ಬಡವರ ಮನೆ‌ ಮೇಲೆ ಹಾದು ಹೋಗುವ ವಿದ್ಯುತ್ ತಂತಿಗಳ ತೆರವಿಗೆ ಇಂಧನ‌ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

0

ಪುತ್ತೂರು: ಬಡವರ ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಇಲಾಖೆಯ ಖರ್ಚಿನಲ್ಲೇ ತೆರವು ಮಾಡಬೇಕು, ಮನೆಯ ಮೇಲೆ ತಂತಿ ಹೋಗಿರುವ ಕಾರಣ ಸಮಸ್ಯೆಯಾಗಿದ್ದು ಶೀಘ್ರ ತೆರವು ಮಾಡಬೇಕೆಂದು ಶಾಸಕ ಅಶೋಕ್ ರೈ ಯವರು ಇಂಧನ‌ ಸಚಿವ ಕೆ ಜೆ ಜಾರ್ಜ್ ಬಳಿ ವಿನಂತಿಸಿಕೊಂಡಿದ್ದಾರೆ.ಮಂಗಳೂರು ಮೆಸ್ಕಾಂ ಭವನದಲ್ಲಿ ಫೆ. 5 ರಂದು ನಡೆದ ಸಭೆ ನಡೆಯಿತು.

ಶಾಸಕರ ಪ್ರಶ್ನೆಗೆ ವಿವರಣೆ ನೀಡಿದ ಕೆಪಿಟಿಸಿಎಲ್ ಎಂ ಡಿ ಪಂಕಜ್ ಪಾಂಡೆಯವರು ಮನೆ ಕಟ್ಟಿದ ಮೇಲೆ ತಂತಿ ಎಳೆದಿಲ್ಲ, ತಂತಿಯ ಅಡಿಯಲ್ಲೇ ಮನೆ ಕಟ್ಟಿದ್ದಾರೆ ಎಂದರು. ಇದಕ್ಕುತ್ತಿರಿಸಿದ ಶಾಸಕರು ಬಡವರಲ್ಲಿ ಇರುವುದೇ 5.ರಿಂದ 10 ಸೆಂಟ್ಸ್ ಜಾಗ. ಅದರಲ್ಲೇ ನೀವು ಲೈನ್ ಎಳೆದರೆ ಅವರು ಎಲ್ಲಿ‌ಮನೆ ಕಟ್ಟಬೇಕು. ಇದು ಮೆಸ್ಕಾಂ ನವರದ್ದೇ ಸಮಸ್ಯೆ. ಬಡವರ ಮನೆ ಮೇಲೆ ಹಾದು ಹೋಗಿರುವ ಎಲ್ಲಾ ತಂತಿಗಳನ್ನು ತೆರವು ಮಾಡಲೇಬೇಕು ಎಂದು ಹೇಳಿದರು.‌ ಇದಕ್ಕೆ ಉತ್ತರಿಸಿದ ಸಚಿವ ಕೆ ಜೆ ಜಾರ್ಜ್ ದೊಡ್ಡ ಸಮಸ್ಯೆಗಳಿರುವ ಮನೆಗಳನ್ನು ಪಟ್ಟಿ ಮಾಡಿ ಕ್ರಮಕೈಗೊಳ್ಳಿ ಎಂದು ಅಧಿಕಾರಿಗೆ ಸೂಚನೆ ನೀಡಿದರು.

ಕರ್ವೆಲ್ ಮತ್ತು ಕೊಯಿಲದಲ್ಲಿ ಸಬ್ ಸ್ಟೇಷನ್ ಕೇಂದ್ರ ವಾರದೊಳಗೆ ಟೆಂಡರ್
ಉಪ್ಪಿನಂಗಡಿಯ ಕರ್ವೆಲ್ ಮತ್ತು ಕೊಯಿಲದಲ್ಲಿ ಸಬ್ ಸ್ಟೇಷನ್ ಕೇಂದ್ರಗಳಿಗೆ ವಾರದೊಳಗೆ ಟೆಂಡರ್ ಕರೆಯಲಾಗುವುದು ಎಂದು ಇಂಧನ‌ ಸಚಿವ ಕೆ.ಜೆ ಜಾರ್ಜ್ ಶಾಸಕ ಅಶೋಕ್‌ ಕುಮಾರ್‌ ರೈ ಗೆ ಭರವಸೆ ನೀಡಿದರು.

ಪುತ್ತೂರಿನ ಮೆಸ್ಕಾಂ ವಿಚಾರಗಳ ಬಗ್ಗೆ ಚರ್ಚೆ
ಶಾಸಕ ರೈ ಪುತ್ತೂರಿನ ಮೆಸ್ಕಾಂ ವಿಚಾರಗಳ ಕುರಿತು ಸಚಿವರ ಗಮನ ಸೆಳೆದು ಮೆಸ್ಕಾಂ ಪವರ್ ಮ್ಯಾನ್ ಗಳ ಕೊರತೆಯಿದೆ. ಪವರ್ ಮ್ಯಾನ್ ತರಬೇತಿಗೆ ವ್ಯವಸ್ಥೆ ಮಾಡಿ ಎಂದರು ಇದಕ್ಕೆ ಸಚಿವ ಕೆ ಜೆ ಜಾರ್ಜ್ ಪ್ರತಿಕ್ರಯಿಸಿ ಮಾರ್ಚ್ ನಲ್ಲಿ ಕರ್ನಾಟಕದಾದ್ಯಂತ 3000 ಪವರ್ ಮ್ಯಾನ್ ಗಳ ನೇಮಕ ಮಾಡಲಾಗುತ್ತದೆ.ಹಾಗಾಗಿ ಮಾರ್ಚ್ ಗೆ ಮೊದಲು ಪವರ್ ಮ್ಯಾನ್ ತರಬೇತಿ ಪೂರ್ಣಗೊಳಿಸಿ ಎಂದರು.

ಶಾಸಕರಿಗೆ ಶಹಬ್ಬಾಸ್ ಎಂದ ಸಚಿವರು
ಇದೇ ಮೊದಲ ಬಾರಿಗೆ ಪವರ್‌ಮ್ಯಾನ್‌ಗಳಿಗೆ ಕಂಬ ಹತ್ತುವ ಮತ್ತು ಇತರೆ ಕೆಲಸಗಳಿಗೆ ತಮ್ಮ ಟ್ರಸ್ಟ್ ಮೂಲಕ ಉಚಿತ ತರಬೇತಿ ನೀಡಿ ಅವರಿಗೆ ಉದ್ಯೋಗ ನೀಡಲು ಮುಂದಾಗಿದ್ದೀರಿ ನಿಮ್ಮ ಈ ಉತ್ಸಾಹಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಕೆ ಜೆ ಜಾರ್ಜ್ ಹೇಳಿದರು. ನೀವು ಈಗಾಗಲೇ ಕೆಎಸ್‌ಆರ್‌ಟಿಸಿಯಲ್ಲಿ ಅನೇಕ ಮಂದಿಗೆ ತಾತ್ಕಾಲಿಕ ಚಾಲಕ ಕೆಲಸ ಕೊಡಿಸಿದ್ದೀರಿ ಎಂಬುದನ್ನು ತಿಳಿದುಕೊಂಡೆ ನಿಮ್ಮ ಕ್ಷೇತ್ರದ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ನಿಮ್ಮ ಮುತುವರ್ಜಿಗೆ ಶಹಬ್ಬಾಸ್ ಎಂದರು.

ವೇದಿಕೆಯಲ್ಲಿ ಕೆಪಿಟಿಸಿಎಲ್ ಎಂ ಡಿ ಪಂಕಜ ಕುಮಾರ್ ಪಾಂಡೆ, ಮೆಸ್ಕಾಂ ಎಂ ಡಿ ಪದ್ಮಾವತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here