ಪುತ್ತೂರು: ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಈಶ್ವರಮಂಗಲ ವಲಯ, ನೆಟ್ಟಣಿಗೆ ಮುಡ್ನೂರು ಗ್ರಾಮ ಇದರ ವಾರ್ಷಿಕೋತ್ಸವದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯದತ್ತ ವೃತ ಪೂಜೆ, ಧಾರ್ಮಿಕ ಸಭೆ, ವಿಕಾಸವಾಹಿನಿ ಸ್ವ-ಸಹಾಯ ಸಂಘಗಳ ಲಾಭಾಂಶ ವಿತರಣಾ ಸಮಾರಂಭ ಜ.26 ರಂದು ಶ್ರೀ ಕ್ಷೇತ್ರ ಹನುಮಗಿರಿಯ ವೈದೇಹಿ ಸಭಾಭವನದಲ್ಲಿ ನಡೆಯಿತು.
ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಬಳಿಕ ಶ್ರೀ ಸತ್ಯದತ್ತ ವೃತಪೂಜೆ ನಡೆಯಿತು. ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಭಜನಾ ಸಂಘ, ಶ್ರೀ ಗುರುದೇವಾ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಿತು. ಒಡಿಯೂರು ಶ್ರೀಗಳ ಆಗಮನ, ಸಿಂಗಾರಿ ಮೇಳ ಹಾಗೂ ಮಕ್ಕಳ ಕುಣಿತ ಭಜನೆಯೊಂದಿಗೆ ವೈದೇಹಿ ಸಭಾಭವನ, ಹನುಮಗಿರಿಗೆ ಶೋಭಾಯಾತ್ರೆ ನಡೆಯಿತು. ಶ್ರೀ ಹರಿಹರಸುತ ಸಿಂಗಾರಿ ಮೇಳ ದೇಲಂಪಾಡಿ, ಶ್ರೀರಾಮ ಮಕ್ಕಳ ಕುಣಿತ ಭಜನಾ ಸಂಘ ದೇಲಂಪಾಡಿ, ಓಂಕಾರ ಮಕ್ಕಳ ಕುಣಿತ ಭಜನಾ ಸಂಘ ಕುಂಟಾರು, ಶ್ರೀ ವಿಷ್ಣು ಮಕ್ಕಳ ಕುಣಿತ ಭಜನಾ ಸಂಘ ಬೆಳ್ಳಿಗೆ, ಶ್ರೀ ಪಂಚಲಿಂಗೇಶ್ವರ ಭಜನಾ ಸಂಘ ಈಶ್ವರಮಂಗಲ, ಶ್ರೀ ರಾಜರಾಜೇಶ್ವರಿ ಮಕ್ಕಳ ಕುಣಿತ ಭಜನಾ ಸಂಘ ಪಡುಮಲೆ ತಂಡಗಳು ಭಾಗವಹಿಸಿದವು.
ಆ ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಸಮಾಜಕ್ಕೆ ಒಡಿಯೂರು ಕ್ಷೇತ್ರದಿಂದ ಒಳ್ಳೆಯ ಸಂದೇಶ ರವಾನೆಯಾಗುತ್ತಿದೆ. ತುಳು ಭಾಷೆಗೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದು , ಇದಕ್ಕೆ ಪೂರಕವಾಗಿ ವಿಧಾನಸಭೆಯಲ್ಲೂ ತುಳು ಮಾತನಾಡಿದ್ದೇನೆ,ಮುಂದಿನ ದಿನಗಳಲ್ಲಿ ತುಳು ರಾಜ್ಯದ ಹೆಚ್ಚುವರಿ ಭಾಷೆಯಾಗಿ ಮೂಡಬರಲಿದೆ ಎಂದು ಶಾಸಕರು ಹೇಳಿದರು.
ನನಗೆ ಆಶೀರ್ವಾದ ಮಾಡಿದ್ದರು:
ಚುನಾವಣೆ ಸಮಯದಲ್ಲಿ ನನಗೆ ಒಡಿಯೂರು ಶ್ರೀಗಳು ಪೂರ್ಣ ಪ್ರಮಾಣದ ಆಶೀರ್ವಾದ ಮಾಡಿದ್ದರು. ಅವರ ಆಶೀರ್ವಾದ ನನಗೆ ದೊರೆತ ಕಾರಣ ನಾನು ಶಾಸಕನಾಗಿದ್ದೇನೆ ಎಂದು ಹೇಳಲು ಅಭಿಮಾನ ಪಡುತ್ತೇನೆ ಎಂದರು.
ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಶುಭಾಶಂಸನೆ ಗೈದರು., ಹಿರಿಯ ವೈದ್ಯ, ಸಾಹಿತಿ, ದೇಲಂಪಾಡಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಡಾ| ರಮಾನಂದ ಬನಾರಿ ಮಂಜೇಶ್ವರ, ಪುತ್ತಿಲ ಪರಿವಾರ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ, ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಪ್ರಗತಿಪರ ಕೃಷಿಕ ಶ್ರೀಕೃಷ್ಣ ಭಟ್ ಮುಂಡ್ಯ, ಯುವ ಉದ್ಯಮಿ ಸಹಜ್ ರೈ ಬಳಜ್ಜ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸಹಕಾರ ರತ್ನ ಎ. ಸುರೇಶ್ ರೈ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಯೋಜನಾ ನಿರ್ದೇಶಕರ ಕಿರಣ್ ಉರ್ವ, ಈಶ್ವರಮಂಗಲ ವಲಯ ಅಧ್ಯಕ್ಷ ಶಿವರಾಮ ಪೂಜಾರಿ ಕೆರೆಮಾರು ಮುಖ್ಯ ಅತಿಥಿಗಳಾಗಿ ಭಾಗಹಿಸಿದರು. ಶಿವರಾಮ ಪೂಜಾರಿ ಕೆರೆಮಾರು ಸ್ವಾಗತಿಸಿ, ರಾಜೇಂದ್ರ ಪ್ರಸಾದ್ ರೈ ಮೇನಾಲ ಕಾರ್ಯಕ್ರಮ ನಿರೂಪಿಸಿದರು.
ನಿವೃತ್ತ ಮುಖ್ಯಗುರು, ಯೋಗ ಶಿಕ್ಷಕ ಸದಾಶಿವ ರೈ ನಡುಬೈಲು, ಹಿರಿಯ ಯಕ್ಷಗಾನ ಕಲಾವಿದ ಬಾಲಕೃಷ್ಣ ಗೌಡ ದೇಲಂಪಾಡಿ, ನಾಟಿ ವೈದ್ಯ ವಿಶ್ವನಾಥ ಪೂಜಾರಿ ಸಸ್ಯ ಸಂಜೀವಿನಿ, ಪ್ರಗತಿಪರ ಕೃಷಿಕ ಮೋನಪ್ಪ ಪೂಜಾರಿ ಕೆರೆಮಾರುರವರನ್ನು ಗೌರವಿಸಲಾಯಿತು. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.