ಬೆಟ್ಟಂಪಾಡಿ: ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ 41 ನೇ ವಾರ್ಷಿಕೋತ್ಸವ ಮತ್ತು ನಗರ ಭಜನೆಯ ಮಂಗಲೋತ್ಸವವು ಫೆ. 14 ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ವೆಂಕಟ್ರಮಣ ಭಟ್ ರವರ ನೇತೃತ್ವದಲ್ಲಿ ಜರಗಿತು.
ಜ. 17 ರಂದು ಗುಂಡ್ಯಡ್ಕ ಶ್ರೀಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ಅಮುಣಿ ಗುಂಡ್ಯಡ್ಕರವರು ಶ್ರೀ ಕ್ಷೇತ್ರದಲ್ಲಿ ನಗರ ಭಜನೆಯನ್ನು ಉದ್ಘಾಟಿಸಿದ್ದರು. ಫೆ. 14 ರಂದು ನಡೆದ ವಾರ್ಷಿಕೋತ್ಸವವನ್ನು ಬೆಳಿಗ್ಗೆ ಪ್ರಗತಿಪರ ಕೃಷಿಕ ಗಣಪತಿ ಭಟ್ ಕೋನಡ್ಕರವರು ದೀಪಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ಭಜನಾ ಸಂಘದ ಗೌರವಾಧ್ಯಕ್ಷ ಶಿವಕುಮಾರ್ ಬಲ್ಲಾಳ್, ಅಧ್ಯಕ್ಷ ರಮೇಶ್ ಬಳ್ಳಿತ್ತಡ್ಡ, ಕಾರ್ಯದರ್ಶಿ ಉಚಿತ್ ಕುಮಾರ್ ಬದಿನಾರು, ಕೋಶಾಧಿಕಾರಿ ಶ್ರೀಹರಿ ಬೆಟ್ಟಂಪಾಡಿ, ಸಂಚಾಲಕ ಶೇಷನ್ ಪಾರ ಮತ್ತು ಸದಸ್ಯರು ಉಪಸ್ಥಿತರಿದ್ದರು. ಬಳಿಕ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಹಕರಿಸಿದ ಭಜನಾ ಮಂಡಳಿಗಳು
ನಗರ ಭಜನೆಯಲ್ಲಿ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಭಜನಾ ಸಂಘ, ಗುಮ್ಮಟೆಗದ್ದೆ ಶ್ರೀಕೃಷ್ಣ ಭಜನಾ ಮಂಡಳಿ, ಗುಂಡ್ಯಡ್ಕ ಶ್ರೀಕೃಷ್ಣ ಭಜನಾ ಮಂಡಳಿ, ಶ್ರೀಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ, ಶ್ರೀ ಭ್ರಮರಾಂಬಿಕಾ ಭಜನಾ ಮಂಡಳಿ ಬೆಟ್ಟಂಪಾಡಿ ಸಹಕರಿಸಿದರು.
ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ಬೆಟ್ಟಂಪಾಡಿ, ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬೆಟ್ಟಂಪಾಡಿ, ಶ್ರೀಕೃಷ್ಣ ಭಜನಾ ಮಂಡಳಿ ಗುಂಡ್ಯಡ್ಕ, ಶ್ರೀ ಭ್ರಮರಾಂಬಿಕಾ ಭಜನಾ ಮಂಡಳಿ ಬೆಟ್ಟಂಪಾಡಿ, ಶಬರಿ ಮಹಿಳಾ ಭಜನಾ ಮಂಡಳಿ ಶ್ರೀರಾಮನಗರ ರೆಂಜ, ಶ್ರೀ ಸಿದ್ದಿವಿನಾಯಕ ಮಹಿಳಾ ಭಜನಾ ಮಂಡಳಿ ವಿನಾಯಕನಗರ, ಶ್ರೀಕೃಷ್ಣ ಮಹಿಳಾ ಭಜನಾ ಮಂಡಳಿ ಗುಮ್ಮಟೆಗದ್ದೆ, ಶ್ರೀಕೃಷ್ಣ ಭಜನಾ ಮಂಡಳಿ ಗುಮ್ಮಟೆಗದ್ದೆ, ಶ್ರೀ ಅಯ್ಯಪ್ಪ ಭಜನಾ ಸಂಘ ಶ್ರೀರಾಮನಗರ, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ವಿನಾಯಕನಗರ, ಶ್ರೀ ಭಟ್ಟಿವಿನಾಯಕ ಭಜನಾ ಮಂಡಳಿ ಬಲ್ನಾಡು, ಶ್ರೀ ಶಾರದಾಂಬಾ ಭಜನಾ ಮಂಡಳಿ ಪುತ್ತೂರು, ಶ್ರೀ ಸಿದ್ಧಿವಿನಾಯಕ ಭಕ್ತವೃಂದ ಕುಂಞಿಮಲೆ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ, ಕೇಸರಿ ಕಲಾ ತಂಡ ಮಿತ್ತಡ್ಕ ಹಾಗೂ ಶ್ರೀ ಶಾಂತಾದುರ್ಗಾ ಕುಣಿತ ಭಜನಾ ತಂಡ ನಿಡ್ಪಳ್ಳಿ ಭಾಗವಹಿಸಿದರು.
ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಮಂಗಲೋತ್ಸವ ಜರಗಿತು.