ಪುತ್ತೂರು:ನೆಹರೂನಗರದಲ್ಲಿ ಕಾರ್ಯಾಚರಿಸುತ್ತಿರುವ ಕೋಕೋ ಗುರು ಅಡುಗೆಮನೆಯಲ್ಲಿ ಕ್ಯಾಶ್ ಕೌಂಟರ್‌ನಿಂದ ಸಾವಿರಾರು ರೂ. ನಗದು ಮತ್ತು ಮೊಬೈಲ್ ಕಳವು ಮಾಡಿರುವ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಸಂಸ್ಥೆಯಲ್ಲಿ ವೈಟರ್ ಆಗಿ ಕೆಲಸ ಮಾಡಿಕೊಂಡಿದ್ದ ಗಣೇಶ್ ಬಂಧಿತ ಆರೋಪಿ.ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.ಆರೋಪಿ ಗಣೇಶ್ ಅವರು ಹೊಟೇಲ್ ಕ್ಯಾಶಿಯರನ್ನು ಊಟ ಮಾಡಿಬರುವಂತೆ ತಿಳಿಸಿ, ತಾನು ಕ್ಯಾಶ್ ಕೌಂಟರ್‌ನಲ್ಲಿ ಕೂತು ಡ್ರವರ್‌ನಲ್ಲಿದ್ದ ರೂ.೬೯,೦೦೦ ಹಾಗೂ ಮೊಬೈಲ್ ಎತ್ತಿಕೊಂಡು ಪರಾರಿಯಾಗಿದ್ದರು ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು.