ಪುತ್ತೂರು,ಕಡಬ ತಾ. ವಿಕಲಚೇತನರ ಬಹುಮಟ್ಟದ, ಗ್ರಾಮೀಣ, ನಗರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ

0

ಪುತ್ತೂರು: ಪುತ್ತೂರು/ಕಡಬ ತಾಲೂಕಿನ ವಿಕಲಚೇತನರ ಬಹುಮಟ್ಟದ ಪುನರ್ವಸತಿ ಕಾರ್ಯಕರ್ತರು/ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ ಪುತ್ತೂರು ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿ ಭಾಸ್ಕರ್ ಪುತ್ತೂರು, ಕಡಬ ತಾಲೂಕಿನ ಎಲ್ಲಾ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಯು.ಡಿ.ಐಡಿ ಪ್ರಗತಿವಾರು ವರದಿ ಪರಿಶೀಲನೆ ಮಾಡಿದರು. 18ವರ್ಷ ವಿಕಲ ಚೇತನರ ಮಾಹಿತಿಯನ್ನು ಮೇಲ್ಪಟ್ಟ ಮತದಾರ ಮಾಹಿತಿಯನ್ನು ಬಿ.ಎ.ಓ ಗಳನ್ನು ಭೇಟಿ ಮಾಡಿ ಸಂಗ್ರಹಣೆ ಮಾಡಲು ಗ್ರಾಮೀಣ ನಗರ ಪುನರ್ವಸತಿ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಆಧಾರ್ ಕಾರ್ಡ್ ಇಲ್ಲದೇ ಇರುವ ವಿಕಲಚೇತನರಿಗೆ ತಹಸೀಲ್ದಾರ್ ಗಮನಕ್ಕೆ ತಂದು ಆಧಾರ್ ಕಾರ್ಡ್ ಮಾಡಿಸುವಂತೆ ಸೂಚನೆ ನೀಡಿದರು. 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ವಿಕಲಚೇತನರಿಗೆ ವಾಹನ ವ್ಯವಸ್ಥೆ, ಅಂಧರಿಗೇ ಬ್ರೈಲ್ ಲಿಪಿ ವ್ಯವಸ್ಥೆ, ತೀವ್ರತರದ ದೈಹಿಕ ವಿಕಲಚೇತನರಿಗೆ ಮನೆಯಲ್ಲಿ ಮತದಾನ ವ್ಯವಸ್ಥೆ, 80ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತದಾನ ವ್ಯವಸ್ಥೆ, ವೀಲ್ ಚೇರ್ ವಿಶೇಷ ವಾಹನ ವ್ಯವಸ್ಥೆ ಮಾಡಿಸುವ ಬಗ್ಗೆ ಸೂಚನೆ ನೀಡಿದರು. ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ಗ್ರಾಮೀಣ/ನಗರ ಪುನರ್ ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನ ಸಭೆ ನಡೆಸಿ ತಾಲ್ಲೂಕು ಮಟ್ಟದ ಪುನರ್ವಸತಿ ಕಾರ್ಯಕರ್ತರಿಗೆ ಸಲ್ಲಿಸಬೇಕು ಎಂದು ಪುನರ್ವಸತಿ ಕಾರ್ಯಕರ್ತರಿಗೆ ಸೂಚನೆ ನೀಡಿದರು. ಪುತ್ತೂರು ತಾಲೂಕು ವಿಕಲಚೇತನರ ನೋಡೆಲ್ ಅಧಿಕಾರಿ ವಾಣಿಶ್ರೀ, ಕಡಬ ತಾಲೂಕು ಮಟ್ಟದ ವಿಕಲ ಚೇತನರ ಪುನರ್ವಸತಿ ಕಾರ್ಯಕರ್ತೆ ಆಕ್ಷತಾ ಎ. ವೇದಿಕೆಯಲ್ಲಿ ಉಪ್ಪಸ್ಥಿತರಿದ್ದರು. ಪುತ್ತೂರು ತಾಲೂಕು ಮಟ್ಟದ ಪಂಚಾಯತ್ ವಿಕಲಚೇತನರ ಬಹುಮಟ್ಟದ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ವಿಕಲಚೇತನರ ನೂತನ ಕಲ್ಯಾಣಧಿಕಾರಿ ಭಾಸ್ಕರ್‌ರವರನ್ನು ಅಭಿನಂದಿಸಿದರು. ಪುತ್ತೂರು/ಕಡಬ ತಾಲೂಕು ಎಲ್ಲಾ ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರು ಹಾಜರಿದ್ದರು. ಪೆರಾಬೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮುತ್ತಪ್ಪ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here