ಉಪ್ಪಿನಂಗಡಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಹೊರಟಿರುವ ‘ಸಂವಿಧಾನ ಜಾಗೃತಿ ಜಾಥಾ-2024’ 34 ನೆಕ್ಕಿಲಾಡಿ ಗ್ರಾ.ಪಂ.ಗೆ ಫೆ.13ರಂದು ಆಗಮಿಸಿತು. ಕುಮಾರಧಾರ ನದಿಯ ಸೇತುವೆಯ ಮೇಲೆ ರಥವನ್ನು ಸ್ವಾಗತಿಸಿ, ನೆಕ್ಕಿಲಾಡಿ ಗ್ರಾಮದ ಸಹಸ್ರ ಸಂಜೀವಿನಿ ಒಕ್ಕೂಟದ ಸದಸ್ಯರು ಪೂರ್ಣ ಕುಂಭ ಸ್ವಾಗತದೊಂದಿಗೆ ರಥವನ್ನು ಬರಮಾಡಿಕೊಂಡರು.
ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಜಾತ ರೈ ಅಲಿಮಾರ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕನ್ನು ನಮಗೆ ಸಂವಿಧಾನ ಕಲ್ಪಿಸಿದೆ. ಇದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಗಿರೀಶ್ ನಾವಡ ಮತ್ತು ಅವರ ಕಲಾ ತಂಡದವರಿಂದ ಸಂವಿಧಾನದ ಬಗ್ಗೆ ಅರಿವು, ಜಾಗೃತಿಯನ್ನು ಮೂಡಿಸಲಾಯಿತು. ನೆಕ್ಕಿಲಾಡಿ ಹಾಗೂ ಶಾಂತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಕೃಷ್ಣ ಬಿ., ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕಿ ಸವಿತಾ, ಸಿಬ್ಬಂದಿ ಲತೇಶ್ ಕುಮಾರ್, ಮಲ್ಲಿಕಾ, 34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ತುಳಸಿ, ಗೀತಾ, ವೇದಾವತಿ, ಸ್ವಪ್ನ, ವಿಜಯಕುಮಾರ್, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, 34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್, ಪ್ರಧಾನ ಕಾರ್ಯದರ್ಶಿ ಕಲಂದರ್ ಶಾಫಿ, ಬೂತ್ ಅಧ್ಯಕ್ಷ ಅಬ್ದುಲ್ ಖಾದರ್, ನೆಕ್ಕಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಕಾವೇರಿ, ಶಾಂತಿನಗರ ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಆನ್ಸಿ ಮೆನೇಜಸ್, ಗ್ರಾಮ ಆಡಳಿತಾಧಿಕಾರಿ ಜಂಗಪ್ಪ, ಗ್ರಾಮ ಸಹಾಯಕ ದಿವಾಕರ, ಪ್ರಮುಖರಾದ ಶಬೀರ್ ಅಹ್ಮದ್ ಕೆಎಸ್ಆರ್ಟಿಸಿ, ಸೇಸಪ್ಪ ನೆಕ್ಕಿಲು, ಸ್ವಚ್ಛ ಭೂಮಿ ರೀಸೋರ್ಸ್ ಸಂಸ್ಥೆಯ ಸತೀಶ್, ರವಿ, ಗ್ರಾ.ಪಂ. ಸಿಬ್ಬಂದಿ ನಿತಿನ್, ಪ್ರಮೀಳಾ, ವಸಂತಿ, ಸುಶೀಲಾ, ಚಿತ್ರಾವತಿ, ಸಾರಿಕಾ, ಸೇಸಪ್ಪ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಡಿ. ಬಂಗೇರ ಸ್ವಾಗತಿಸಿದರು. ಲೆಕ್ಕ ಸಹಾಯಕ ದೇವಪ್ಪ ನಾಯ್ಕ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.