ಕಾವು: ಮಾಡ್ನೂರು ಗ್ರಾಮದ ಕಾವು ನನ್ಯ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ ಜ 23 ರಂದು ನಡೆಯಿತು.ಕಾರ್ಯಕ್ರಮವನ್ನು ಪುಟಾಣಿ ಮಕ್ಕಳಾದ ಜಸ್ವಿನ್ ಮತ್ತು ಶ್ರೀಹಾನ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಎಲ್ಲಾ ಪುಟಾಣಿಗಳು ಬಾಲಮೇಳದ ಕುರಿತು ಮಾತನಾಡಿದರು.ನಂತರ ಪುಟಾಣಿಗಳಿಂದ ನ್ರತ್ಯ, ಕಥೆ, ಛದ್ಮವೇಷ,ವಾರದ ವಿಷಯದ ಬಗ್ಗೆ ಪರಿಚಯ ಮಾಡಿ ಮನರಂಜಿಸಿದರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಗನವಾಡಿ ಮೇಲ್ವಿಚಾರಕರಾದ ಸುಲೋಚನಾ ಇಲಾಖೆಯ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಹಿರಿಯ ಪ್ರಾಥಮಿಕ ನನ್ಯ ಶಾಲೆಯ ಮುಖ್ಯಗುರು ಮೇಬಲ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಅನಿತಾ ಆಚಾರಿಮೂಲೆ, ಜಯಂತಿ ಪಟ್ಟುಮೂಲೆ,ಸಮಿತಿಯ ಅಧ್ಯಕ್ಷರು, ಪೋಷಕರು ಉಪಸ್ಥಿತರಿದ್ದರು. ಮಕ್ಕಳಿಗೆ ಹಾಗೂ ಸ್ತ್ರೀ ಶಕ್ತಿ ಸದಸ್ಯರಿಗೆ ,ಪೋಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಚಂದ್ರಶೇಖರ ಬಲ್ಯಾಯ ಬಹುಮಾನದ ಪ್ರಯೋಜಕತ್ವ ನೀಡಿದ್ದರು. ಸುಬ್ಬ ಪಟಾಳಿ ಪಟ್ಟುಮೂಲೆ ಭೋಜನದ ಪ್ರಯೋಜಕತ್ವ ನೀಡಿದ್ದರು. ಪುಟಾಣಿ ಮಕ್ಕಳಾದ ಸಾಗರಿಕ್, ಜಸ್ವಿನ್, ಪರೀಕ್ಷಿತ್,ಶ್ರೀಹಾನ್,ಪ್ರಜ್ಞಾ,ಪುನೀತ್,ವೈಷ್ಣವಿ, ಜಾನ್ವಿ,ಚಿಂತನ್,ಮೋನಿಷ್ ಪ್ರಾರ್ಥಿಸಿದರು. ಮೋನಿಷ್ ಸ್ವಾಗತಿಸಿದರು. ಶ್ರೀಹಾನ್ ವಂದಿಸಿದರು.ಅಂಗನವಾಡಿ ಕಾರ್ಯಕರ್ತೆ ಸೀತಾರತ್ನ, ಸಹಾಯಕಿ ಶಾರದಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.