ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಕಡಬದ ವಿವಿಧೆಡೆ ಭೇಟಿ-ಕೇಂದ್ರ ಜುಮಾ ಮಸೀದಿ ದರ್ಗಾ ಶರೀಫ್ ನಲ್ಲಿ ಪ್ರಾರ್ಥನೆ ಸಲ್ಲಿಕೆ

0

ಕಡಬ: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅವರು ಫೆ.2ರಂದು ಸಂಜೆ ಕಡಬ ಕೇಂದ್ರ ಜುಮಾ ಮಸೀದಿ, ದರ್ಗಾ ಶರೀಫ್‌ ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.


ಈ ವೇಳೆ ಮಾತನಾಡಿದ ಅವರು ಮಸೀದಿ, ದರ್ಗಾ ಕೇಂದ್ರಗಳು ಶಾಂತಿ ಮತ್ತು ಸಮಾಧಾನದ ಸ್ಥಳಗಳಾಗಿದ್ದು ನಾಡಿನ ಸಾರ್ವಭೌಮತೆ ಮತ್ತು ಸಹೋದರತೆಯನ್ನು ಎತ್ತಿ ಹಿಡಿಯುವ ಸ್ಥಳವೂ ಆಗಿದೆ. ಅಲ್ಲಾಹನ ಔಲಿಯಾಗಳಿಗೆ ಮರಣವಿಲ್ಲ. ಇಂತಹ ಪುಣ್ಯ ಸ್ಥಳಗಳಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ನಮ್ಮ ಧರ್ಮವನ್ನು ಆಚರಣೆ ಮಾಡುವ ಮೂಲಕ ಇತರ ಧರ್ಮಗಳನ್ನು ಗೌರವಿಸಬೇಕು, ಎಲ್ಲ ಧರ್ಮದವರೊಂದಿಗೆ ಅನ್ಯೋನ್ಯತೆಯಿಂದ ಜೀವನ ನಡೆಸುವ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಬೇಕು ಎಂದ ಅವರು ಇಲ್ಲಿಗೆ ಬಂದಿರುವುದು ನನಗೆ ಬಹಳ ಖುಷಿಯಾಗಿದೆ. ಸಯ್ಯದ್ ಮೀರಾ ಸಾಹೇಬ್ ಮತ್ತು ಇಕ್ಬಾಲ್ ಎಲಿಮಲೆ ಅವರು ಇಲ್ಲಿಗೆ ಬರಲೇಬೇಕೆಂದು ಒತ್ತಾಯ ಮಾಡಿದ್ದರು ಎಂದು ಹೇಳಿದರು.


ಎಲ್ಲ ಧರ್ಮದವರು ಇಲ್ಲಿಗೆ ಬರುತ್ತಾರೆ-ಮೀರಾ ಸಾಹೇಬ್:
ಕಡಬ ತಾಲೂಕು ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಸಯ್ಯದ್ ಮೀರಾ ಸಾಹೇಬ್ ಕಡಬ ಮಾತನಾಡಿ ಇಲ್ಲಿನ ದರ್ಗಾ ಶರೀಫ್‌ ಗೆ ಐತಿಹಾಸಿಕ ಹಿನ್ನಲೆಯಿದ್ದು ಎಲ್ಲ ಜಾತಿ, ಮತ, ಧರ್ಮಗಳ ಜನರು ಈ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಹೇಳಿದರು. ನಮ್ಮ ಆಹ್ವಾನಕ್ಕೆ ಪ್ರೀತಿಯಿಟ್ಟು ಆಗಮಿಸಿದ ಅಬ್ದುಲ್ ಅಜೀಂ ಅವರು ಇಲ್ಲಿ ಪ್ರಾರ್ಥನೆ ನೆರವೇರಿಸಿದ್ದು ನಮಗೆಲ್ಲರಿಗೂ ಖುಷಿಯಾಗಿದೆ, ಮುಂದಕ್ಕೆ ನಿಮಗೆ ಇದಕ್ಕಿಂತಲೂ ದೊಡ್ಡ ಸ್ಥಾನಮಾನ ಸಿಗಲಿ ಎಂದು ಅವರು ಹಾರೈಸಿದರು.


ಈ ಸಂದರ್ಭದಲ್ಲಿ ಅಲ್ಪ ಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ಸುಳ್ಯ ಪ್ರಧಾನ ಶಾಖೆಯ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಡಾ.ಸಯ್ಯದ್ ನಝೀರ್, ಇಬ್ರಾಹಿಂ ಅಲೆಕ್ಕಾಡಿ, ಅಬ್ದುಲ್ ಅಜೀಂ ಅವರ ಆಪ್ತ ಕಾರ್ಯದರ್ಶಿ ಮುಜೀಬುಲ್ಲಾ ಜಫರಿ, ಆಪ್ತ ಸಹಾಯಕ ಸಯ್ಯದ್, ಆದಂ ಆತೂರು, ಕಡಬ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಶರೀ- ಕೇಪು, ಉಪಾಧ್ಯಕ್ಷ ಆದಂ ಕುಂಡೋಳಿ ಮತ್ತಿತರರು ಉಪಸ್ಥಿತರಿದ್ದರು. ಕಡಬ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಫಝಲ್ ಸ್ವಾಗತಿಸಿ ವಂದಿಸಿದರು.


ಮೀರಾ ಸಾಹೆಬ್ ನಿವಾಸಕ್ಕೆ ಭೇಟಿ:
ಅಬ್ದುಲ್ ಅಜೀಂ ಅವರು ಮೊದಲಿಗೆ ಸಯ್ಯದ್ ಮೀರಾ ಸಾಹೇಬ್ ಅವರ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿ ಕೆಲಕಾಲ ವಿಶ್ರಾಂತಿ ಪಡೆದರು.
ಅಲ್ ಮದೀನ ಸುನ್ನೀ ಹನಫಿ ಮಸ್ಜಿದ್‌ಗೆ ಭೇಟಿ:ಬಳಿಕ ಅಲ್ಲೇ ಸಮೀಪವಿರುವ ಅಲ್ ಮದೀನ ಸುನ್ನೀ ಹನಫಿ ಜಾಮಿಯಾ ಮಸ್ಜಿದ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಯ್ಯದ್ ಮೀರಾ ಸಾಹೇಬ್ ಕಡಬ, ಇಕ್ಬಾಲ್ ಎಲಿಮಲೆ, ಡಾ.ಸಯ್ಯದ್ ನಝೀರ್ ಮತ್ತಿತರರು ಜೊತೆಗಿದ್ದರು.

ಹಾಸ್ಟೆಲ್‌ಗೆ ಭೇಟಿ-ಪರಿಶೀಲನೆ
ಕಡಬದಲ್ಲಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಭೇಟಿ ನೀಡಿದ ಅಬ್ದುಲ್ ಅಜೀಂ ಅವರು ಪೂರ್ಣಗೊಂಡ ಹೊಸ ಹಾಸ್ಟೆಲ್ ಕಟ್ಟಡದ ಪರಿಶೀಲನೆ ನಡೆಸಿದರು. ಕಟ್ಟಡ ಇದ್ದರೂ ಕಾರ್ಯಾರಂಭ ಮಾಡದಿರುವ ಬಗ್ಗೆ ಸಯ್ಯದ್ ಮೀರಾ ಸಾಹೇಬ್ ಅವರು ಅಬ್ದುಲ್ ಅಜೀಂ ಅವರ ಗಮನಕ್ಕೆ ತಂದರು. ಹಾಸ್ಟೆಲ್ ಕಟ್ಟಡದಲ್ಲಿ ಕೂಡಲೇ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಕಾರ್ಯಾರಂಭ ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಅಬ್ದುಲ್ ಅಜೀಂ ಅವರು ಜೊತೆಗಿದ್ದ ದ.ಕ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಽಕಾರಿ ಜಿನೇಂದ್ರ ಕೋಟ್ಯಾನ್ ಅವರಿಗೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here