ಪುತ್ತೂರು: ಶ್ರೀ ವಿಷ್ಣು ಬಯಲಾಟ ಸೇವಾ ಸಮಿತಿ ಇರ್ದೆ ಉಪ್ಪಳಿಗೆ ಇದರ ನೇತೃತ್ವದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಊರ ಹತ್ತು ಸಮಸ್ತರ ಸೇವಾರ್ಥವಾಗಿ 8ನೇ ವರ್ಷದ ‘ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟವು ಫೆ.15ರಂದು ಸಂಜೆ ಉಪ್ಪಳಿಗೆ ಶಾಲಾ ವಠಾರದಲ್ಲಿ ನಡೆಯಿತು.
ಅಪರಾಹ್ನ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಶ್ರೀ ದೇವಿಯ ವೈಭವದ ಶೋಭಾಯಾತ್ರೆ, ಸಂಜೆ ಚೌಕಿ ಪೂಜೆಯ ಬಳಿಕ ಯಕ್ಷಗಾನ ಬಯಲಾಟ ಪ್ರಾರಂಭಗೊಂಡಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ವಿವಿಧ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಂಘ-ಸಂಸ್ಥೆಗಳ ಮುಖಂಡರುಗಳು ಸೇರಿದಂತೆ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.