ಪುತ್ತೂರು: ಪುತ್ತೂರು ಹೈಟೆಕ್ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬೇಕರಿ, ಆನ್ ಲೈನ್ ಸಂಸ್ಥೆಯಿಂದ ಲಕ್ಷಾಂತರ ರೂಪಾಯಿ ಕಳವಾಗಿರುವ ಘಟನೆ ಫೆ.10ರ ತಡರಾತ್ರಿ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.
ಬಸ್ ನಿಲ್ದಾಣದ ಒಳಗಿನ ಬೇಕರಿಯೊಂದರ ರೋಲಿಂಗ್ ಶೆಟರ್ ನ ಬೀಗ ಒಡೆದು ಒಳಗೆ ಹೋಗಿ ಸಾವಿರಾರು ರೂಪಾಯಿ ಕಳವು ಆಗಿದೆ. ಅದೇ ರೀತಿ ಪುತ್ತೂರು ಒನ್ ಎಂಬ ಸಂಸ್ಥೆಯಿಂದ ಲಕ್ಷಾಂತರ ರೂಪಾಯಿ ನಗದು ಕಳವಾಗಿದೆ ಎಂದು ತಿಳಿದು ಬಂದಿದೆ. ಕಳವು ಮಾಡಿರುವ ವ್ಯಕ್ತಿ ಒಬ್ಬರೆ ಆಗಿದ್ದು ಈ ಕುರಿತು ಸಿ ಸಿ ಕ್ಯಾಮರದಲ್ಲಿ ದಾಖಲಾಗಿದೆ.