ಪುತ್ತೂರು:ಮೊಗೇರ ಸಂಘ ಪುತ್ತೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಹೋಟೆಲ್ ದ್ವಾರಕ ಇದರ ಸಭಾಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಸುಂದರ ಕೇಪುಳು, ಪ್ರ ಕಾರ್ಯದರ್ಶಿ ಯಾಗಿ ಮುಖೇಶ್ ಕೆಮ್ಮಿಂಜೆ, ಖಜಾಂಜಿಯಾಗಿ ರಾಘವ ಖಂಡಿಗ, ಸಂಘಟನಾ ಕಾರ್ಯದರ್ಶಿಯಾಗಿ ಲೋಕೇಶ್ ಭಂಡಾಡ್, ಉಪಾಧ್ಯಕ್ಷರುಗಳಾಗಿ ವಿಜಯ್ ಕುಮಾರ್, ವಿಜಯ ಲಕ್ಷ್ಮಿ ಜೊತೆ ಕಾರ್ಯದರ್ಶಿಗಳಾಗಿ ದಿನೇಶ್ ಬಪ್ಪಳಿಗೆ, ದಿನೇಶ್ ಕಜೆ, ಜೊತೆ ಸಂಘಟನಾ ಕಾರ್ಯದರ್ಶಿಗಳಾಗಿ ಸುಂದರ ಕೆಮ್ಮಿoಜೆ, ಬಾಬು ನೆಕ್ಕರೆ ಬೆಳ್ಳಿಪ್ಪಾಡಿ, ಚಂದ್ರ ಬೀರಿಗ, ಜೊತೆ ಖಜಾಂಜಿಯಾಗಿ ಶರತ್ ಕೆ ವಿ, ಗೌರವಾಧ್ಯಕ್ಷರಾಗಿ ಸದಾನಂದ ತೆಂಕಿಲ, ಗೌರವ ಸಲಹೆಗಾರರಾಗಿ ಮಣಿ ಬಪ್ಪಳಿಗೆ, ನಾರಾಯಣ ಫಾರೆಸ್ಟ್, ಚೋಮ ಸರ್ವೇ, ಬಾಬು ಕೂರ್ನಡ್ಕ, ಶ್ರೀಧರ ಕೇಪುಳುರವರು ಆಯ್ಕೆಯಾಗಿರುತ್ತಾರೆ.
ಮೊಗೇರ ಸಂಘ ಪುತ್ತೂರು ಇದರ ನೂತನ ಸಮಿತಿಯ ಅವದಿಯು 3 ವರ್ಷಕ್ಕೆ ನಿಗದಿಯಾಗಿರುತ್ತದೆ. ನೂತನ ಅಧ್ಯಕ್ಷರಾದ ಸುಂದರ ಕೇಪುಳು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಮುದಾಯದ ಮತ್ತು ಪದಾಧಿಕಾರಿಗಳ ಒಗ್ಗಟ್ಟಿನಿಂದ ಮತ್ತು ಕಠಿಣ ಪರಿಶ್ರಮದಿಂದ ಸಂಘಟನೆ ಬಲಿಷ್ಠ ಮತ್ತು ಸಮುದಾಯ ಅಭಿವೃದ್ಧಿ ಆಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಸದಸ್ಯರು ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಲೋಕೇಶ್ ಬಂಡಾಡ್ ಸ್ವಾಗತಿಸಿ, ಶರತ್ ಕೆ ವಿ ವಂದಿಸಿದರು. ಮುಖೇಶ್ ಕೆಮ್ಮಿಂಜೆ ಪ್ರಾಸ್ತಾವಿಕವಾಗಿ ಮಾತಾಡಿದರು. ಸದಾನಂದ ಮಾಸ್ಟರ್ ತೆಂಕಿಲ ಕಾರ್ಯಕ್ರಮ ನಡೆಸಿಕೊಟ್ಟರು.