ಪುತ್ತೂರು: ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಅತ್ಯಂತ ಕಾರಣಿಕ ಶಕ್ತಿಯನ್ನು ಹೊಂದಿರುವ ಸರ್ವೆ ಗ್ರಾಮದ ಎಲಿಯದಲ್ಲಿ ನೆಲೆಯಾಗಿರುವ ಶ್ರೀ ವಿಷ್ಣುಮೂರ್ತಿ ದೇವರ ದ್ವಿತೀಯ ಪ್ರತಿಷ್ಠಾ ವರ್ಧಂತಿ ಹಾಗೂ ಜಾತ್ರೋತ್ಸವವು ಫೆ.5 ರಿಂದ ಆರಂಭಗೊಂಡು ಫೆ.7 ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದ್ದು ಎಲಿಯ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಜ.23 ರಂದು ಶ್ರೀ ದೇವರ ಸನ್ನಿಧಿಯಲ್ಲಿ ದೇವಳದ ಪ್ರಧಾನ ಅರ್ಚಕ ನಾಗೇಶ ಕಣ್ಣಾರಾಯಯವರು ಬಿಡುಗಡೆಗೊಳಿಸಿ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ನಡೆಯಲಿ, ಊರಿಗೆ ಒಳ್ಳೆಯದಾಗಲಿ, ಶ್ರೀ ದೇವರ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಹೇಳಿ ಶುಭಾಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಾತ್ರಾ ಸಮಿತಿಯ ಗೌರವ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು, ಎಲಿಯದಲ್ಲಿ ನೆಲೆಯಾಗಿರುವ ಶ್ರೀ ವಿಷ್ಣುಮೂರ್ತಿ ದೇವರು ಬಹಳ ಕಾರಣಿಕತೆಯನ್ನು ಹೊಂದಿರುವ ದೇವರಾಗಿದ್ದು ಇಲ್ಲಿ ಬಂದು ಭಕ್ತಿಯಿಂದ ಬೇಡಿಕೊಂಡರೆ ನಮ್ಮೆಲ್ಲ ಕಷ್ಟಗಳು ನಿವಾರಣೆಯಾಗಿ ಸುಖ,ನೆಮ್ಮದಿ ಸಿಗುತ್ತದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ನಡೆಯುವ ದ್ವಿತೀಯ ಪ್ರತಿಷ್ಠಾ ವರ್ಧಂತಿ ಹಾಗೂ ಉತ್ಸವಕ್ಕೆ ಗ್ರಾಮದ ಹಾಗೇ ಊರಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಉತ್ಸವವನ್ನು ಚಂದಗಾಣಿಸಿಕೊಡುವ ಮೂಲಕ ದೇವರ ಕೃಪೆಗೆ ಪಾತ್ರರಾಗುವಂತೆ ಕೇಳಿಕೊಂಡರು. ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಉಮೇಶ್ ಕಾವಾಡಿ ಮಾತನಾಡಿ, ಎಲಿಯ ಒಂದು ಪವಿತ್ರವಾದ ಸ್ಥಳವಾಗಿದೆ ಇಲ್ಲಿ ಬಂದಾಗ ಮನಸ್ಸಿಗೆ ಬಹಳಷ್ಟು ನೆಮ್ಮದಿ ಸಿಗುತ್ತದೆ. ಇಲ್ಲಿ ನೆಲೆನಿಂತ ಶ್ರೀ ವಿಷ್ಣುಮೂರ್ತಿ ದೇವರ ಜಾತ್ರೋತ್ಸವವನ್ನು ನಾವೆಲ್ಲರೂ ಸೇರಿಕೊಂಡು ಆಚರಿಸುವ ಮೂಲಕ ದೇವರ ಆಶೀರ್ವಾದ ಪಡೆಯೋಣ, ನನ್ನಿಂದ ಆಗುವ ಎಲ್ಲಾ ರೀತಿಯ ಸಹಕಾರವನ್ನು ಮಾಡಲು ಸಿದ್ದನಿದ್ದೇನೆ ಎಂದು ಹೇಳಿ ಶುಭ ಹಾರೈಸಿದರು. ಜಾತ್ರಾ ಸಮಿತಿ ಅಧ್ಯಕ್ಷ ಶಿವರಾಮ ರೈ ಸೊರಕೆಯವರು, ಜಾತ್ರೆಯನ್ನು ಯಶಸ್ವಿಗೊಳಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗೋಣ, ತಾವೆಲ್ಲರೂ ದೇವರ ಕಾರ್ಯದಲ್ಲಿ ಭಾಗಿಗಳಾಗುವ ಮೂಲಕ ಉತ್ಸವವನ್ನು ಯಶಸ್ವಿ ಮಾಡುವ ಎಂದು ಹೇಳಿ ಎಲ್ಲರ ಸಹಕಾರವನ್ನು ಕೋರಿದರು.
ಈ ಸಂದರ್ಭದಲ್ಲಿ ಪವಿತ್ರಪಾಣಿ ಬಾಲಕೃಷ್ಣ ಮುಡಂಬಡಿತ್ತಾಯ ಸೊರಕೆ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಗೌಡ ಎಲಿಯ, ಜಾತ್ರಾ ಸಮಿತಿಯ ಕೋಶಾಧಿಕಾರಿ ಮಜಿತ್ ಸುವರ್ಣ ಸೊರಕೆ, ಕಾರ್ಯದರ್ಶಿ ರಜನಿಕಾಂತ ಬಾಳಾಯ, ಜಾತ್ರಾ ಸಮಿತಿಯ ಉಪಾಧ್ಯಕ್ಷರುಗಳಾದ ರವಿಕುಮಾರ್ ರೈ ಮಠ, ಆನಂದ ರೈ ಮಠ, ದೈವಗಳ ನೇಮೋತ್ಸವ ಸಮಿತಿ ಸಂಚಾಲಕ ಉಮೇಶ್ ಸುವರ್ಣ ಸೊರಕೆ, ಉಪಸಂಚಾಲಕ ರಾಮಚಂದ್ರ ಸೊರಕೆ, ಮಧ್ಯಸ್ಥರಾದ ಶುಭಪ್ರಕಾಶ್ ಗೌಡ ಎರಬೈಲು, ಬಾಲಕೃಷ್ಣ ಮಡಿವಾಳ ಸೊರಕೆ, ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾದ ಉದಯ ಕುಮಾರ್ ರೈ ಬಾಕುಡ, ಗೌರವ ಸಲಹೆಗಾರರಾದ ಬಿ.ವಿ ಸೂರ್ಯನಾರಾಯಣ, ಸುಧಾಕರ ರಾವ್ ಎಸ್, ಜಯಾನಂದ ರೈ ಮಿತ್ರಂಪಾಡಿ, ರವಿನಾರಾಯಣ ಭಟ್ ಎಲಿಯ ಹಾಗೇ ಹೊರೆಕಾಣಿಕೆ ಉಸ್ತುವಾರಿ ಸೀತಾರಾಮ ರೈ ಕೆದಂಬಾಡಿಗುತ್ತು, ಪ್ರಸನ್ನ ರೈ ಮಜಲುಗದ್ದೆ, ಭಾಸ್ಕರ ರೈ ಮಾದೋಡಿ ನಂಜೆ, ಜಯರಾಜ ಸುವರ್ಣ ಸೊರಕೆ, ಸದಾನಂದ ಸುವರ್ಣ ಸೊರಕೆ, ರಾಘವ ನೆಕ್ಕಿಲು, ಅಭಿಲಾಷ್ ಮಾರ್ತ, ನಿಶಾಂತ್ ನಾಯಕ್ ತಿಂಗಳಾಡಿ, ಡಾ.ರಾಜರಾಮ ಚಡಗ, ನವೀಣ್ ನಾಯಕ್ ನೆಕ್ಕಿಲು, ಹರ್ಷಿತ್ ನೇರೋಳ್ತಡ್ಕ, ಮೀರಾ ಶಿವರಾಮ ರೈ ಸೊರಕೆ, ಸುನೀತಾ ಶಶಿಕಿರಣ್ ರೈ ಸೊರಕೆ ಸೇರಿದಂತೆ ಹಲವು ಮಂದಿ ಭಕ್ತರು ಉಪಸ್ಥಿತರಿದ್ದರು.
ಫೆ.5-7 ಜಾತ್ರಾ ಸಂಭ್ರಮ
ಜಾತ್ರೆಗೆ ಜ.31 ರಂದು ಗೊನೆಮುಹೂರ್ತ ನಡೆಯಲಿದ್ದು ಫೆ.5ರಂದು ಹೊರೆಕಾಣಿಕೆಯೊಂದಿಗೆ ಜಾತ್ರೆ ಆರಂಭಗೊಳ್ಳಲಿದೆ. ಫೆ.6 ರಂದು ನಾಗತಂಬಿಲ, ಶ್ರೀ ಭೂತ ಬಲಿ, ಬಟ್ಟಲು ಕಾಣಿಕೆ ನಡೆಯಲಿದೆ. ಫೆ.7 ರಂದು ಶ್ರೀ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ.