ನಿವೃತ್ತಿ ಹೊಂದಿದ 14 ಮಂದಿಗೆ ಗೌರವ – ನೂತನ ಪದಾಧಿಕಾರಿಗಳ ಆಯ್ಕೆ
ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಸಿ.ಯಚ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎ
ಪುತ್ತೂರು: ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಎಂಪ್ಲಾಯೇಸ್ ಯೂನಿಯನ್ (ಹೆಚ್ಎಮ್ಎಸ್) ಇದರ 2023 ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ತೀರ್ಥರಾಮ ಎಸ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.
ಸಂಘದ ಗೌರವಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಮೂಲಕ ಅನೇಕ ಸಮಾಜಮುಖಿ ಚಟುವಟಿಕೆ ನಡೆಸುವ ಕುರಿತು ಮಾಹಿತಿ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ತೀರ್ಥರಾಮ ಅವರು ಮಾತನಾಡಿ ತಮ್ಮ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 2023 ನೇ ಸಾಲಿನ ವರದಿಯನ್ನು ಸಂಘದ ಕಾರ್ಯದರ್ಶಿ ನವೀನ್ ಕುಮಾರ್, ಲೆಕ್ಕಪತ್ರವನ್ನು ಸುನಿಲ್ರವರು ಮಂಡಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ಪದ್ಮನಾಭರವರು ವಂದಿಸಿದರು.
ನಿವೃತ್ತಿ ಹೊಂದಿದವರಿಗೆ ಗೌರವ:
ಕ್ಯಾಂಪ್ಕೋ ಚಾಕಲೇಟ್ ಸಂಸ್ಥೆಯ 2023ರ ವರ್ಷದಲ್ಲಿ ನಿವೃತ್ತಿ ಹೊಂದಿದ 14 ಮಂದಿ ಸಹೋದ್ಯೋಗಿ ಮಿತ್ರರಿಗೆ ಯೂನಿಯನ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಿವೃತ್ತಿ ಹೊಂದಿದ ನೌಕರರು ಸಂಘವು ನಿರಂತರ ತಮ್ಮ ಏಳ್ಗೆಯನ್ನು ಕಾಪಾಡಿಕೊಂಡು ಬಂದಿರುವ ಕುರಿತು ನೆನಪಿಸಿಕೊಂಡರು.
ನೂತನ ಪದಾಧಿಕಾರಿಗಳ ಆಯ್ಕೆ:
2024 ಮತ್ತು 2025 ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಸುರೇಶ್ಚಂದ್ರ ಶೆಟ್ಟಿ, ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಸಿ.ಯಚ್, ಉಪಾಧ್ಯಕ್ಷರಾಗಿ ಬಿ.ರಾಮಕೃಷ್ಣ ಶೆಣೈ, ಕಾರ್ಯದರ್ಶಿಯಾಗಿ ಪ್ರಕಾಶ್ ಎ, ಜೊತೆ ಕಾರ್ಯದರ್ಶಿಯಾಗಿ ಪದ್ಮನಾಭ, ಖಜಾಂಜಿಯಾಗಿ ಬಾಲಕೃಷ್ಣ ಪಿ.ಆರ್, ಸಂಘಟನಾ ಕಾರ್ಯದರ್ಶಿಗಳಾಗಿ ಅನಂತಕೃಷ್ಣ, ಸಂತೋಷ್, ತೀರ್ಥರಾಮ ಎಸ್, ಕಿರಣ್ ಕುಮಾರ್, ಕಾನೂನು ಸಲಹೆಗಾರರಾಗಿ ಮಹೇಶ್ ಕಜೆ ಅವರನ್ನು ಆಯ್ಕೆ ಮಾಡಲಾಯಿತು.