ಕೆಯ್ಯೂರು: ಸ್ನಾನಗೃಹದಲ್ಲಿ ಕುಸಿದು ಮಹಿಳೆ ಮೃತ್ಯು

0

ಪುತ್ತೂರು:ಕೆಯ್ಯೂರು ಗ್ರಾಮದ ದೇವಿನಗರ ಜನತಾ ಕಾಲೋನಿ ನಿವಾಸಿ ಅಣ್ಣು ಎಂಬವರ ಪತ್ನಿ ಲಲಿತಾ(42ವ.)ರವರು ಸ್ನಾನದ ಕೊಠಡಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಬಗ್ಗೆ ಫೆ.12 ರಂದು ವರದಿಯಾಗಿದೆ.

ಲಲಿತಾ ಅವರು ಸಂಜೆ ಸ್ನಾನಕ್ಕೆಂದು ಸ್ನಾನದ ಕೋಣೆಗೆ ಹೋದವರು ಬಾರದೇ ಇರುವುದನ್ನು ನೋಡಿದಾಗ ಲಲಿತಾ ಅವರು ರಕ್ತ ಸಿಕ್ತವಾಗಿ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಘಟನೆ ಕುರಿತು ಲಲಿತಾ ಅವರ ಸಹೋದರ ಐತ್ತಪ್ಪ ಎಂಬವರ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here