ಆಲಡ್ಕ ಶ್ರೀ ಸದಾಶಿವ ದೇವಸ್ಥಾನ: ಜಾತ್ರೋತ್ಸವ ಸಮಿತಿ

0

ಗೌರವಾಧ್ಯಕ್ಷರಾಗಿ ಅಶೋಕ್ ರೈ, ಅಧ್ಯಕ್ಷರಾಗಿ ಕಾವು ಹೇಮನಾಥ ಶೆಟ್ಟಿ

ಪುತ್ತೂರು: ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ 2024 ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಆಲಡ್ಕ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವಕ್ಕೆ ಸಮಿತಿಯನ್ನು ರಚನೆ ಮಾಡಲಾಯಿತು. ದೇವಸ್ಥಾನದ ವಠಾರದಲ್ಲಿ ನಡೆದ ಸಭೆಯಲ್ಲಿ ಈ ಸಮಿತಿಯನ್ನು ರಚನೆ ಮಾಡಲಾಯಿತು. 2022-23 ನೇ ಸಾಲಿನಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ನಡೆದಿತ್ತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿದ್ದ ಕಾವು ಹೇಮನಾಥ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಬ್ರಹ್ಮಕಲಶೋತ್ಸವವು ಇತಿಹಾಸವನ್ನೇ ನಿರ್ಮಿಸಿತ್ತು. ಪಾಳು ಬಿದ್ದಿದ್ದ ದೇವಸ್ಥಾನವನ್ನು ಊರಿನ ಸಮಸ್ತ ಭಕ್ತರು ಹಾಗೂ ಸಮಿತಿಯ ವತಿಯಿಂದ ನವೀಕರಣಗೊಳಿಸಿದ ಬಳಿಕ ಬ್ರಹ್ಮಕಲಶೋತ್ಸವ ನಡೆದಿತ್ತು. ಆ ಬಳಿಕ 100 ವರ್ಷಗಳಿಂದ ಸ್ಥಗಿತಗೊಂಡಿದ್ದ ಜಾತ್ರೋತ್ಸವವು ಕೂಡಾ ಅದ್ದೂರಿಯಗಿ ನಡೆದಿತ್ತು.


ಜಾತ್ರಾ ಸಮಿತಿಯ ಗೌರವ ಅಧ್ಯಕ್ಷರುಗಳಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುದಾಭಿ, ನಿವೃತ್ತ ಶಿಕ್ಷಕ ಬಿ.ವಿ ಶಗ್ರಿತ್ತಾಯ, ಅಧ್ಯಕ್ಷರಾಗಿ ಕಾವು ಹೇಮನಾಥ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಶೀನಪ್ಪ ರೈ ಕೊಡಂಕೀರಿ, ಪ್ರಧಾನ ಕಾರ್ಯದರ್ಶಿಯಾಗಿ ಧನಂಜಯ ಕುಲಾಲ್ ಕಂಪರವರುಗಳನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಉಪಾಧ್ಯಕ್ಷರುಗಳಾಗಿ ಜೈಶಂಕರ ರೈ ಬೆದ್ರುಮಾರು, ಮೋಹನ ಆಳ್ವ ಮುಂಡಾಳ, ಸುಪ್ರೀತ್ ಕಣ್ಣರಾಯ ಬನೇರಿ, ಜಯಾನಂದ ರೈ ಮಿತ್ರಂಪಾಡಿ, ವಿಜಯ ಕುಮಾರ್ ರೈ ಕೋರಂಗ, ಶಾರದಾ ಭಟ್ ಕೊಡಂಕೀರಿ, ಜತೆ ಕಾರ್ಯದರ್ಶಿಯಾಗಿ ಮಹಾಬಲ ರೈ ಕುಕ್ಕುಂಜೋಡು, ಕೋಶಾಧಿಕಾರಿಯಾಗಿ ಅರುಣ್ ಕುಮಾರ್ ಆಳ್ವ, ಗೌರವ ಸಲಹೆಗಾರರಾಗಿ ಮುರಳೀಧರ ಭಟ್ ಬಂಗಾರಡ್ಕ, ಜಗದೀಶ ಬಲ್ಲಾಳ್ ಬೀಡು, ಬಾಲಕೃಷ್ಣ ಕಣ್ಣರಾಯ ಬನೇರಿ, ಸುರೇಶ್ ಕಣ್ಣರಾಯ ಬನೇರಿ, ರಾಮಯ್ಯ ರೈ ತಿಂಗಳಾಡಿ, ಸುಭಾಷ್ ರೈ ಕಡಮಜಲು ಮತ್ತು ರತನ್ ರೈ ಕುಂಬ್ರರವರುಗಳನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here