ನೆಹರೂನಗರ: ಕೋಕೋ ಗುರು ಅಡಿಗೆಮನೆ ಹೋಟೇಲ್‌ ನಲ್ಲಿ ಕಳವು ಪ್ರಕರಣ- ಆರೋಪಿ ವಶಕ್ಕೆ

0

ಪುತ್ತೂರು: ಪುತ್ತೂರಿನ ನೆಹರೂನಗರದಲ್ಲಿ ಕಾರ್ಯಾಚರಿಸುತ್ತಿರುವ ಕೋಕೋ ಗುರು ಅಡಿಗೆಮನೆ ಹೋಟೇಲ್ ವೈಟರ್‌ ಆಗಿ ಕೆಲಸ ಮಾಡುತ್ತಿದ್ದ ಗಣೇಶ್‌ ಎಂಬಾತ 69,000 ರೂ. ಮತ್ತು ಮೊಬೈಲ್ನೊಂದಿಗೆ ಪರಾರಿಯಾದ ಘಟನೆ ಫೆ.11ರಂದು ಮಧ್ಯಾಹ್ನ ನಡೆದಿದ್ದು ಘಟನೆ ನಡೆದ 24 ಗಂಟೆಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕ್ಯಾಶ್ಯರನ್ನು ಊಟ ಮಾಡಿಬರುವಂತೆ ತಿಳಿಸಿದ ಸಪ್ಲೈಯರ್‌ ತಾನು ಕ್ಯಾಶ್‌ ಕೌಂಟರ್‌ ನ್ನು ನೋಡಿಕೊಳ್ಳುವುದಾಗಿ ಹೇಳಿ ಕ್ಯಾಶ್ಯರನ್ನು ಊಟಕ್ಕೆ ಕಳುಹಿಸಿದ್ದಾನೆ. ಕ್ಯಾಶ್ಯರ್‌ ಊಟಕ್ಕೆ ತೆರಳುತ್ತಿದ್ದಂತೆ ಕ್ಯಾಶ್‌ ಡ್ರವರ್‌ ನಲ್ಲಿದ್ದ ರೂ. 69,000 ಹಾಗೂ ಮೊಬೈಲ್‌ ಎತ್ತಿಕೊಂಡು ಪರಾರಿಯಾಗಿದ್ದ ಆರೋಪಿ.

LEAVE A REPLY

Please enter your comment!
Please enter your name here