ಪುತ್ತೂರು: ಪುತ್ತೂರು ತುಳುಕೂಟದ ವತಿಯಿಂದ ಸುದಾನ ಶಾಲಾ ವಠಾರದಲ್ಲಿ ನಡೆಸಲುದ್ದೇಶಿಸಿರುವ ಪುತ್ತೂರು ತಾಲೂಕು ತುಳುವೆರೆ ಮೇಳೊ 2024 (ಪುತ್ತೂರು ತಾಲೂಕು ತುಳುವರ ಸಮ್ಮೇಳನ 2024) ಇದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಸುದಾನ ವಸತಿಯುತ ಶಾಲಾ ಸಂಚಾಲಕ ರೆ| ವಿಜಯ ಹಾರ್ವಿನ್ ಹಾಗೂ ಕಾರ್ಯಾಧ್ಯಕ್ಷರಾಗಿ ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಸವಣೂರು ಸೀತಾರಾಮ ರೈ, ಗೌರವ ಉಪಾಧ್ಯಕ್ಷರುಗಳಾಗಿ ಮಾಜಿ ಶಾಸಕಿಶ್ರೀಮತಿ ಶಕುಂತಲಾ ಶೆಟ್ಟಿ ಹಾಗೂ ಪುತ್ತೂರು ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್, ಗೌರವ ಸಂಚಾಲಕರಾಗಿ ಕಾವು ಹೇಮನಾಥ ಶೆಟ್ಟಿ, ಸಂಚಾಲಕರಾಗಿ ವೆಂಕಟರಮಣ ಗೌಡ ಕಳುವಾಜೆ, ಕಾರ್ಯದರ್ಶಿಯಾಗಿ ಡಾ| ರಾಜೇಶ್ ಬೆಜ್ಜಂಗಳ ಮತ್ತು ಕೋಶಾಽಕಾರಿಯನ್ನಾಗಿ ರವಿಪ್ರಸಾದ್ ಬಿ.ವಿ. ಇವರುಗಳನ್ನು ಆಯ್ಕೆಮಾಡಲಾಗಿದೆ.
ಉಪಾಧ್ಯಕ್ಷರುಗಳಾಗಿ ಅಶ್ಮಿ ಸಂತೋಷ್ ಶೆಟ್ಟಿ ಎಸ್. ಹಾಗೂ ನ್ಯಾಯವಾದಿ ಶ್ರೀಮತಿ ಹೀರಾ ಉದಯ್, ಜತೆಕಾರ್ಯದರ್ಶಿಗಳಾಗಿ ಶ್ರೀಮತಿ ನಯನಾ ರೈ ನೆಲ್ಲಿಕಟ್ಟೆ ಹಾಗೂ ಪಿ. ಉಲ್ಲಾಸ್ ಪೈ, ಸಮಿತಿ ಸದಸ್ಯರಾಗಿ ತುಳುಕೂಟದ ನಿರ್ದೇಶಕರುಗಳಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಬಿ. ಚಂದ್ರಹಾಸ ರೈ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಕಲಾವಿದ ಕೃಷ್ಣಪ್ಪ, ವಿಜಯ ಕುಮಾರ್ ಭಂಡಾರಿ, ದಾಮೋದರ್ ಭಂಡಾರ್ಕರ್, ನ್ಯಾಯವಾದಿ ಮಹಾಬಲ ಗೌಡ, ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಮೌರೀಸ್ ಮಸ್ಕರೇನಸ್, ಆಸ್ಕರ್ ಆನಂದ್, ನವೀನ್‌ಚ್ಛಂದ್ರ ನಾಕ್, ಬಿ.ಟಿ. ಮಹೇಶ್ಚಂದ್ರ ಸಾಲಿಯಾನ್, ಅಬ್ದುಲ್ ಸಮದ್ ಬಾವಾ, ಅಬುಬಕ್ಕರ್ ಮುಲಾರ್, ರಮೇಶ್ ಉಳಯ, ನರೇಶ್ ಜೈನ್ ಮತ್ತು ಉಮಾಪ್ರಸಾದ್ ರೈ ನಡುಬೈಲು ಕಾರ್ಯನಿರ್ವಹಿಸಲಿದ್ದಾರೆ.
ಮಾರ್ಚ್ 2 ಮತ್ತು 3 ರಂದು ಪುತ್ತೂರಿನ ಮಂಜಲ್ಪಡ್ಪು ಸುದಾನ ವಸತಿಯುತ ಶಾಲಾ ವಠಾರದಲ್ಲಿ ಎರಡು ದಿನಗಳ ಕಾಲ ಜರಗುವ ಈ ಸಮ್ಮೇಳನದ ಜತೆ ತುಳುನಾಡಿನ ವೈವಿಧ್ಯಮಯ ತಿನಿಸುಗಳ ಅಂಗಡಿಗಳು ಮತ್ತು ಇತರ ವಸ್ತುಗಳ ಸ್ಟಾಲ್’ಗಳೂ ಇರಲಿವೆ.