ಆಲಂಕಾರು ಶ್ರೀ ದುರ್ಗಾಂಬಾ ಪ್ರೌಢಶಾಲಾ ಮುಖ್ಯಗುರು ಶ್ರೀಪತಿ ರಾವ್ ರವರ ಬೀಳ್ಕೋಡುಗೆ ಕಾರ್ಯಕ್ರಮ

0

ಆಲಂಕಾರು:ಶ್ರೀ ದುರ್ಗಾಂಬಾ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಅಧ್ಯಾಪಕರಾಗಿ, ಮುಖ್ಯಗುರುಗಳಾಗಿ , 37 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಜ.31 ರಂದು ಸೇವಾ ನಿವೃತ್ತಿಯಾದ ಶ್ರೀಪತಿ ರಾವ್ ರವರ ಬೀಳ್ಕೋಡುಗೆ ಕಾರ್ಯಕ್ರಮ ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಸಂತ ಜಾರ್ಜ್ ಪ್ರೌಢಶಾಲೆ, ಕುಂತೂರು ಪದವಿನ ಮುಖ್ಯಗುರು ಹರಿಶ್ಚಂದ್ರ ಕೆ ಯವರು ಮಾತನಾಡಿ ಶ್ರೀಪತಿ ರಾವ್ ರವರು ಒಬ್ಬ ಉತ್ತಮ ಶಿಕ್ಷಕರಾಗಿ,ಮುಖ್ಯೋಪಾಧ್ಯಾಯರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾರ್ಥಕ ಸೇವೆಯನ್ನು ಸಲ್ಲಿಸಿದವರು. ಕಾಲೇಜಿನ ಪ್ರವೇಶ ದ್ವಾರ, ಉದ್ಯಾನವನ ಹಾಗು ಇನ್ನೀತರ ಕೆಲಸ ಕಾರ್ಯಗಳಲ್ಲಿ ತನ್ನನು ತಾನು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿ ಸೇವಾನಿವೃತ್ತ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.

ಶ್ರೀಪತಿ ರಾವ್ ರವರ ಗುರುಗಳಾದ ಗೋಪಾಲಕೃಷ್ಣ ಬೆಟ್ಟಂಪಾಡಿಯವರಿಗೆ ಶ್ರೀಪತಿರಾವ್ ರವರು ಗುರುವಂದನೆ ಸಲ್ಲಿಸಿದರು. ನಂತರ ಗುರುವಂದನೆ ಸ್ವೀಕರಿಸಿದ ಗೋಪಾಲಕೃಷ್ಣ ಬೆಟ್ಟಂಪಾಡಿಯವರು ತಮ್ಮ ಶಿಷ್ಯರಾದ ಶ್ರೀಪತಿ ರಾವ್ ರವರ ಸಾಧನೆಗಳನ್ನು ಕೊಂಡಾಡಿ ನಿವೃತ್ತಿ ‌ಜೀವನಕ್ಕೆ ಶುಭಾಹಾರೈಸಿದರು. ಆಡಳಿತ ಮಂಡಳಿಯ ಪರವಾಗಿ ಕಾರ್ಯದರ್ಶಿಗಳಾದ ಈಶ್ವರ ಗೌಡ ಪಜ್ಜಡ್ಕ, ಕಡಬ ತಾಲೂಕು ಸಹ ಶಿಕ್ಷಕರ ಸಂಘದ ಶಾಂತಾರಾಮ ಗೌಡ ಓಡ್ಲ, ನಿವೃತ್ತ ಶಿಕ್ಷಕರ ಪರವಾಗಿ ಸತ್ಯನಾರಾಯಣ ಭಟ್, ಜಯಕರ ರೈ ಬಿ, ಪೋಷಕರ ಪರವಾಗಿ ದಯಾನಂದ ಗೌಡ ಬಡ್ಡಮೆ, ಗೋಪಾಲಕೃಷ್ಣ ಭಟ್ ನೈಮಿಷ, ಪೂರ್ವ ವಿದ್ಯಾರ್ಥಿಗಳ ಪರವಾಗಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮನೋಹರ ಎಣ್ಣೆತ್ತೋಡಿ, ಸುಂದರ ಗೌಡ ನೆಕ್ಕಿಲಾಡಿ, ಶಿಕ್ಷಕರ ಪರವಾಗಿ ಮಹೇಶ್ ಲಮಾಣಿ, ಜನಾರ್ಧನ್, ವಿದ್ಯಾರ್ಥಿಗಳ ಪರವಾಗಿ ಲಕ್ಷ್ಯಾ, ಹರ್ಷಿತಾ, ಅರ್ಚನಾ, ಪಲ್ಲವಿ, ಮೈತ್ರಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ನಿವೃತ್ತಿ ಜೀವನಕ್ಕೆ ಶುಭಾಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ರೈ ಮನವಳಿಕೆಯವರು ಸೇವಾ ನಿವೃತ್ತಿ ಗೊಂಡ ಶ್ರೀಪತಿ ರಾವ್ ರವರ ಬಗ್ಗೆ ಗುಣಗಾನ ಮಾಡಿ ಸೇವಾವಧಿಯಲ್ಲಿ ಉತ್ತಮ ಅಧ್ಯಾಪಕರಾಗಿ,ಮುಖ್ಯಗುರುಗಳಾಗಿ ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಹಿರಿಯ ವಿದ್ಯಾರ್ಥಿ ಗಳನ್ನು ಮತ್ತು ಊರವರನ್ನು ಸೇರಿಸಿಕೊಂಡು ತನ್ನ ಸೇವಾವಧಿಯಲ್ಲಿ ವಿದ್ಯಾಸಂಸ್ಥೆಯ ಅಭಿವೃದಿಯ ಜೂತೆಗೆ ವಿದ್ಯಾಸಂಸ್ಥೆ ಯ ಘನತೆ,ಗೌರವವನ್ನು ಎತ್ತಿ ಹಿಡಿದಿದ್ದಾರೆ.ಮುಂದೆ ಅವರನ್ನು ಶಾಲೆಯ ಅಡಳಿತಾಧಿಕಾರಿಯಾಗಿ ಫೆ.1 ರಿಂದ ನೇಮಿಸಲಾಗಿದೆ ಎಂದು ತಿಳಿಸಿದರು.

ಕಛೇರಿ ಸಹಾಯಕ ಉದಯ ಚಂದ್ರಿಕಾ ಸನ್ಮಾನ ಪತ್ರ ವಾಚಿಸಿ, ಉಪನ್ಯಾಸಕ ನಾರಾಯಣ ಗೌಡ ಇವರು ವಿದಾಯ ಗೀತೆ ಹಾಡಿ, ಪ. ಪೂ. ವಿಭಾಗದ ಉಪನ್ಯಾಸಕಿ ರೂಪ ಎಂ. ಟಿ ಕಾರ್ಯಕ್ರಮ ನಿರೂಪಿಸಿ ಪ್ರಾಂಶುಪಾಲ ನವೀನ್ ಕುಮಾರ್ ರೈ ಸ್ವಾಗತಿಸಿ, ಉಪನ್ಯಾಸಕಿ ಆಶಾ ರವರು ಧನ್ಯವಾದವಿತ್ತರು.


ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಮುತ್ತಪ್ಪ ಪೂಜಾರಿ ನೆಯ್ಯಲ್ಗ, ದಯಾನಂದ ಗೌಡ ಆಲಡ್ಕ, ಇಂದುಶೇಖರ ಶೆಟ್ಟಿ ಕುಕ್ಕೆರಿ, ತಾರನಾಥ ರೈ ನಗ್ರಿ, ಆಲಂಕಾರು ಗ್ರಾಮ ಪಂಚಾಯತ್ ನಿವೃತ್ತ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ, ಆಲಂಕಾರು ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ವಿಶ್ವ ನಾಯ್ಕ, ಶಿಕ್ಷಕರಾದ ಚೆನ್ನಪ್ಪ ಹಾಗೂ ಶಿಕ್ಷಕ ವೃಂದ, ಸವಣೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಕೆ.ಪಿ ನಿಂಗರಾಜು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಾಬೆ ಶಾಲೆಯ ಶಿಕ್ಷಕಿ ಹೇಮಲತಾ ಪ್ರದೀಪ್, ಸರಕಾರಿ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪದ ಮುಖ್ಯ ಗುರುಗಳಾದ ಜಯಂತ್ ವೈ, ದೇರಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಜಯಪ್ರಕಾಶ್ ರೈ, ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಅಲಂಕಾರಿನ ಮುಖ್ಯ ಮಾತಾಜಿ ಆಶಾ ಎಸ್ ರೈ, ಶಿಕ್ಷಕರಾದ ಚಂದ್ರಹಾಸ, ಹಾಗೂ ಶಿಕ್ಷಕ ವೃಂದ, ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯಗುರುಗಳಾದ ಸತೀಶ್ ಭಟ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶರವೂರಿನ ಮುಖ್ಯ ಗುರುಗಳಾದ ರೇಗಿನ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರದ ಮುಖ್ಯ ಗುರುಗಳಾದ ಪ್ರದೀಪ್ ಬಾಕಿಲ, ನಿವೃತ್ತ ದೈಹಿಕ ಶಿಕ್ಷಕರಾದ ಜಯಕರ್ ರೈ, ಸತ್ಯನಾರಾಯಣ ಭಟ್, ನಿವೃತ್ತ ಕಚೇರಿ ಸಹಾಯಕರಾದ ಹುಕ್ರಪ್ಪ ಕಮಿತ್ತಿಲ್, ವಕೀಲರಾದ ಲತನ್ ರೈ, ಸೈಂಟ್ ಜಾರ್ಜ್ ಪ್ರೌಢಶಾಲೆ ಕುಂತೂರು ಪದವು ಚಿತ್ರಕಲಾ ಶಿಕ್ಷಕರಾದ ಕಿಶೋರ್, ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರಾದ ಮೋಹನ್ ಗೌಡ ಏನಾಜೆ, ಕೋಟಿ ಚೆನ್ನಯ ಮಿತ್ರವೃಂದದ ಅಧ್ಯಕ್ಷರಾದ ಜಯಂತ ಪೂಜಾರಿ‌ ನೆಕ್ಕಿಲಾಡಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಯದ ಪದ್ಮಪ್ಪ ಗೌಡ, ಲಯನ್ಸ್ ಕ್ಲಬ್ ಅಲಂಕಾರಿನ ಅಧ್ಯಕ್ಷರಾದ ಪ್ರಶಾಂತ್ ರೈ ಮನವಳಿಕೆ, ಮಾರ್ ಇವಾನಿಯಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಕರಾದ ಹರೀಶ್ ಕುಮಾರ್ ಹಾಗೂ ಚೈತ್ರ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಮಹೇಶ್, ಅಲಂಕಾರಿನ ಉದ್ಯಮಿ ದೇವರಾಯ ಪ್ರಭು, ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ ಪ್ರಥಮ ದರ್ಜೆ ಕಚೇರಿ ಸಹಾಯಕರಾದ ಎ ಯಾನ್ ಕೊಳಂಬೆ, ರಾಧಾಕೃಷ್ಣ ರೈ ಮನವಳಿಕೆ, ರಾಜಗೋಪಾಲ್, ನೋಣಯ್ಯ ಕೆದಿಲ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು, ವಿದ್ಯಾ ಸಂಸ್ಥೆಯ ಅಭಿಮಾನಿಗಳು, ಊರಿನ ಗಣ್ಯರು ಹಾಗು ಶ್ರೀಪತಿ ರಾವ್ ಅವರ ಹಿತೈಷಿಗಳು,ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here