ಬಿಎಂಎಸ್ ಅಟೋರಿಕ್ಷಾ ಚಾಲಕ, ಮಾಲಕರ ಸಂಘದ ಮಹಾಸಭೆ-ಐವರಿಗೆ `ಹಿರಿಯ ಆಟೋ ಸಾರಥಿ’ ಬಿರುದು, ಕ್ಷೇಮ ನಿಧಿ ವಿತರಣೆ

0

ರವೀಂದ್ರ ಶೆಟ್ಟಿ ನುಳಿಯಾಲುರವರಿಗೆ ಸನ್ಮಾನ
25ಮಂದಿ ಅದೃಷ್ಟವಂತ ಚಾಲಕರಿಗೆ ಕುಕ್ಕರ್ ವಿತರಣೆ

ಪುತ್ತೂರು:ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವ ಮಜ್ದೂರು ಸಂಘವು, ಬಿಎಂಎಸ್ ಕಾರ್ಮಿಕರು ಕೂಡಾ ಮಾಲಕರಾಗಬಹುದೆಂದು ತೋರಿಸಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.


ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜ.27ರಂದು ನಡೆದ ಬಿ.ಎಂ.ಎಸ್ ಅಟೋ ರಿಕ್ಷಾ ಚಾಲಕ-ಮಾಲಕರ ಸಂಘದ ೪೨ನೇ ವಾರ್ಷಿಕ ಮಹಾಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ದೇಶದ ದೊಡ್ಡ ಮಾನವ ಸಂಪತ್ತು ಬಿ.ಎಮ್.ಎಸ್.ಸಮಾಜದ ಕಟ್ಟಕಡೆಯ ವ್ಯಕ್ತಿಯಾಗಿದ್ದರೂ ತಾವೇನೂ ಕಡಿಮೆ ಇಲ್ಲವೆಂಬಂತೆ ನಾವು ಜೀವನ ಪರ್ಯಂತ ಕಾರ್ಮಿಕರಾಗಿ ಉಳಿಯದೇ ಮಾಲಕರೂ ಆಗಬಹುದೆಂದು ಬಿಎಮ್‌ಎಸ್ ತೊರಿಸಿದೆ.ಸಂಘ ಶಕ್ತಿಯೇ ರಾಷ್ಟ್ರಶಕ್ತಿ.ಕಷ್ಟದಲ್ಲಿರುವವರಿಗೆ ಸಹಾಯವಾಗಬೇಕು,ಸಮಸ್ಯೆ ಬಂದಾಗ ಒಟ್ಟಾಗಬೇಕು. ವೃತ್ತಿಧರ್ಮ ಪಾಲನೆ ಮಾಡಿದಾಗ ಸಮಾಜ ನಿಮ್ಮಲ್ಲಿ ವಿಶ್ವಾಸ ಇಡುತ್ತದೆ ಎಂದು ಮಠಂದೂರು ಹೇಳಿದರು.


ಪ್ರಯಾಣಿಕರಿಗೆ ರಾತ್ರಿ ಸಮಯ ಅಟೋ ಚಾಲಕರಲ್ಲಿ ಮಾತ್ರ ವಿಶ್ವಾಸ:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ರವೀಂದ್ರ ಶೆಟ್ಟಿ ನುಳಿಯಾಲು ಅವರು ಮಾತನಾಡಿ, ಶಿಸ್ತು ಬದ್ದ ಕಾರ್ಯಕ್ರಮವನ್ನು ಹೇಗೆ ಮಾಡುವುದು ಎಂದು ಬಿಎಂಎಸ್‌ನಿಂದ ಕಲಿಯಬೇಕಾಗಿದೆ.ರಿಕ್ಷಾವನ್ನೇ ಜೀವನವನ್ನಾಗಿಸಿದವರು ಬಹಳಷ್ಟು ಮಂದಿ ಇದ್ದಾರೆ.ಸಮಾಜದಲ್ಲಿ ನಿಮಗೆ ಗೌರವವಿದೆ.ಯಾಕೆಂದರೆ ಎಷ್ಟು ತಡ ರಾತ್ರಿಯಾದರೂ ಅಟೋ ರಿಕ್ಷಾದವರ ಮೇಲೆ ಪ್ರಯಾಣಿಕರು ವಿಶ್ವಾಸ ಹೊಂದಿರುತ್ತಾರೆ.ಅಟೋ ರಿಕ್ಷಾದಲ್ಲಿ ಯಾವುದೇ ವಸ್ತು ಬಿಟ್ಟು ಹೋದರೂ ಅದನ್ನು ಪ್ರಾಮಾಣಿಕವಾಗಿ ಹಿಂದಿರುಗಿಸುವ ಗುಣ ನಿಮ್ಮಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಅಟೋ ರಿಕ್ಷಾ ನಗರದ ನಾಡಿ ಮಿಡಿತ: ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಅವರು ಮಾತನಾಡಿ ಪುತ್ತೂರು ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿ ಅಟೋ ನೀಡಿ ಸಹಕರಿಸಿದ ಸಂಘಕ್ಕೆ ಅಭಿನಂದನೆ ಸಲ್ಲಿಸಿದರಲ್ಲದೆ,ಅಟೋ ರಿಕ್ಷಾ ನಗರದ ನಾಡಿ ಮಿಡಿತ.ಕಣ್ಣು, ಕಿವಿಯಾಗಿ ರಿಕ್ಷಾ ಚಾಲಕರು ನಗರದೊಳಗೆ ಇರುತ್ತಾರೆ.ಇಂತಹ ಸಂದರ್ಭದಲ್ಲಿ ರಿಕ್ಷಾ ಚಾಲಕರು ತಮ್ಮ ರಕ್ಷಣೆಗಾಗಿ ಆರೋಗ್ಯ ವಿಮೆ ಮಾಡಿಸಿಕೊಳ್ಳಿ.ಇದರ ಜೊತೆಗೆ ಆಪತ್ಪಾಂಧವ ಸಾರಥಿ ಯೋಜನೆ ಮಾಡಿ ಎಂದರು.


ರಿಕ್ಷಾ ಚಾಲಕರಿಗೆ ಸಮಸ್ಯೆಯಾದಾಗ ನಗರಸಭೆ ಸ್ಪಂದಿಸಿದೆ: ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ನಗರಸಭೆ ವ್ಯಾಪ್ತಿಯಲ್ಲಿ ರಿಕ್ಷಾ ಚಾಲಕರಿಗೆ ಯಾವುದೇ ಸಮಸ್ಯೆಗಳಾದಾಗ ನಗರಸಭೆಯಿಂದ ವ್ಯವಸ್ಥೆ ಮಾಡಿಕೊಟ್ಟಿzವೆ.ನಾನೂ 20ರ ವಯೋಮಾನದಲ್ಲಿ ಪ್ರಥಮವಾಗಿ ಖರೀದಿಸಿದ್ದು ಆಟೋ ರಿಕ್ಷಾ.ಅದರ ಮುಂದೆ ಧರ್ಮ ಚಕ್ರ’ ಎಂದು ಹೆಸರು ಬರೆದಿದ್ದೆ.ಹಾಗಾಗಿ ನನಗೂ ಆಟೋ ರಿಕ್ಷಾ ಚಾಲಕ ಮಾಲಕರೊಂದಿಗೆ ಅನ್ಯೋನ್ಯ ಸಂಬಂಧವಿದೆ.ನಗರ ಪ್ರದೇಶಕ್ಕೆ ಅಗತ್ಯ ಇರುವುದು ಆಟೋ ರಿಕ್ಷಾ ಮಾತ್ರ ಎಂದರು.

ಭವಿಷ್ಯದ ಭದ್ರತೆ ಯೋಜನೆ ಅತಿ ಶೀಘ್ರವಾಗಲಿದೆ: ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಅವರು ಮಾತನಾಡಿ ಕಲಿಯುಗದಲ್ಲಿ ಸಂಘ ಶಕ್ತಿಯೇ ಹೆಚ್ಚು ಮಹತ್ವ ನೀಡುತ್ತದೆ.ಇದರಿಂದ ಸರಕಾರದ ಯಾವುದೇ ಜನಪ್ರತಿನಿಧಿ ಇದ್ದರೂ ಗಟ್ಟಿ ಸ್ವರದಲ್ಲಿ ಜನಶಕ್ತಿಯಾಗಿ ಮಾತನಾಡಿ ನಮ್ಮ ಬೇಡಿಕೆ ಈಡೇರಿಸಬಹುದು ಎಂದರು.ಮುಂದಿನ ದಿನ ರಿಕ್ಷಾ ಚಾಲಕರಿಗೆ ಭವಿಷ್ಯದ ಭದ್ರತೆ ಯೋಜನೆ ಆಗಲಿದೆ ಎಂದವರು ಹೇಳಿದರು.

ಸಂಘದ ಸದಸ್ಯತ್ವ ಹೆಚ್ಚು ಮಾಡಬೇಕು: ಅಟೋ ರಿಕ್ಷಾ ಚಾಲಕ ಮಾಲಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಸುಧಾಕರ್ ನಾಯಕ್ ಅವರು ಮಾತನಾಡಿ ಸಂಘದ ಶಕ್ತಿ ಹೆಚ್ಚಾಗಲು ಸದಸ್ಯತ್ವ ಸಂಖ್ಯೆ ಜಾಸ್ತಿ ಆಗಬೇಕು. ನಾವೆಲ್ಲ ಸಂಘದ ಪದಾಧಿಕಾರಿಗಳೆಂಬ ಚಿಂತನೆಯಿಂದ ಸಂಘ ಬೆಳೆಸಬೇಕೆಂದರು.

ಸಂಘದ ಮೇಲಿನ ಪ್ರೀತಿ,ಒಗ್ಗಟ್ಟಿನಿಂದ ಸಂಘದ ಬೆಳವಣಿಗೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಎಂಎಸ್ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಕೆ ಮರೀಲ್ ಅವರು ಮಾತನಾಡಿ ಸಂಘದ ಮೇಲಿನ ಪ್ರೀತಿ ಮತ್ತು ಒಗ್ಗಟ್ಟಿನಿಂದ ಸಂಘದ ಬೆಳವಣಿಗೆ ಸಾಧ್ಯ.ಇದಕ್ಕಾಗಿ ಸಂಘಟನೆಯ ಸದಸ್ಯ ಶಕ್ತಿ ಇರಬೇಕು.ನಮ್ಮಲ್ಲಿ ೮೦೦ಕ್ಕೂ ಅಧಿಕ ಸದಸ್ಯರಿದ್ದಾರೆ.ಸಂಘದ ಸದಸ್ಯರಿಗಾಗಿ ಕ್ಷೇಮ ನಿಧಿ ಮಾಡಲಾಗಿದ್ದು,ಕಷ್ಟದಲ್ಲಿರುವವರಿಗೆ ಕಣ್ಣೀರು ಒರೆಸುವ ಕೆಲಸ ಮಾಡಬೇಕಾದರೆ ಮುಂದೆ ಸಂಘದ ಆರ್ಥಿಕತೆ ಕ್ರೋಢೀಕರಣಕ್ಕೆ ಸದಸ್ಯರು ಹೆಚ್ಚಿನ ಮುತುವರ್ಜಿವಹಿಸಬೇಕೆಂದರು.

ರವೀಂದ್ರ ಶೆಟ್ಟಿಯವರಿಗೆ ಸನ್ಮಾನ: ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಸಮಾಜ ಸೇವಕ, ಧಾರ್ಮಿಕ ನೇತಾರರೂ ಆಗಿರುವ ಎನ್. ರವೀಂದ್ರ ಶೆಟ್ಟಿ ನುಳಿಯಾಲು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಐವರು ಹಿರಿಯ ಅಟೋ ಸಾರಥಿಗಳಿಗೆ ಬಿರುದು: 2024ನೇ ಸಾಲಿನ ಬಿಎಂಎಸ್ ಅಟೋ ಸಾರಥಿ ಬಿರುದಿಗೆ ಆಯ್ಕೆಯಾದ ಹಿರಿಯ ಅಟೋ ಸಾರಥಿಗಳಾದ ಸರಕಾರಿ ಆಸ್ಪತ್ರೆ ಪಾರ್ಕ್‌ನ ನಾರಾಯಣ ಗೌಡ, ದರ್ಬೆ ಪಾರ್ಕ್‌ನ ಸದಾನಂದ, ಆದರ್ಶ ಪಾರ್ಕ್‌ನ ಬಿ.ಸೀತಾರಾಮ, ಬೊಳುವಾರು ಪಾರ್ಕ್‌ನ ನಾರಾಯಣ ಮಣಿಯಾಣಿ, ಎಪಿಎಂಸಿ ಜಿಡೆಕಲ್ಲು ಪಾರ್ಕ್‌ನ ಅಂಗಾರ ಅವರಿಗೆ ಸಂಘದಿಂದಹಿರಿಯ ಅಟೋ ಸಾರಥಿ’ ಬಿರುದು ನೀಡಿ ಗೌರವಿಸಲಾಯಿತು.


ಕ್ಷೇಮ ನಿಧಿ ವಿತರಣೆ: ಅನಾರೋಗ್ಯದ ಸಮಸ್ಯೆ ಇರುವ ಕುರಿಯ ಘಟಕದ ಅಟೋ ರಿಕ್ಷಾ ಚಾಲಕ ಇಮಾಮ್ ಸಾಹೇಬ್ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಬೂಬಕ್ಕರ್ ಕುರಿಯ ಅವರಿಗೆ ಸಂಘದ ನಿಧಿಯಿಂದ ಆರ್ಥಿಕ ನೆರವನ್ನು ಚೆಕ್ ಮೂಲಕ ನೀಡಲಾಯಿತು.ಕುರಿಯ ಬಿಎಂಎಸ್ ಘಟಕದ ಹುಸೈನ್ ಅವರು ಉಪಸ್ಥಿತರಿದ್ದರು.


ಸಂತಾಪ ಸೂಚನೆ: ಬಿಎಂಎಸ್ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರಾಗಿದ್ದು ಇತ್ತೀಚೆಗೆ ನಿಧನರಾದ ಶಶಿ ಮುರ, ಬಾಲಕೃಷ್ಣ ಭಟ್ ಬನ್ನೂರು, ಕೃಷ್ಣಪ್ಪ ಕುಲಾಲ್, ಪುರಂದರ, ವಸಂತ ಕಾಣಿಯೂರು, ಅಬ್ದುಲ್ಲ, ಶೇಷಪ್ಪ ಗೌಡ, ನಿತ್ಯಾನಂದ ನಾಯಕ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.


25 ಮಂದಿ ಅದೃಷ್ಟ ಚೀಟಿ ವಿಜೇತರಿಗೆ ಕುಕ್ಕರ್: ಕಾರ್ಯಕ್ರಮದ ಆರಂಭದಿಂದ ಕೊನೆಯ ತನಕ ಉಪಸ್ಥಿತರಿದ್ದ 25 ಮಂದಿ ಸದಸ್ಯರಿಗೆ ಅದೃಷ್ಟ ಚೀಟಿ ಡ್ರಾ ಮೂಲಕ ಕೊಂಕಣ್ ಗ್ಯಾಸ್ ಸ್ಟೇಷನ್ ಪ್ರಾಯೋಜಕತ್ವದಲ್ಲಿ ಕುಕ್ಕರ್ ಬಹುಮಾನ ನೀಡಲಾಯಿತು.

ಸಂಘದ ಸದಸ್ಯ ಹೇಮಂತ್ ವಾರ್ಷಿಕ ವರದಿ ಮಂಡಿಸಿದರು.ಕೋಶಾಧಿಕಾರಿ ಬಿ.ಜನಾರ್ದನ ಪೂಜಾರಿ ಲೆಕ್ಕಪತ್ರ ಮಂಡಿಸಿದರು.ಸಂಘದ ಮಾಜಿ ಅಧ್ಯಕ್ಷ ಜಿ.ಹುಸೈನ್, ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡ, ಕೋಶಾಧಿಕಾರಿ ಬಿ.ಜನಾರ್ದನ ಪೂಜಾರಿ, ಬಿಎಂಎಸ್ ಉಪ್ಪಿನಂಗಡಿ ಘಟಕದ ಹರೀಶ್, ಕುರಿಯ ಘಟಕದ ಅಧ್ಯಕ್ಷ ಜಿ.ಹುಸೈನ್, ರಾಮಕುಂಜ ಘಟಕದ ಅಧ್ಯಕ್ಷ ಪೂವಪ್ಪ, ಪುರುಷರಕಟ್ಟೆ ಘಟಕದ ಮಾದಪ್ಪ, ಸುಳ್ಯಪದವು ಘಟಕದ ಅಧ್ಯಕ್ಷ ರಮೇಶ್, ಕಾಣಿಯೂರು ಘಟಕದ ಅಧ್ಯಕ್ಷ ಮಾಧವ, ಕೊಯಿಲ ಘಟಕದ ಅಧ್ಯಕ್ಷ ಶ್ರೀರಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬಾಲಕೃಷ್ಣ ರೈ ಮುಂಡೂರು, ಮಾಜಿ ಅಧ್ಯಕ್ಷರಾದ ರಾಘವೇಂದ್ರ ರೈ,ಭಾಸ್ಕರ್ ನಾಕ್ ನೆಹರುನಗರ, ಮಹಾಲಿಂಗ ಪಾಟಾಳಿ, ಶಶಿಶೇಖರ್, ದಾಮೋದರ್ ಪೂಜಾರಿ, ಶ್ರೀನಿವಾಸ್ ರೈ, ಗಣೇಶ್ ನಾಯಕ್, ನಾರಾಯಣ ಸಂಪ್ಯ,ರೂಪೇಶ್,ಸುರೇಂದ್ರ, ಪ್ರಶಾಂತ್ ಕೆಮ್ಮಾಯಿ, ಉದಯ ಮರೀಲ್, ನಝೀರ್ ಮರಿಲ್, ಸುಂದರ ನಾಯ್ಕ್, ರಮೇಶ್ ತೆಂಕಿಲ, ಹರೀಶ್ ರಾವ್, ಜನಾರ್ದನ, ಸುರೇಶ್ ಬನ್ನೂರು, ದೇವಿಪ್ರಸಾದ್ ಕೊಯಿಲ, ಸುರೇಶ್ ಪುರುಷರಕಟ್ಟೆ, ಆನಂದ ಪೂಜಾರಿ ಅತಿಥಿಗಳನ್ನು ಗೌರವಿಸಿದರು.ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಪ್ರಾರ್ಥಿಸಿದರು.ಸಂಘದ ಮಾಜಿ ಕಾರ್ಯದರ್ಶಿ ಮಹೇಶ್ ಪ್ರಭು ಮಣಿಯ ಕಾರ್ಮಿಕ ಗೀತೆ ಹಾಡಿದರು.ಸಂಘದ ಮಾಜಿ ಅಧ್ಯಕ್ಷ ಮಹೇಶ್ ಪ್ರಭು ಸ್ವಾಗತಿಸಿ,ವಂದಿಸಿದರು.ಮಾಜಿ ಅಧ್ಯಕ್ಷ ಸತೀಶ್ ಮಣಿಯ ಕಾರ್ಯಕ್ರಮ ನಿರೂಪಿಸಿದರು.

ನೂತನ ಪದಾಧಿಕಾರಿಗಳ ಘೋಷಣೆ
ಸಂಘದ ನೂತನ ಸಮಿತಿ ಘೋಷಣೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಡಾ.ಎಂ.ಕೆ ಪ್ರಸಾದ್, ಅಧ್ಯಕ್ಷರಾಗಿ ರಾಜೇಶ್ ಮರೀಲ್ ಕೆ ಪುನರಾಯ್ಕೆಗೊಂಡರು.ಪ್ರಧಾನ ಕಾರ್ಯದರ್ಶಿಯಾಗಿ ಹೇಮಂತ, ಕೋಶಾಧಿಕಾರಿಯಾಗಿ ದಯಾನಂದ ಪ್ರಭು ಸಹಿತ ಇತರ ಪದಾಧಿಕಾರಿಗಳ ಹೆಸರನ್ನು ಸಂಘದ ಮಾಜಿ ಗೌರವಾಧ್ಯಕ್ಷ ದೇವಪ್ಪ ಗೌಡ ಅವರು ಘೋಷಣೆ ಮಾಡಿದರು.

LEAVE A REPLY

Please enter your comment!
Please enter your name here