ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1000 ಮನೆ ಸೈಟ್ ಗೆ ಜಾಗ ಗುರುತಿಸುವಂತೆ ಕಂದಾಯ ಇಲಾಖೆಗೆ ಶಾಸಕ ಅಶೋಕ್ ರೈ ಸೂಚನೆ ನೀಡಿದರು.
ಕ್ಷೇತ್ರದಲ್ಲಿ ಮನೆ ಕಟ್ಟಲು ಜಾಗವಿಲ್ಲದೆ ನೂರಾರು ಕುಟುಂಬಗಳು ಬಾಡಿಗೆ ಮನೆಯಲ್ಲಿ ಇದ್ದಾರೆ. ಹಲವು ವರ್ಷದಿಂದ ಪ್ರಯತ್ನ ಮಾಡುತ್ತಿದ್ದರೂ ಒಂದು ಸೆಂಟ್ಸ್ ಜಾಗ ಖರೀದಿ ಮಾಡಲು ಅವರಿಂದ ಸಾಧ್ಯವಾಗಿಲ್ಲ. ಎಲ್ಲಾ ಗ್ರಾಮಗಳಲ್ಲೂ ಸೈಟ್ ಗೆ ಜಾಗ ಗುರುತಿಸಿ ಅದನ್ನು ತಲಾ ಮೂರು ಸೆಂಟ್ಸ್ ಜಾಗದಂತೆ ಮನೆಯೇ ಇಲ್ಲದ, ಜಾಗವೇ ಇಲ್ಲದ ಕಡು ಬಡವರಿಗೆ ಹಂಚಿಕೆ ಮಾಡಬೇಕು. ವರ್ಷಕ್ಕೆ ಒಂದು ಸಾವಿರ ಸೈಟ್ ಗಳನ್ನು ಬಡವರಿಗೆ ಹಂಚುವ ಕೆಲಸ ಮಾಡಬೇಕು. ಎಲ್ಲೆಲ್ಲಿ ಸರಕಾರಿ ಜಾಗ ಇದೆಯೋ ಅದೆಲ್ಲವನ್ನೂ ಸರ್ವೆ ನಡೆಸಿ ಸೈಟ್ ಮಾಡಿ ಅದನ್ನು ಹಂತ ಹಂತವಾಗಿ ಹಂಚ ಬೇಕು ಎಂದು ಶಾಸಕರು ಸೂಚಿಸಿದರು.