ರೋಟರಿ ಈಸ್ಟ್ ನಿಂದ ಪುರಭವನದಲ್ಲಿ ತುಳು ನಾಟಕ “ಮೈತಿದಿ”

0

ಪುತ್ತೂರು: ರೋಟರಿ  ಪುತ್ತೂರು ಈಸ್ಟ್ ನ ಆಶ್ರಯದಲ್ಲಿ ಕ್ಲಬ್ ನಿಧಿ ಸಂಚಯನ ಕಾರ್ಯಕ್ರಮದಡಿಯಲ್ಲಿ ತುಳು ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ ವಿಜಯಕುಮಾರ್ ಕೊಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿದ ಹೊಸ ನಾಟಕ ” ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಮೈತಿದಿ” ಫೆ.6 ರಂದು ಸಂಜೆ ಪುರಭವನದಲ್ಲಿ ಜರಗಿತು.

ಕ್ಲಬ್ ಸದಸ್ಯ, ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರವರು ನಾಟಕವನ್ನು ದೀಪ ಬೆಳಗಿಸಿ ಉದ್ಘಾಟಿಸಿ ನಾಟಕ ತಂಡಕ್ಕೆ ಶುಭ ಹಾರೈಸಿದರು.

ರೋಟರಿ ಜಿಲ್ಲಾ ಕೋ-ಟ್ರೈನರ್ ಶೇಖರ್ ಶೆಟ್ಟಿ ಮಾತನಾಡಿ, ನಾಟಕ ಹಾಗೂ ಜೀವನ ಪರಸ್ಪರ ಹೋಲಿಕೆ ಇದೆ. ಜೀವನ ಒಂದು ನಾಟಕ. ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ನಾಟಕ ಆಡುವುದು ಸರ್ವೇಸಾಮಾನ್ಯ. ಈ ನಾಟಕವು ನಾನ್-ವೆಜ್ ಡಯಲಾಗ್ ಗಳನ್ನು ಹೊಂದದೆ ಸಂಪೂರ್ಣ ಸಸ್ಯಹಾರಿ ನಾಟಕ ಇದಾಗಿದ್ದು ನಾಟಕದಲ್ಲಿನ ಮಹತ್ವದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ.

ಕ್ಲಬ್ ಸಮಾಜದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಇದಕ್ಕೆ ಪೂರಕವಾಗಿ ಕ್ಲಬ್ ನ ಅಭಿವೃದ್ಧಿ ಯೋಜನೆಗಳಿಗೆ ಈ ನಾಟಕವನ್ನು ಏರ್ಪಡಿಸಿದೆ ಎಂದರು.

ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ್ ರೈ, ರೋಟರಿ ಪಬ್ಲಿಕ್ ಇಮೇಜ್ ಚೇರ್ಮನ್, ಎಕೆಎಸ್ ಕೆ.ವಿಶ್ವಾಸ್ ಶೆಣೈ, ಕ್ಲಬ್ ನಿಕಟಪೂರ್ವ ಅಧ್ಯಕ್ಷ ಶರತ್ ಕುಮಾರ್ ರೈ, ಕಾರ್ಯದರ್ಶಿ ರವಿಕುಮಾರ್ ರೈ, ನಾಟಕದ ನಿರ್ವಾಹಕ ಚಂದ್ರಶೇಖರ್ ಕೊಡಿಯಾಲ್ ಬೈಲ್ ಉಪಸ್ಥಿತರಿದ್ದರು. ಡಾ.ರವಿಪ್ರಕಾಶ್ ಪ್ರಾರ್ಥಿಸಿದರು. ಕ್ಲಬ್ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಸ್ವಾಗತಿಸಿ,

ಕೋಶಾಧಿಕಾರಿ ಶಶಿಧರ್ ಕಿನ್ನಿಮಜಲು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here