ಪುತ್ತೂರು: ನಿಡ್ಪಳ್ಳಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಕೆವೈಸಿ ಅಪ್‌ಡೇಟ್ ಹೆಸರಲ್ಲಿ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಸೈಬರ್ ಕ್ರೈಂ ಮತ್ತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಂಚಕರ ಜಾಲಕ್ಕೆ ಬಿದ್ದು ನಿಡ್ಪಳ್ಳಿಯ ಚಂದ್ರಶೇಖರ್ ಭಟ್ ಎಂಬವರು ತನ್ನ ಬ್ಯಾಂಕ್ ಖಾತೆಯಿಂದ ರೂ.1,73,೦೦೦ ಕಳೆದು ಕೊಂಡಿದ್ದಾರೆ. ವಂಚಕರು ಚಂದ್ರಶೇಖರ್ ಭಟ್ ಅವರ ಮೊಬೈಲ್‌ಗೆ ಕೆವೈಸಿ ಅಪ್ಡೇಟ್ ಮಾಡುವ ಕುರಿತು ಸಂದೇಶ ಕಳುಹಿಸಿದ್ದರು. ಸದ್ರಿ ಸಂದೇಶದಲ್ಲಿ ತಿಳಿಸಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ, ನಿಮ್ಮ ಖಾತೆ ಬ್ಲಾಕ್ ಆಗಿದೆ OTP ನೀಡುವಂತೆ ತಿಳಿಸಿದ ಮೇರೆಗೆ ಚಂದ್ರಶೇಖರ್ ಭಟ್ ಅವರು OTP ನೀಡಿದ್ದರು. ಹಾಗೆ OTP ನೀಡಿದ ಬಳಿಕ ಚಂದ್ರಶೇಖರ್ ಭಟ್ ಅವರ ಬ್ಯಾಂಕ್ ಖಾತೆಯಿಂದ ರೂ.1,73,೦೦೦ಗಳು ಖಡಿತಗೊಂಡಿದೆ. ತಾನು ವಂಚನೆಗೊಳಗಾಗಿರುವ ಕುರಿತು ಅರಿವಿಗೆ ಬಂದ ಚಂದ್ರಶೇಖರ್ ಅವರು ಸೈಬರ್ ಕ್ರೈಂ ಮತ್ತು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.