ಪುತ್ತೂರು : ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲುರವರನ್ನು ಅಭಿನಂದಿಸುವ ಸರಳ ಸಮಾರಂಭ ಸಂಘದ ಸಭಾಭವನದಲ್ಲಿ ಜರಗಿತು.
ಸಂಘದ ನಿರ್ದೇಶಕರಾದ ಉದಯ ರೈ ಮಾದೋಡಿ, ಗಣೇಶ್ ನಿಡ್ವಣ್ಣಾಯ, ಚೆನ್ನಪ್ಪ ಗೌಡ ನೂಜಿ, ಪ್ರಕಾಶ್ ರೈ ಸಾರಕೆರೆ, ಅಶ್ವಿನ್ ಎಲ್ ಶೆಟ್ಟಿ, ಶಿವಪ್ರಸಾದ್ ಕಳುವಾಜೆ, ಗಂಗಾಧರ ಪೆರಿಯಡ್ಕ, ತಿಮ್ಮಪ್ಪ, ಜ್ಞಾನೇಶ್ವರಿ, ಸೀತಾಲಕ್ಷ್ಮೀ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಉಪಸ್ಥಿತರಿದ್ದರು.
ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ , ಸುಬೋಧ್ ಶೆಟ್ಟಿ ಮೇನಾಲರವರುಗಳು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ, ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು,ಬಿಜೆಪಿ ಸುಳ್ಯ ಮಂಡಲ ಕಾರ್ಯದರ್ಶಿ ಇಂದಿರಾ ಬಿ.ಕೆ., , ಸವಣೂರು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಬಿ.ಎಸ್, ಸದಸ್ಯರಾದ ಗಿರಿಶಂಕರ ಸುಲಾಯ,ರಾಜೀವಿ ಶೆಟ್ಟಿ ,ತೀರ್ಥರಾಮ ಕೆಡೆಂಜಿ, ಶೀನಪ್ಪ ಶೆಟ್ಟಿ ನೆಕ್ರಾಜೆ ,ಚಂದ್ರಾವತಿ ಸುಣ್ಣಾಜೆ ,ತಾರಾನಾಥ ಬೊಳಿಯಾಲ, ಬೆಳಂದೂರು ಗ್ರಾ.ಪಂ.ಉಪಾಧ್ಯಕ್ಷ ಜಯಂತ ಅಬೀರ ,ಸದಸ್ಯರಾದ ಮೋಹನ ಅಗಳಿ, ಲೋಹಿತಾಕ್ಷ ಕೆಡೆಂಜಿಕಟ್ಟ,ಪ್ರವೀಣ್ ಕೆರೆನಾರು,ಬಿಜೆಪಿ ಪಾಲ್ತಾಡಿ ಶಕ್ತಿ ಕೇಂದ್ರ ಪ್ರಮುಖ್ ಮಹೇಶ್ ಕೆ.ಸವಣೂರು ,ಸತೀಶ್ ಬಲ್ಯಾಯ ,ಸುಪ್ರೀತ್ ರೈ ಖಂಡಿಗ,ಪ್ರಜ್ವಲ್ ಕೆ.ಆರ್,ಸುರೇಶ್ ರೈ ಸೂಡಿಮುಳ್ಳು ,ಯಶವಂತ ಕಳುವಾಜೆ ,ಅನಿಲ್ ಖಂಡಿಗ ,ಶ್ರೀಧರ ಇಡ್ಯಾಡಿ,ಲಿಂಗಪ್ಪ ರೈ ಚೆಂಬುತ್ತೋಡಿ ,ಲೋಕೇಶ್ ಬರೆಪ್ಪಾಡಿ,ನಿರ್ಮಲ ಕೇಶವ ಅಮೈ ,ಪ್ರಸಾದ್ ರೈ ಬೈಲಾಡಿ ಮೊದಲಾದವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಕಾರ್ಯಕರ್ತನಾಗಿ ಬೆಳೆದು ಅಧ್ಯಕ್ಷರಾದ ಕಾಯರ್ಗ
ಸವಣೂರು ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತಾರಾನಾಥ ಕಾಯರ್ಗರವರು ಸರಳತೆ ಮತ್ತು ಸಜ್ಜನಿಕೆ ವ್ಯಕ್ತಿತ್ವವನ್ನು ಹೊಂದಿದ್ದು, ಬಿಜೆಪಿ ಕಾರ್ಯಕರ್ತನಾಗಿ ಬೆಳೆದು ಇದೀಗ ಸವಣೂರು ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ.
ಸಮಾಜದಲ್ಲಿ ಎಲ್ಲರ ವಿಶ್ವಾಸವನ್ನು ಗಳಿಸಿಕೊಂಡಿದ್ದಾರೆ, ಸವಣೂರು ಯುವಕ ಮಂಡಲದ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಹೆಸರನ್ನು ಗಳಿಸಿ ಜಿಲ್ಲಾ ಯುವ ಪ್ರಶಸ್ತಿ ಪಡೆದರು. ಯುವಕ ಮಂಡಲದ ಸಹಸಂಸ್ಥೆಯಾಗಿರುವ ಬೊಳ್ಳಿ ಬೊಲ್ಪು ತುಳುಕೂಟ ಸಂಸ್ಥೆಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿಕನಾಗಿ, ಪ್ರಿಂಟಿಂಗ್ ಉದ್ಯಮ ಕ್ಷೇತ್ರದಲ್ಲಿ ತನ್ನ ವೃತ್ತಿ ಬದುಕನ್ನು ಸಾಗಿಸುತ್ತಿರುವ ಇವರು ಸವಣೂರು ಸುದ್ದಿ ಸೆಂಟರ್ನ ಮುಖ್ಯಸ್ಥರಾಗಿ, ಸುದ್ದಿ ಬಿಡುಗಡೆಯ ವಿತರಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತಾರಾನಾಥ ಕಾಯರ್ಗರವರು ಸವಣೂರು ಭಾಗದಲ್ಲಿ ಸುದ್ದಿ ಪತ್ರಿಕೆಯನ್ನು ಬೆಳೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಪತ್ನಿ ಧನಲಕ್ಷ್ಮಿ ತಾರಾನಾಥ ಕಾಯರ್ಗ, ಪುತ್ರ ಪ್ರಥಮ್ ಕಾಯರ್ಗ, ಪುತ್ರಿ ಪ್ರತ್ಯುಷಾರೊಂದಿಗೆ ಸವಣೂರಿನಲ್ಲಿ ವಾಸಿಸುತ್ತಿದ್ದಾರೆ.