ಫೆ.11ರಂದು ಕಡಬದಲ್ಲಿ ಸ್ಪಂದನಾ ಸಮುದಾಯ ಸಹಕಾರಿ ಸಂಘ ಶುಭಾರಂಭ

0

ಕಡಬ: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಅನುಗ್ರಹ ಕಾಂಪ್ಲೆಕ್ಸ್‌ನಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಪ್ರವರ್ತಿತ ಸ್ಪಂದನಾ ಸಮುದಾಯ ಸಹಕಾರ ಸಂಘ ಶುಭಾರಂಭಗೊಳ್ಳಲಿದ್ದು, ಇದರ ಸಭಾ ಕಾರ್ಯಕ್ರಮವು ಕಡಬ ಒಕ್ಕಲಿಗ ಸಮುದಾಯ ಭವನದಲ್ಲಿ ಫೆ.11ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೇಶವ ಅಮೈ ಕಲಾಯಿಗುತ್ತು ಹೇಳಿದ್ದಾರೆ.

ಅವರು ಫೆ.8ರಂದು ಕಡಬದ ಸ್ಪಂದನಾ ಸಮುದಾಯ ಸಹಕಾರಿ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇವಲ ಗೌಡ ಸಮುದಾಯದ ಏಳಿಗೆ ಅಲ್ಲದೆ ಇತರ ಸಮುದಾಯದೊಂದಿಗೆ ವ್ಯವಹಾರ, ಪರಸ್ಪರ ಸಹಕಾರ ಇಟ್ಟುಕೊಳ್ಳುವ ಇರಾದೆಯಿಂದ ಸಮುದಾಯದ ವತಿಯಿಂದ ಸಹಕಾರಿ ಸಂಘವನ್ನು ಸ್ಥಾಪಿಸಲು ಉದ್ದೇಶಿಸಿ 2023ರ ಸಪ್ಟೆಂಬರ್ ನಲ್ಲಿ ಕೆಲಸ ಪ್ರಾರಂಭಿಸಿ ಎರಡು ತಿಂಗಳಿನಲ್ಲಿ ಸಹಕಾರ ನಿಬಂಧನೆಗಳ ಪ್ರಕಾರ ಠೇವಣಿ ಹಾಗೂ ಸದಸ್ವತ್ವ ನೊಂದಾಣಿ ಕಾರ್ಯಗಳನ್ನು ಪೂರ್ಣಗೊಳಿಸಲಾಯಿತು. ಬಳಿಕ ಡಿ.26ರಂದು ಆದಿ ಚುಂಚನಗಿರಿ ಮಠದ ನಿರ್ಮಾಲನಂದನಾಥ ಸ್ವಾಮೀಜಿ ಹಾಗೂ ಕಾವೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿಯವರು ಉದ್ಘಾಟನೆ ನಡೆಸಿದ್ದರು. ತಾಲೂಕು ಕೇಂದ್ರ ಕಡಬದ ಜನರ ಆರ್ಥಿಕ ಸಬಲೀಕರಣ, ಸಮುದಾಯದ ಸ್ವಸಹಾಯ ಮತ್ತು ಸೇವೆಯ ಧ್ಯೇಯವನ್ನು ಹೊಂದಿರುವ ಸಹಕಾರಿ ಸಂಘದ ಶುಭಾರಂಭ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಮಂಗಳೂರು, ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್, ಕಡಬ ತಾಲೂಕು ತಹಶೀಲ್ದಾರ್ ಪ್ರಭಾಕರ ಖಜೂರೆ, ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ ಇ, ಕರ್ನಾಟಕ ರಾಜ್ಯ ಕೆಪಿಸಿಸಿ ಸದಸ್ಯ ಕೃಷ್ಣಪ್ಪ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಶೆಟ್ಟಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಕಡಬ ಶಾಖೆಯ ವ್ಯವಸ್ಥಾಪಕಿ ಅಮಿತಾ ಶೆಟ್ಟಿ, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ, ಕಡಬ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸಲಹಾ ಸಮಿತಿ ಅಧ್ಯಕ್ಷ ಸುದರ್ಶನ ಗೌಡ ಕೋಡಿಂಬಾಳ, ವೆಂಕಟರಮಣ ಕ್ರೆಡಿಟ್ ಕೋ ಅಪರೇಷವ್ ಸೊಸೈಟಿ ಅಧಕ್ಷ ಗಣೇಶ್ ಕೈಕುರೆ ಮೊದಲಾವರು ಉಪಸ್ಥಿತರಿರಲಿದ್ದಾರೆ ಎಂದು ಕೇಶವ ಅಮೈ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಚೇತನ್ ಆನೆಗುಂಡಿ, ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ, ನಿರ್ದೇಶಕರಾದ ನಾಗೇಶ್ ಕೆಡೆಂಜಿ, ಗೀತಾ ಅಮೈ ಕೇವಳ, ಗೋಪಾಲ ಎಣ್ಣೆಮಜಲು, ಹಿರಿಯಣ್ಣ ಗೌಡ ಎ. ಆಶಾ ತಿಮ್ಮಪ್ಪ ಗೌಡ, ಲೋಕೇಶ್ ಬಿ.ಎನ್.ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here