





ವಿಟ್ಲ: ವ್ಯಕ್ತಿಯೋರ್ವರಿಗೆ ಅವಾಚ್ಯವಾಗಿ ಬೈದು, ಕೊಲೆ ಬೆದರಿಕೆ ಹಾಕಿ, ಹಲ್ಲೆ ಮಾಡಿದ ಘಟನೆ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದಲ್ಲಿ ನಡೆದಿದೆ.



ಜ.23 ರಂದು ರಾತ್ರಿ ತೀರ್ಥಪ್ರಸಾದ್ ಗೌಡರವರು ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ನಡುಮನೆ ಎಂಬಲ್ಲಿ ರಸ್ತೆಯಲ್ಲಿದ್ದಾಗ, ಆರೋಪಿಗಳಾದ ಶರ್ಮಿಳಾ, ಗಂಗಾಧರ, ಧರ್ಣಪ್ಪಗೌಡ, ಅಜಯ್, ಸತೀಶ, ಜೀವನ್, ಗಿರಿಯಪ್ಪ ಗೌಡ ಎಂಬವರು ಬೇರೆ ಬೇರೆ ವಾಹನಗಳಲ್ಲಿ ಬಂದು ತೀರ್ಥಪ್ರಸಾದ್ರಿಗೆ ಕೈಯಿಂದ ಹಲ್ಲೆ ಮಾಡಿ, ಅವಾಚ್ಯವಾಗಿ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ. ತೀರ್ಥಪ್ರಸಾದ್ ಗೌಡ ಹಾಗೂ ಅವರ ಪತ್ನಿಯ ನಡುವೆ ಮನಸ್ತಾಪವಿದ್ದು, ಇದೇ ಕಾರಣಕ್ಕೆ ಗಂಗಾಧರ ಎಂಬಾತನೊಂದಿಗೂ ಮನಸ್ತಾಪವಾಗಿತ್ತು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 12/2024 ಕಲಂ: 143,147,323,504,506 ಜೊತೆಗೆ 149 ಐಪಿಸಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.













