ವಿವಿ ಅಂತರಾಷ್ಟ್ರೀಯ ಯೋಗ ಕಾರ್ಯಾಗಾರದಲ್ಲಿ ಪುತ್ತೂರಿನ ನೃತ್ಯೋಪಾಸನದಿಂದ ‘ನೃತ್ಯೋಹಂ’

0

ಪುತ್ತೂರು: ಮಂಗಳೂರು ವಿಶ್ವವಿದ್ಯಾಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ ಹಾಗೂ ಧರ್ಮನಿಧಿ ಯೋಗಪೀಠ ದಕ್ಷಿಣ ಕೊರಿಯಾದ ವಾಂಕ್ ವಾಂಗ್ ಡಿಜಿಟಲ್ ಯುನಿವರ್ಸಿಟಿ ಸಹಯೋಗದೊಂದಿಗೆ ಏರ್ಪಡಿಸಿದ ‘ಇಂಟರ್ ನ್ಯಾಷನಲ್ ಯೋಗ ಟೀಚರ್ಸ್ ಟ್ರೈನಿಂಗ್ ಕಾರ್ಯಾಗಾರದಲ್ಲಿ ಪುತ್ತೂರಿನ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರ ನೃತ್ಯೋಪಾಸನಾ ಕಲಾ ಅಕಾಡೆಮಿ (ರಿ.) ಪುತ್ತೂರು ಇವರಿಂದ ‘ನೃತ್ಯೋಹಂ’ ಭರತನಾಟ್ಯ ಕಾರ್ಯಕ್ರಮ ವಿವಿಯ ವೀರೇಂದ್ರ ಹೆಗ್ಗಡೆ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ವಿದೇಶದಿಂದ ಬಂದ ಯೋಗ ಪ್ರತಿನಿಧಿಗಳಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಏರ್ಪಡಿಸಿದ ಈ ಕಾರ್ಯಕ್ರಮ ಪುಷ್ಪಾಂಜಲಿಯೊಂದಿಗೆ ಆರಂಭಗೊಂಡಿತು. ಒಂದೂವರೆ ಗಂಟೆಗಳ ಕಾಲ ನಡೆದ ಈ ನೃತ್ಯ ಕಾರ್ಯಕ್ರಮದಲ್ಲಿ ಅರ್ಧನಾರೀಶ್ವರ ಸ್ತುತಿ, ವೇಲವ ಎಂದು ಆರಂಭಗೊಂಡ ಸುಬ್ರಹ್ಮಣ್ಯನ ಕುರಿತಾದ ನೃತ್ಯ, ಭಜನ್ ಶೈಲಿಯ ಮರಾಠಿ ಹಾಡಿನ ಬೊಮ್ಮ ಬೊಮ್ಮ, ಕನ್ನಡ ಗೀತೆಗಳಾದ ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ, ಕುವೆಂಪು ಅವರ ಕುಣಿಯೋಣಾರು, ಕಾಂತಾರದ ಜನಪ್ರಿಯ ಹಾಡಾದ ವರಾಹರೂಪಂ, ತುಳು ಗೀತೆ ಎಂಚೆಂಚಿ ಪುಣ್ಣುಲು ಎಂಕುಲತ್ತ್ ಮೊದಲಾದ ಬಹುಭಾಷೆ ಮತ್ತು ಸಂಸ್ಕೃತಿಯ ಭಾವವನ್ನು ತಂಡ ನೃತ್ಯರೂಪದಲ್ಲಿ ಪ್ರದರ್ಶಿಸಿತು. ಕೊನೆಯಲ್ಲಿ ಯೋಗ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ.ಕೃಷ್ಣಶರ್ಮ ಮತ್ತು ದಕ್ಷಿಣ ಕೊರಿಯಾ ವಿವಿಯ ಪ್ರತಿನಿಧಿಗಳು ವಿದುಷಿ ಶಾಲಿನಿ ಆತ್ಮಭೂಷಣ್ ಇವರನ್ನು ಗೌರವಿಸಿದರು.

LEAVE A REPLY

Please enter your comment!
Please enter your name here