ಹಿನ್ನೀರಿನಿಂದಾಗಿ ಮಖೆ ಜಾತ್ರೋತ್ಸವದಲ್ಲಿ ಬದಲಾವಣೆ-ಭಕ್ತರಿಂದ ಸಾಮೂಹಿಕ ಪ್ರಾರ್ಥನೆ

0

ಉಪ್ಪಿನಂಗಡಿ: ಅಣೆಕಟ್ಟಿನ ಹಿನ್ನೀರಿನಿಂದಾಗಿ ಈ ಬಾರಿಯ ಉಪ್ಪಿನಂಗಡಿ ಶ್ರೀ ಸಹಸ್ರ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಜಾತ್ರೋತ್ಸವದಲ್ಲಿ ಆಗುವ ಮಹತ್ತರ ಬದಲಾವಣೆಗಳ ನಿಮಿತ್ತ ಶುಕ್ರವಾರದಂದು ಶ್ರೀ ದೇವಳದಲ್ಲಿ ಶ್ರೀ ದೇವರಿಗೆ ಅನುಜ್ಞಾ ಕಲಶಾಭಿಷೇಕ ನೆರವೇರಿಸಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.


ಕೇತ್ರದ ತಂತ್ರಿಗಳಾದ ಕಾರ್ತಿಕ್ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರಿಗೆ ಅನುಜ್ಞಾ ಕಲಶಾಭಿಷೇಕವನ್ನು ನೆರವೇರಿಸಲಾಯಿತು. ಹಾಗೂ ಸಾಮೂಹಿಕ ಪ್ರಾರ್ಥನೆಯನ್ನೂ ಮಾಡಲಾಯಿತು. ನದಿಯ ಗರ್ಭದಲ್ಲಿ ಇರುವ ಉದ್ಭವ ಲಿಂಗಕ್ಕೆ ಈ ಬಾರಿ ಯಾವುದೇ ಬಗೆಯ ಪೂಜೆ, ಪುನಸ್ಕಾರಗಳು ನಡೆಸಲು ಅಸಾಧ್ಯವಾಗಿರುವ ಬಗ್ಗೆ, ಅವಭೃತ ಸ್ನಾನ ಸಹಿತ ಹಲವಾರು ವಿಧಿ ವಿಧಾನಗಳಲ್ಲಿನ ವ್ಯತ್ಯಯದ ಬಗ್ಗೆ ಶ್ರೀ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.


ಈ ಸಂಧರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ, ಅರ್ಚಕ ಮಧುಸೂಧನ ಭಟ್ , ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಆಡಳಿತಾಧಿಕಾರಿಯ ಪರವಾಗಿ ಆಗಮಿಸಿದ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವಾಧ್ಯಕ್ಷ ಅಧ್ಯಕ್ಷ ಕರುಣಾಕರ ಸುವರ್ಣ, ಪ್ರಮುಖರಾದ ಕೆ. ರಾಧಾಕೃಷ್ಣ ನಾಕ್, ಡಾ. ರಾಜಾರಾಮ ಕೆ. ಬಿ., ಅರ್ತಿಲ ಕೃಷ್ಣ ರಾವ್, ಹರಿರಾಮಚಂದ್ರ, ರಾಮಚಂದ್ರ ಮಣಿಯಾಣಿ, ಸುಧಾಕರ ಶೆಟ್ಟಿ, ಚಂದಪ್ಪ ಮೂಲ್ಯ, ಕೆ. ಜಗದೀಶ್ ಶೆಟ್ಟಿ, ರೂಪೇಶ್ ರೈ ಅಲಿಮಾರ್, ವಿನಯಾ ರಾಜಾರಾಮ ರೈ, ಪೂರ್ಣಿಮಾ ಸುರೇಶ್ , ಮಂಜುಳಾ ಸೀತಾರಾಮ್ , ಕಿಶೋರ್ ಜೋಗಿ, ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಪದ್ಮನಾಭ ಕುಲಾಲ್, ದಿವಾಕರ ಗೌಡ, ಕೃಷ್ಣ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here