ಪುತ್ತೂರು: ನೆಹರೂನಗರದ ಮಂಜಲ್ಪಡ್ಪು ನಿವಾಸಿ ನಿತ್ಯಾನಂದ ನಾಯ್ಕ(57ವ.)ರವರು ಹೃದಯಾಘಾತದಿಂದ ಜ.20ರಂದು ನಿಧನರಾದರು. ರಿಕ್ಷಾ ಚಾಲಕರಾಗಿದ್ದ ಇವರು ನಗರದ ರಿಕ್ಷಾ ನಿಲ್ದಾಣದಲ್ಲಿದ್ದ ವೇಳೆ ಕುಸಿದು ಬಿದ್ದರು. ತಕ್ಷಣ ರಿಕ್ಷಾ ಚಾಲಕರು ನಿತ್ಯಾನಂದ ನಾಯ್ಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಕುಸುಮಾವತಿ, ಪುತ್ರಿಯರಾದ ಮಮತ, ಚೈತ್ರ, ಅಳಿಯ ಸಂತೋಷ್, ಮೊಮ್ಮಗ ಮನ್ವಿತ್ರವರನ್ನು ಅಗಲಿದ್ದಾರೆ.