ಪುತ್ತೂರು: ಪಡೀಲ್ ವಿಜಯನಗರ ಬಡಾವಣೆ ಶಾಂಭವಿ ನಾಯ್ಕ್ ಅವರ ಮನೆಯು ನಿನ್ನೆ ರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಮನೆಯ ತುಂಬಾ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ದುರ್ಘಟನೆಯಿಂದ ಅಡಿಕೆ ಹಾಗೂ ಇನ್ನಿತರ ವಸ್ತುಗಳು ಸುಟ್ಟುಹೋಗಿದ್ದು, ಅಪಾರ ನಷ್ಟವಾಗಿದೆ.
ಈ ಸಂದರ್ಭದಲ್ಲಿ ಮೆಸ್ಕಾಂ ಅಧಿಕಾರಿಗೆ ಕರೆ ಮಾಡಿ ತಕ್ಷಣ ಸ್ಥಳಕ್ಕೆ ಬರುವಂತೆ ಸೂಚಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಯುವರಾಜ್ ಪೆರಿಯಾತ್ತೋಡಿ, ನಗರಸಭಾ ಸದಸ್ಯೆ ಮೋಹಿನಿ ವಿಶ್ವನಾಥ ಬನ್ನೂರು, ರಾಮ್ ದಾಸ್ ಹಾರಾಡಿ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.