ಪುಣಚ ತೋರಣಕಟ್ಟೆ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್‌ ಮಟ್ಟದ ಸ್ಪೋಕನ್‌ ಇಂಗ್ಲೀಷ್ ಹಬ್ಬ

0

ಪುಣಚ: ತೋರಣಕಟ್ಟೆ ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್‌ ಮಟ್ಟದ ಸ್ಪೋಕನ್‌ ಇಂಗ್ಲೀಷ್ ಹಬ್ಬ ಜ.29ರಂದು ನಡೆಯಿತು. ಡಯಟ್ ಪ್ರಾಂಶುಪಾಲಕಿ ರಾಜಲಕ್ಷ್ಮಿ, ಡಯಟ್ ಹಿರಿಯ ಶಿಕ್ಷಕಿ ಗೀತಾ, ಫಾತಿಮಾ ಕಾರ್ಯಕ್ರಮ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಕ್ಲಸ್ಟರಿನ 6 ಸರಕಾರಿ ಶಾಲೆಯ ಮಕ್ಕಳಿಂದ ವಿಭಿನ್ನ ಚಟುವಟಿಕೆಗಳು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ನಡೆಯಿತು.

ಗ್ರಾ.ಪಂ ಅಧ್ಯಕ್ಷೆ ಬೇಬಿ ಪಟಿಕಲ್ಲು ಹಾಗೂ ವಾರ್ಡಿನ ಸದಸ್ಯರು ಬಹುಮಾನ ವಿತರಿಸಿದರು. ಶಾಲೆಯ ಎಸ್.ಡಿ.ಎಂ.ಸಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳು ಭಾಗವಹಿಸಿದರು. ಮುಖ್ಯ ಶಿಕ್ಷಕಿ ಲೀಲಾವತಿ ಸ್ವಾಗತಿಸಿ, ಸಂಪನ್ಮೂಲ ಅಧಿಕಾರಿ ಪುಷ್ಪಾ ಬಲ್ಲಾಳ್‌ ಧನ್ಯವಾದ ಸಮರ್ಪಿಸಿದರು. ಕೃಷ್ಣಗಿರಿ ಶಾಲೆಯ ಮುಖ್ಯ ಶಿಕ್ಷಕಿ ವರದಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here