟು ಗಿಟ್ಟಿಸಿಕೊಳ್ಳಲು ಮಾಡಿದ ಪ್ರಯತ್ನದ ಬಗ್ಗೆಯೂ ಜನತೆಗೆ ಗೊತ್ತಿದೆ. ಅಭಿವೃದ್ದಿ ಮಾಡಿಲ್ಲ ಎಂದು ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ ನಾವು ಅಭಿವೃದ್ದಿ ಮಾಡುತ್ತೇವೆ, ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಶಾಸಕರು ಹೇಳಿದರು.
ನಗರದಿಂದ ಅರುಣದವರೆಗೆ ಚತುಷ್ಪಥ ರಸ್ತೆ:
ನೆಹರೂ ನಗರದಿಂದ ಅರುಣಾವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ, ಚರಂಡಿಗೆ ಈಗಾಗಲೇ ಸರ್ವೆ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಗರದೊಳಗಿನ ರಸ್ತೆಗಳ ಅಗಲೀಕರಣ ಮತ್ತು ಕಾಂಕ್ರಿಟೀಕರಣ ನಡೆಯಲಿದೆ. ಬಸ್ಸು ನಿಲ್ದಾಣದ ಬಳಿ ರಸ್ತೆಗೆ ಇಂಟರ್‌ಲಾಕ್ ಹಾಕಲಾಗುತ್ತದೆ. ಮೊಟ್ಟ ಮೊದಲ ಬಾರಿಗೆ ಬಿರುಮಲೆ ಬೆಟ್ಟ ಅಭಿವೃದ್ದಿಗೆ 2.5 ಕೋಟಿ ಅನುದಾನ ಮಂಜೂರಾಗಿದೆ. ಬಿರುಮಲೆ ಬೆಟ್ಟವನ್ನು ಪ್ರವಾಸಿತಾಣವನ್ನಾಗಿ ಖಂಡಿತಾ ಮಾಡುತ್ತೇವೆ. ಕಳೆದ ಬಾರಿ ಅಧಿಕಾರದಲ್ಲಿದ್ದವರು ಬಿರುಮಲೆ ಬೆಟ್ಟ ಅಭಿವೃದ್ದಿಗೆ ಯಾಕೆ ನಯಾ ಪೈಸೆ ಕೊಟ್ಟಿಲ್ಲ, ಎಲ್ಲವನ್ನೂ ನಾವೇ ಮಾಡಿದ್ದು ಎನ್ನುವವರಿಗೆ ಬಿರುಮಲೆ ಬೆಟ್ಟ ಕಾಣಲಿಲ್ಲವೇ? ನಗರದ ಗುಂಡಿ ಬಿದ್ದ ರಸ್ತೆಗಳು ಕಾಣಲಿಲ್ಲವೇ? ಅಂಕಲ್ ಸ್ವೀಟ್ ಬಳಿ ನಿವಾಸಿಗಳ ನೋವು ಕಾಣಲಿಲ್ಲವೇ ಎಂದು ಶಾಸಕರು ಪ್ರಶ್ನಿಸಿದರು.
ಪುತ್ತೂರು ನಗರದಲ್ಲಿ ಅಭಿವೃದ್ದಿ ಪರ್ವ ಆರಂಭವಾಗಿದೆ: ಆಲಿ
ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಅಭಿವೃದ್ದಿ ಪರ್ವ ಆರಂಭವಾಗಿದೆ. ಅನೇಕ ವರ್ಷಗಳಿಂದ ಅಭಿವೃದ್ದಿ ಕಾಣದ ಅನೇಕ ರಸ್ತೆಗಳು ಈ ಬಾರಿ ಅಭಿವೃದ್ದಿಯಾಗಲಿದೆ. ದರ್ಬೆ ಸಿಟಿಒ ರಸ್ತೆಯನ್ನು ಡಾಮರೀಕರಣ ಮಾಡಿ ಎಂದು ಕಳೆದ 15 ವರ್ಷಗಳಿಂದ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದರೂ ನಗರಸಭೆಯಾಗಲಿ, ಮಾಜಿ ಶಾಸಕರಾಗಲಿ ಈ ರಸ್ತೆಗೆ ಅನುದಾನ ನೀಡಿರಲಿಲ್ಲ. ಪಕ್ಷಭೇದವಿಲ್ಲದೆ ಕೆಲಸ ಮಾಡುವ ಪುತ್ತೂರಿನ ಶಾಸಕ ಅಶೋಕ್ ರೈಯವರು ಈ ರಸ್ತೆಗೆ 25 ಲಕ್ಷ ರೂ ಅನುದಾನವನ್ನು ನೀಡಿದ್ದಾರೆ. ಅದೇ ರೀತಿಯ ನಗರದ ಕೆಲವು ಪ್ರಮುಖ ರಸ್ತೆಗಳಿಗೆ ಅನುದಾನ ಬಿಡುಗಡೆಯಾಗಿದೆ. ಜನರ ಬೇಡಿಕೆಗೆ ಅನುಸಾರವಾಗಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿರುವ ಡಾಮರು ಕಾಣದ, ಕಾಂಕ್ರೀಟ್ ಕಾಣದ ರಸ್ತೆಗಳಿಗೆ ಅನುದಾನವನ್ನು ನೀಡುವ ಮೂಲಕ ಶಾಸಕರು ಅಭಿವೃದ್ದಿ ಮಾಡಲಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಹೇಳಿದರು.
3.28 ಕೋಟಿ ರೂ ಕಾಮಗಾರಿಗೆ ಶಿಲಾನ್ಯಾಸ:
ಪುತ್ತೂರು ನಗರದ ವಿವಿಧ ರಸ್ತೆಗಳ ಕಾಮಗಾರಿಗೆ ಒಟ್ಟು 3.28 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು ಒಟ್ಟು ಏಳು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ದರ್ಬೆ ಸಿಟಿಒ ರಸ್ತೆ, ಎಪಿಎಂಸಿ ಆದರ್ಶ ಆಸ್ಪತ್ರೆ ರಸ್ತೆ, ಜಿಡೆಕಲ್ಲು ಬೆದ್ರಾಳ ರಸ್ತೆ ಅಗಲೀಕರಣ, ಮಂಜಲ್ಪಡ್ಪು ಬೊಳ್ವಾರು ರಸ್ತೆ ಅಗಲೀಕರಣ, ಶೇವಿರೆ-ಪಂಬತ್ತಮಜಲು ರಸ್ತೆ ಕಾಂಕ್ರಿಟೀಕರಣ, ಶ್ರೀಧರ್ ಭಟ್ ಅಂಗಡಿ ಬಳಿಯಿಂದ ಕಲ್ಲಿಮಾರ್-ಪರ್ಲಡ್ಕ ರಸ್ತೆ ಅಭಿವೃದ್ದಿ ಕಾಮಗಾರಿ, ಕೋರ್ಟು ರಸ್ತೆ ಕಾಂಕ್ರೀಟ್ ರಸ್ತೆಗೆ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಸೇರಿ ಒಟ್ಟು ಏಳು ವಿವಿಧ ಕಾಮಗಾರಿಗೆ ಒಟ್ಟು 3.28 ಕೋಟಿ ರೂ ಅನುದಾನ ಬಿಡುಗಡೆಯಾಗಿರುತ್ತದೆ.
ಕಾರ್ಯಕ್ರಮದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ದರ್ಬೆ ಬೂತ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಷದ್ ದರ್ಬೆ, ಪಕ್ಷದ ಮುಖಂಡ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಶಿರಿಲ್ ರೋಡ್ರಿಗಸ್, ಬ್ಲಾಕ್ ಉಪಾಧ್ಯಕ್ಷ ಮೌರಿಶ್ ಮಸ್ಕರೇನಸ್, ಕೋಶಾಧಿಕಾರಿ ಡಯಾಸ್, ನಗರಸಭಾ ಸದಸ್ಯ ದಿನೇಶ್ ಶೇವಿರೆ, ಅಝೀಝ್ ದರ್ಬೆ, ಮಾಜಿ ಉಪ ತಹಶಿಲ್ದಾರ್ ಜಗನ್ನಾಥ ರೈ, ಜಗನ್ನಾಥ ರೈ ಸಿಟಿಒ ರಸ್ತೆ, ಲ್ಯಾನ್ಸಿ ಮಸ್ಕರೇನಸ್, ಬೂತ್ ಅಧ್ಯಕ್ಷ ಬೆಳಿಯಪ್ಪ ಪೂಜಾರಿ, ವಾಲ್ಟರ್ ಸಿಕ್ವೆರಾ, ದೇವಿಪ್ರಸಾದ್ ಸೆಟ್ಟಿ ನೆಲ್ಲಿಕಟ್ಟೆ, ವೆಲೇರಿಯನ್ ಡಯಾಸ್, ಬಾಲಕೃಷ್ನ ನಾಯ್ಕ್ ನೆಲ್ಲಿಕಟ್ಟೆ, ಮಂಜುನಾಥ ಕೆಮ್ಮಾಯಿ,ಪೂಣೇಶ್ ಭಂಡಾರಿ, ಮೌರಿಶ್ ಕುಟನ್ಹಾ, ಇಸ್ಮಾಯಿಲ್ ಸಾಲ್ಮರ, ಇಸುಬು ಸಾಲ್ಮರ, ಶರತ್ ಕೇಪುಳು, ರಾಮಚಂದ್ರ ನಾಯ್ಕ ಮಂಜಲ್ಪಡ್ಪು, ನಳಿನಾಕ್ಷಿ, ಉಷಾ ಮಂಜಲ್ಪಡ್ಪು, ಜುನೈದ್ ಸಾಲ್ಮರ, ರವೂಫ್ ಸಾಲ್ಮರ, ಮುಂಡಪ್ಪ, ಮೋನಪ್ಪ, ವೆಂಕಪ್ಪ ವಿ, ಸಂಜೀವ, ಮನೋರಮಾ ಮತ್ತಿತರರು ಉಪಸ್ಥಿತರಿದ್ದರು.