ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಜ.22ರಂದು ಸಂಜೆ ಧ್ವಜಾರೋಹಣದೊಂದಿಗೆ ಚಾಲನೆ ದೊರೆತಿದೆ.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಧ್ವಜಾರೋಹಣ ನೆರವೇರಿತು. ಬಳಿಕ ದೇವರ ಬಲಿ ಹೊರಟು ಉತ್ಸವ ನಡೆಯಿತು. ದೇವಸ್ಥಾನದ ಪವಿತ್ರಪಾಣಿಗಳಾದ ನರಹರಿ ಉಪಾಧ್ಯಾಯ ಇರ್ಕಿಮಠ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಗುರುಪ್ರಸಾದ ರಾಮಕುಂಜ, ಸಲಹಾ ಸಮಿತಿ ಸದಸ್ಯರು, ಉತ್ಸವ ಸಮಿತಿ ಸದಸ್ಯರು ಸೇರಿದಂತೆ ನೂರಾರು ಮಂದಿ ಭಕ್ತರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದರು. ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಜ.23ರಂದು ಬೆಳಿಗ್ಗೆ ಹೊರೆಕಾಣಿಕೆ, ಸಂಜೆ ಕಟ್ಟೆಪೂಜೆ ನಡೆಯಲಿದೆ. ಜ.24ರಂದು ಬೆಳಿಗ್ಗೆ ದರ್ಶನ ಬಲಿ, ರಾತ್ರಿ ಶ್ರೀರಾಮ ಸಂದರ್ಶನೋತ್ಸವ, ಜ.25ರಂದು ಬ್ರಹ್ಮರಥೋತ್ಸವ ನಡೆಯಲಿದೆ.
ಹಣತೆ ಹಚ್ಚಿ ದೀಪೋತ್ಸವ:ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠೆ ಅಂಗವಾಗಿ ದೇವಸ್ಥಾನದ ವತಿಯಿಂದ ಗ್ರಾಮಸ್ಥರಿಗೆ ಹಣತೆಯನ್ನು ಹಂಚಲಾಗಿತ್ತು. ಜ.22ರಂದು ಸಂಜೆ ಧ್ವಜಾರೋಹಣಕ್ಕೆ ಮೊದಲು ಭಕ್ತರು ದೇವಸ್ಥಾನದ ಸುತ್ತಲೂ ಹಣತೆ ಹಚ್ಚಿ ದೀಪೋತ್ಸವ ಆಚರಿಸಿದರು.