ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಕೇಂದ್ರ ಸರಕಾರದ ನಮ್ಮ ಸಂಕಲ್ಪ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ಅಭಿಯಾನದಡಿ ಅಂಚೆ ಇಲಾಖೆ ಪುತ್ತೂರು, ಶ್ರೀಕೃಷ್ಣ ಭಜನಾ ಮಂದಿರ ಕೌಡಿಚ್ಚಾರು, ಕೋಟಿ ಚೆನ್ನಯರ ಬಳಗ ಪಾಪೆಮಜಲು,ಕೌಡಿಚ್ಚಾರು ವಿವೇಕಾನಂದ ಯುವಕ ಮಂಡಲ ಸಹಯೋಗದಲ್ಲಿ ಜ. 23 ರಂದು ಶ್ರೀಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಸಭಾಭವನದಲ್ಲಿ ವಿವಿಧ ಶಿಬಿರಗಳಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಶ್ರೀಕೃಷ್ಣ ಭಜನಾ ಮಂದಿರದ ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಾ ಹಾರೈಸಿದರು. ವೇದಿಕೆಯಲ್ಲಿ ಪುತ್ತೂರು ಅಂಚೆ ಇಲಾಖೆಯ ಹಿರಿಯ ಅಧೀಕ್ಷಕರಾದ ಉಷಾ, ಉಪ ಅಧೀಕ್ಷಕರಾದ ಚಂದ್ರ ನಾಯ್ಕ, ಬ್ಯಾಂಕ್ ಆಫ್ ಬರೋಡಾ ಕಾವು ಶಾಖೆಯ ಕಿರಣ್, ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು, ಪಂಚಾಯತ್ ಪಿ.ಡಿ.ಓ ಸುನೀಲ್ ಕುಮಾರ್ ಉಪಸ್ಥಿತರಿದ್ದರು. ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಸಭಾಧ್ಯಕ್ಷತೆ ವಹಿಸಿದ್ದರು.
ಮಾಹಿತಿ:- ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸುರಕ್ಷಾಣಾಧಿಕಾರಿ ನೇತ್ರ, ಬ್ಯಾಂಕ್ ಆಫ್ ಬರೋಡಾದ ಕಿರಣ್ ಇಲಾಖೆಯ ಮಾಹಿತಿ ನೀಡಿದರು.
ಸನ್ಮಾನ:- ಅರಿಯಡ್ಕ ಪಂಚಾಯತ್ ವ್ಯಾಪ್ತಿಯ ಸಾಧಕರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮಾದರಿ ಹೈನುಗಾರಿಕೆ ಮಾಡುತ್ತಿರುವ ಸಂದೇಶ್ ಚಾಕೋಟೆ, ನರೇಗಾ ಯೋಜನೆಯಡಿ ಕೆಲಸ ಮಾಡಿ ಮಾದರಿ ಕೃಷಿಕರಾದ ಚೆರಿಯ ಕುಂಞ ಮಣಿಯಾಣಿ ಕುರಿಂಜ, ಸ್ಯಾಕ್ಸೋಪೋನ್ ವಾದಕ ಸಂದೀಪ್ ದೇವಾಡಿಗ ಅರಿಯಡ್ಕ, ಹಿರಿಯ ಟೈಲರಿಂಗ್ ವೃತ್ತಿ ಮಾಡುತ್ತಿರುವ ಚಿಕ್ಕಪ್ಪ ರೈ ಕಾವು, ಕೊಳಲು ವಾದಕ ಹರೀಶ್ ತ್ಯಾಗರಾಜೆ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೌಲಭ್ಯಗಳು:- ಆಯುಷ್ಮಾನ್ ಕಾರ್ಡು ನೋಂದಣಿ, ಆರೋಗ್ಯ ತಪಾಸಣೆ, ಆಧಾರ್ ತಿದ್ದುಪಡಿ ಮುಂತಾದ ಸೌಲಭ್ಯಗಳನ್ನು ಸಾರ್ವಜನಿಕರು ಪಡೆದುಕೊಂಡರು. ಅಂಗನವಾಡಿ ಬಾಲಕರಿಗೆ ಸ್ವಸ್ಥ ಬಾಲಿಕ್ ವಿಜೇತರನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಬೆಳ್ಳಾರೆ ಅಂಚೆ ಇಲಾಖೆಯ ಅಂಚೆ ಪಾಲಕರಾದ ಲಕ್ಷ್ಮಣ ನಾಯ್ಕ ಕುತ್ಯಾಡಿ, ಪಂಚಾಯತ್ ಸದಸ್ಯರಾದ ಸೌಮ್ಯ ಬಾಲಸುಬ್ರಹ್ಮಣ್ಯ, ಅನಿತಾ ಆಚಾರಿಮೂಲೆ, ನಾರಾಯಣ ನಾಯ್ಕ ಚಾಕೋಟೆ, ಪುಪ್ಪಲತಾ, ದಿವ್ಯನಾಥ ಶೆಟ್ಟಿ ಕಾವು, ಅಬ್ದುಲ್ ರಹಿಮಾನ್ ಕಾವು, ಸಲ್ಮಾ ಕಾವು, ಉಷಾರೇಖಾ ರೈ ಅಮೈ, ರಾಜೇಶ್ ಮಣಿಯಾಣಿ ತ್ಯಾಗರಾಜೆ, ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಸುರಕ್ಷಾಣಾಧಿಕಾರಿ ನವ್ಯ, ಸಮುದಾಯ ಆರೋಗ್ಯಧಿಕಾರಿಗಳಾದ ಚೇತನಾ ಮತ್ತು ಅಶ್ವಿನಿ ಪಂಚಾಯತ್ ಕಾರ್ಯದರ್ಶಿ ಶಿವರಾಮ ಮೂಲ್ಯ, ಕೋಟಿ ಚೆನ್ನಯರ ಗೆಳೆಯರ ಬಳಗ ಪಾಪೆಮಜಲು ಇದರ ಸದಸ್ಯರು, ವಿವೇಕಾನಂದ ಯುವಕ ವೃಂದ ಕೌಡಿಚ್ಚಾರು ಇದರ ಸದಸ್ಯರು, ಶ್ರೀಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇದರ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಅಂಚೆ ಇಲಾಖೆಯ ಸಿಬ್ಬಂದಿಗಳು, ಬ್ಯಾಂಕ್ ಆಫ್ ಬರೋಡಾದ ಸಿಬ್ಬಂದಿಗಳು ಮತ್ತು ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.
ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ವಸಂತ್ ಸನ್ಮಾನಿತರ ಪಟ್ಟೆ ವಾಚಿಸಿ, ಯಕ್ಷಿತಾ ಪ್ರಾರ್ಥಿಸಿದರು. ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ವಂದಿಸಿ, ಪಂಚಾಯತ್ ಸದಸ್ಯ ಹರೀಶ್ ರೈ ಜಾರತ್ತಾರು ಕಾರ್ಯಕ್ರಮ ನಿರೂಪಿಸಿದರು.