ಏಷ್ಯಾ ಇಂಟರ‍್ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ ಕೆಪಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೊಳ್ತಿಗೆಯ ಮಹೇಶ್ ಡಿಗೆ ಡಾಕ್ಟರೇಟ್

0

ಪುತ್ತೂರು: ಕೆಪಿಜೆಪಿ ( ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಸಂಸ್ಥಾಪಕ ಮತ್ತು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಪರವೂರಿನಲ್ಲಿದ್ದು ಪುತ್ತೂರಿನವರಾದ ಪುತ್ತೂರು ತಾಲೂಕು ಕೊಳ್ತಿಗೆ ನಿವಾಸಿ ಮಹೇಶ್ ಡಿ ಅವರಿಗೆ ಏಷ್ಯಾ ಇಂಟರ‍್ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.


ಸ್ವಾಮಿ ವಿವೇಕಾನಂದ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಇವರು ಮಲೆನಾಡು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು ಹೋಬಳಿ ಕೊಳ್ತಿಗೆ ಗ್ರಾಮದ ಸಣ್ಣ ರೈತ ಕೃಷಿ ಭೂಮಿಕ ಜಮೀನುದಾರ ತಂದೆ ದುಗ್ಗಪ್ಪ ಗೌಡ, ತಾಯಿ ನೀಲಮ್ಮ ದಂಪತಿಗೆ 9 ಜನ ಮಕ್ಕಳಲ್ಲಿ 5 ಗಂಡು ಮಕ್ಕಳು, ನಾಲ್ಕು ಹೆಣ್ಣು ಮಕ್ಕಳಲ್ಲಿ ಎಂಟನೇಯವರಾಗಿ 1969ರಲ್ಲಿ ಜನಿಸಿದ ಮಹೇಶ್ ಡಿ. ವಿದ್ಯಾಭ್ಯಾಸದಲ್ಲಿ ಹತ್ತನೇ ತರಗತಿ ಓದಿದ್ದು ತಮ್ಮ ಹದಿನಾರನೇ ವಯಸ್ಸಿಗೆ 1986ರಲ್ಲಿ ಬೆಂಗಳೂರಿನ ಹೆಗ್ಗನಹಳ್ಳಿ ಗೆ ಬಂದು ನೆಲೆಯೂರಿ ಸಣ್ಣ ಕೈಗಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಾ ಬೆಳೆಯುತ್ತಾ ತನ್ನದೇ ಆದ ಸಣ್ಣ ಕಂಪನಿ ಫ್ಯಾಬ್ರಿಕೇಷನ್, ಪ್ಲಾಸ್ಟಿಕ್ ಕೋಟಿಂಗ್ ಮತ್ತು ಪೌಡರ್ ಕೋಟರ್ ಫ್ಯಾಕ್ಟರಿ ಮಾಡಿಕೊಂಡು ನೂರಾರು ಕಾರ್ಮಿಕರಿಗೆ ಆಶ್ರಯದಾತರಾಗಿದ್ದು ಜೊತೆಗೆ ಸ್ವಾಮಿ ವಿವೇಕಾನಂದ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ , ಕೆಂಪೇಗೌಡ ಯುವಕರ ಸಂಘ ರಚಿಸಿ, ಜೊತೆಗೆ 2017ರಲ್ಲಿ ರಾಜಕೀಯ ಪಕ್ಷ (ಕೆಪಿಜೆಪಿ ) ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಸ್ಥಾಪನೆ ಮಾಡಿ 2018 ರಾಜ್ಯದಲ್ಲಿ ವಿಧಾನಸಭೆಗೆ 45 ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ದಾವಣಗೆರೆ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಆರ್. ಶಂಕರ್ ವರನ್ನು ಗೆಲ್ಲಿಸಿ, ಕರ್ನಾಟಕ ರಾಜ್ಯದಲ್ಲಿ ಹೊಸ ಪಕ್ಷವು,ಮೊದಲ ಬಾರಿಗೆ ಸಚಿವರನ್ನಾಗಿ ಮಾಡಿದ್ದು ಇತಿಹಾಸವೇ ಸರಿ. ಕಾಂಗ್ರೆಸ್ಸಿನ ಹಾಗೂ ಕುಮಾರಸ್ವಾಮಿಯ ಜೆ.ಡಿ ಎಸ್. ಸಮ್ಮಿಶ್ರ ಸರ್ಕಾರದ ಕ್ಯಾಬಿನೆಟ್ ನಲ್ಲಿ ಅರಣ್ಯ ಸಚಿವರಾಗಿ ನಂತರ ಬಿಜೆಪಿಯ ಯಡಿಯೂರಪ್ಪ ಕ್ಯಾಬಿನೆಟ್ ನಲ್ಲಿ ಪೌರಾಡಳಿತ ಸಚಿವರಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ . ಹಾಗೆ 2018 ರಲ್ಲಿ ರಾಣಿಬೆನ್ನೂರು ನಗರಸಭೆಯಲ್ಲಿ ಹತ್ತು ಜನ ಕೌನ್ಸಿಲರ್ಗಳಾಗಿ ಆಯ್ಕೆಯಾಗುವಲ್ಲಿ ಮಹೇಶ್ ಡಿ ಅವರ ಪಾತ್ರ ಮಹತ್ತರವಾದದ್ದು.


ನಿರಂತರ 35 ವರ್ಷದಿಂದ ಬಡ ಕಾರ್ಮಿಕರಿಗೆ, ಬಡ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮಾಡುತ್ತಾ ಸೇವೆ ಮಾಡುತ್ತಿರುವುದು ಒಂದೆಡೆ ಆದರೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಆಧ್ಯಾತ್ಮಿಕವಾಗಿ ಇವರ ಸೇವೆ ಅಪಾರ.ಇವರ ಸೇವೆಯನ್ನು ಗುರುತಿಸಿ ಬೆಂಗಳೂರಿನ ಹಲವಾರು ಸಂಘ ಸಂಸ್ಥೆಯಿಂದ “ಪುತ್ತೂರಿನ ಮುತ್ತು” ಎಂಬ ಬಿರುದು ನೀಡಿದ್ದಾರೆ. ಜೊತೆಗೆ ಹಲವಾರು ಸಂಘ-ಸಂಸ್ಥೆ ಶಿಕ್ಷಣ ಸಂಸ್ಥೆ ಸಾಮಾಜಿಕವಾಗಿ ರಾಜಕೀಯವಾಗಿ ಬಿರುದುಗಳು ಲಭಿಸಿದೆ.


ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರೂ ಇವರು ಮಾಡಿರುವ ಸಮಾಜ ಸೇವೆಗಳು:
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಧನ ಸಹಾಯ, ಹೆಣ್ಮಕ್ಕಳಿಗೆ ಸೀರೆ, ಬಾಗಿನ ಸೀಮಂತ ಕಾರ್ಯಕ್ರಮಗಳು, ವೃದ್ಧೆ , ವೃದ್ಧರಿಗೆ ಬಟ್ಟೆ ಕಂಬಳಿ ಬೆಡ್ ಶೀಟ್ ಕೈಕೊಲು, ಧಾರ್ಮಿಕ ದೇವಸ್ಥಾನದ ಪ್ರವಾಸ, ಸ್ವಚ್ಛ ಭಾರತ ಆಂದೋಲನ ಹಮ್ಮಿಕೊಂಡು 4000 ಜನರ ಮನೆಗಳಿಗೆ ಒಣ ಮತ್ತು ಹಸಿ ಕಸದ ಡಸ್ಟ್ ಪಿನ್ ವಿತರಣೆ,ಹೆಗ್ಗೆನಹಳ್ಳಿಯ ಮಾರಮ್ಮ ದೇವಿ ಗೆ ಉತ್ಸವ ಮೂರ್ತಿ ಕೊಡುಗೆ, ಅಕ್ಕ ಪಕ್ಕದ 40 ಶಾಲೆಗಳಿಗೆ ಪ್ರತಿಭಾ ಪುರಸ್ಕಾರ , ಪ್ರತಿವರ್ಷ ಜನವರಿ 12ರಂದು ವಿವೇಕಾನಂದ ಜಯಂತಿಗೆ ಬೆಂಗಳೂರು ನಗರದ ಗೋಲೃರಹಟ್ಟಿಯಲ್ಲಿರುವ ಗಾಂಧಿ ವೃದ್ಧಾಶ್ರಮ ಮತ್ತು ಇತರ ಆಶ್ರಮಗಳಿಗೆ ಹಣ್ಣು ಹಂಪಲ ಅಕ್ಕಿ ವಿತರಣೆ, ಟ್ರಸ್ಟಿನಿಂದ ಅಪರಾಧ ತಡೆ ಬಗ್ಗೆ 25000 ಜಾಗೃತಿ ಪುಸ್ತಕ ವಿತರಣೆ, ಎಪ್ಪತ್ತು ಜನ ಬಡ ಮಕ್ಕಳಿಗೆ ಉಚಿತ ಬೋಧನಾ ಕೇಂದ್ರ ,ಮುಸಲ್ಮಾನರಿಗೆ ದರ್ಗಾ ಪ್ರವಾಸ ಕ್ರಿಸ್ಟಿ ಯನ್ನರಿಗೆ ಚರ್ಚ್ ಪ್ರವಾಸ ,ಸಂಘದ ವಾರ್ಸಿಹೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಬಡ ಜನರಿಗೆ ವಾಕಿಂಗ್ ಸ್ಟಿಕ್ , ಸ್ಪೆಕ್ಸ್, ಆರೋಗ್ಯ ಶಿಬಿರ, ಬಡ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ಡಿಕ್ಷನರಿ ವಿತರಣೆ, ಕೋವಿಡ್ ಸಮಯದಲ್ಲಿ ಹುಟ್ಟು ಊರಾದ ಕೊಳ್ತಿಗೆ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ವಾಸವಿರುವ ಬೆಂಗಳೂರಿನ ಬಡ ಸಂಸಾರಕ್ಕೆ ರೇಷನ್ ಕಿಟ್ , ಔಷಧಿ ಹಾಗೂ ಕೊರೊನದಿಂದ ಬಲಿಯಾದ ಕುಟುಂಬಗಳಿಗೆ ತಲಾ ಇಪ್ಪತ್ತು ಸಾವಿರ ಸಹಾಯಧನ,ಕೊರೋನಾ ಸಮಯದಲ್ಲಿ ಪೊಲೀಸ್ ಠಾಣೆ ಸಿಬ್ಬಂದಿಗೆ ಊಟದ ವ್ಯವಸ್ಥೆ ಸೇರಿದಂತೆ 2006ರಲ್ಲಿ ಉತ್ತರ ಕರ್ನಾಟಕದಲ್ಲಿ ಭೀಕರ ಜಲ ಪ್ರವಾಹ ಮತ್ತು ಮಡಿಕೇರಿಯಲ್ಲಿ ನಡೆದ ಭೀಕರ ಭೂಕಂಪದಲ್ಲಿ ನಿರಾಶ್ರಿತರಿಗೆ ಬಟ್ಟೆ ದವಸ ಧಾನ್ಯಗಳ ವಿತರಣೆ ಮಾಡಿದ್ದು ಇದನ್ನು ಪರಿಗಣಿಸಿ, ಸಮಾಜ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

LEAVE A REPLY

Please enter your comment!
Please enter your name here