ಪುತ್ತೂರು -ಬೆಳ್ತಂಗಡಿ ತಾಲೂಕಿನ ಮೂಡುಕೋಡಿಯಲ್ಲಿ ಯುವ ಭಾಗವತೆ ಸಿಂಚನಾ ಮೂಡುಕೋಡಿಯವರ ಸ್ವಗೃಹ, “ಮಂಜುಕೃಪಾ”ದ ಗೃಹ ಪ್ರವೇಶ,ಪ್ರಥಮ ವರ್ಷದ ಅಂಗವಾಗಿ, ಧೀಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ ಪುತ್ತೂರು ತಂಡದವರಿಂದ ಹೊಸ್ತೋಟ ಮಂಜುನಾಥ ಭಾಗವತ ವಿರಚಿತ, ” ಸತ್ಯನಾರಾಯಣ ವ್ರತಕಥಾ ,” ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ, ಭಾಗವತರಾಗಿ ಸಿಂಚನಾ ಮೂಡುಕೋಡಿ, ಚೆಂಡೆ- ಮದ್ದಳೆಗಳಲ್ಲಿ, ಆದಿತ್ಯ ಹೊಳ್ಳ, ಜಿ. ಸುಬ್ರಹ್ಮಣ್ಯ ಭಟ್ ಸಹಕರಿಸಿದರು.
ಮುಮ್ಮೇಳದಲ್ಲಿ ,ಪದ್ಮಾ ಕೆ ಆರ್ ಆಚಾರ್ಯ (ಸಾಧುಶೀಲ), ಜಯಲಕ್ಷ್ಮಿ ವಿ ಭಟ್ (ನಾರದ, ಚಂದ್ರಕೇತು), ಗೀತಾ ಕೊಂಕೋಡಿ (ಮಹಾವಿಷ್ಣು), ಪ್ರೇಮಾ ಕಿಶೋರ್ (ಲೀಲಾವತಿ, ತುಂಗಧ್ವಜ), ಹೀರಾ ಉದಯ್ ( ಉಲ್ಖಾಮುಖ), ಶ್ರುತಿ ವಿಸ್ಮಿತ್ ಬಲ್ನಾಡು (ಕಲಾವತಿ, ಗೋಪಾಲಕ) ಭಾಗವಹಿಸಿದರು. ಚಂದ್ರಾವತಿ ಮತ್ತು ಸತೀಶ್ ನಾಯ್ಕ್ ಕಲಾವಿದರಿಗೆ, ಶಾಲು, ಹಾರ, ಫಲಪುಷ್ಪಗಳನ್ನಿತ್ತು, ಸನ್ಮಾನಿಸಿದರು.