ಪುತ್ತೂರು : ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕ್ಷೇತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಫೆ.5ರಂದು ಭೇಟಿ ನೀಡಿದರು.ಇದೇ ಸಂದರ್ಭದಲ್ಲಿ ಪಾಲ್ತಾಡಿ ಗ್ರಾಮದಿಂದ ದೇವಸ್ಥಾನಕ್ಕೆ ಹೋಗುವ ರಸ್ತೆಗೆ 10 ಲಕ್ಷ ರೂ. ಅನುದಾನದಲ್ಲಿ ನಡೆಯಲಿರುವ ಅಭಿವೃದ್ಧಿಗೆ ಶಿಲಾನ್ಯಾಸ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ನಳೀಲು ,ಸವಣೂರು ಗ್ರಾ.ಪಂ.ಸದಸ್ಯರಾದ ತಾರಾನಾಥ ಬೊಳಿಯಾಲ, ಭರತ್ ರೈ ಪಾಲ್ತಾಡಿ, ಚೇತನಾ ಪಾಲ್ತಾಡಿ, ಕೊಳ್ತಿಗೆ ಗ್ರಾ.ಪಂ.ಸದಸ್ಯೆ ಶುಭಲತಾ ಜೆ.ರೈ ,ದೇವಸ್ಥಾನದ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ರೈ ನಳೀಲು, ಕಾರ್ಯದರ್ಶಿ ಸತೀಶ್ ರೈ ನಳೀಲು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ಚಂದ್ರ ರೈ ನಳೀಲು,ಉಪಾಧ್ಯಕ್ಷರಾದ ಸಂಜೀವ ಗೌಡ ಪಾಲ್ತಾಡಿ,ಸದಸ್ಯರಾದ ಸುಬ್ರಾಯ ಗೌಡ, ಗುತ್ತಿಗೆದಾರರಾದ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರುಗುತ್ತು, ಸ್ವಾಗತ ಸಮಿತಿ ಸಂಚಾಲಕ ಸುನಿಲ್ ರೈ ಪಾಲ್ತಾಡು,ಆಮಂತ್ರಣಾ ವಿತರಣಾ ಸಮಿತಿ ಸಂಚಾಲಕ ಸುಂದರ ಪೂಜಾರಿ ಮಣಿಕ್ಕರ,ಅತಿಥಿ ಸತ್ಕಾರ ಸಮಿತಿಯ ರಾಮಣ್ಣ ರೈ ಬಾಕಿಜಾಲು,ಶ್ರೀಧರ ಗೌಡ ಅಂಗಡಿಹಿತ್ಲು,ಹೊರೆಕಾಣಿಕೆ ಸಮಿತಿಯ ತಾರನಾಥ ಬೊಳಿಯಾಲ,ಜಗನ್ನಾಥ ರೈ ಮಣಿಕ್ಕರ,ಪ್ರಚಾರ ಸಮಿತಿಯ ಸುಧಾಕರ ರೈ ಹೊಸಮನೆ,ಉಗ್ರಾಣ ಸಮಿತಿ ಸಹ ಸಂಚಾಲಕ ಉಮೇಶ್ ನಾಯ್ಕ ಮರುವೇಲು,ರಮಾನಾಥ ಬೊಳಿಯಾಲ,ಕಾರ್ಯಾಲಯ ಸಮಿತಿಯ ಅಶಿತ್ ಶೆಟ್ಟಿ ಉಬರಡ್ಕ,ಸ್ವಚತಾ ಸಮಿತಿ ಉದಯ ಗೌಡ,ಲೀಲಾ ಮಾಧವ,ಸ್ವಯಂ ಸೇವಕ ಸಮಿತಿಯ ವಿದ್ಯಾಧರ ಗೌಡ,ಅಮರನಾಥ ರೈ ಬಾಕಿಜಾಲು,ಅಲಂಕಾರ ಸಮಿತಿಯ ಜಯರಾಮ ರೈ ಬರೆಮನೆ,ವಿನೋದ್ ರೈ ಪಿಲಿಬಾಂಜಾರ,ಸೇಸಪ್ಪ ರೈ ಮಣಿಕ್ಕರ,ಜಗನ್ನಾಥ ಗೌಡ ಪೂಜಾರಿಮನೆ,ಮೋಹನ್ ಗೌಡ,ಜಯರಾಮ ಗೌಡ ದೊಡ್ಡಮನೆ,ಶಶಿ ಕುಮಾರ್ ಬಿ.ಎನ್,ಸತ್ಯಕುಮಾರ್ ಮೊದಲಾದವರಿದ್ದರು.
ಪ್ರವೀಣ್ ಚೆನ್ನಾವರ ಸ್ವಾಗತಿಸಿ, ವಂದಿಸಿದರು.